free cancer treatment :  ಎಂಐಒ ಆಸ್ಪತ್ರೆಯಿಂದ ಕ್ಯಾನ್ಸರ್​ ರೋಗಿಗಳಿಗೆ ಸಿಹಿಸುದ್ದಿ | ಯಾರೆಲ್ಲಾ ಉಚಿತ ಚಿಕಿತ್ಸೆ ಪಡೆಯಬಹುದು

prathapa thirthahalli
Prathapa thirthahalli - content producer

free cancer treatment : ನೆರಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆರಗ ಸಮೀಪ ತುಡನಕಲ್ ನಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಗ್ರಾಮ ಪಂಚಾಯತ್ ಕೇಂದ್ರದಲ್ಲಿ ಮೊದಲ ಕ್ಯಾನ್ಸರ್ ಆಸ್ಪತ್ರೆಯೊಂದು ಸ್ಥಾಪನೆಯಾಗಿದೆ. ಮಂಗಳೂರು ಇನ್ಸಿಟ್ಯೂಟ್ ಆಫ್ ಅಂಕೋಲಾಜಿ ಆಸ್ಪತ್ರೆ ದೇಶದ ಅತ್ಯಂತ ವಿಶ್ವಾಸರ್ಹ ಕ್ಯಾನ್ಸರ್ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

free cancer treatment : ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸೆ

ಕಳೆದ 6 ತಿಂಗಳ ಹಿಂದೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಆರಂಭವಾಗಿರುವ ಈ ಸಂಸ್ಥೆ  ಬಿಪಿಎಲ್ ಹಾಗೂ ಆಯುಷ್ಮಾನ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನಿಡುವುದಾಗಿ ತಿಳಿಸಿದೆ.

- Advertisement -

ಈ ಕುರಿತು ನಿರ್ದೇಶಕ ಸುರೇಶ್ ರಾವ್ ಸುದ್ದಿಗಾರರೊಂದಿಗೆ ಮಾತನಾಡಿ ತೀರ್ಥಹಳ್ಳಿ ಪರಿಶುದ್ಧ ವಾತಾವರಣ ಹೊಂದಿದ್ದು. ಇಂಥಹ ಪ್ರದೇಶದಲ್ಲಿ ಕ್ಯಾನ್ಸರ್ ನಿರೀಕ್ಷೆ ಮೀರಿ ಕ್ಯಾನ್ಸರ್ ರೋಗ ಪತ್ತೆಯಾಗುತ್ತಿದೆ. ಅದರಲ್ಲೂ ಯಾವುದೇ ದುಶ್ಚಟ ಇಲ್ಲದ ಮಹಿಳೆಯರಲ್ಲಿಯೂ  ಸಹ ಕ್ಯಾನ್ಸರ್ ಕಂಡುಬರುತ್ತಿರುವುದು ಆತಂಕರಾರಿ ವಿಷಯವಾಗಿದೆ. ಈ ಕ್ಯಾನ್ಸರ್ ಎಂಬಾ ಮಹಾಮಾರಿ ಕಾಯಿಲೆಯನ್ನು  ಮೊದಲ ಹಾಗೂ ಎರಡನೇ ಹಂತದಲ್ಲಿ ಸಂಪೂರ್ಣ ವಾಸಿ ಮಾಡಬಹುದಾದ ಕಾಯಿಲೆ ನಿರ್ಲಕ್ಷ ಮಾಡಿ ಮೂರು ಹಾಗೂ ನಾಲ್ಕನೇ ಹಂತ ತಲುಪಿದರೆ ವಾಸಿ ಮಾಡುವುದು ಬಹಳ ಅಪರೂಪ ಎಂದು ಹೇಳಿದರು.

free cancer treatment :ಆಸರೆ ಯೋಜನೆ ಅಡಿ ಮೂರು ಲಕ್ಷದ ವರೆಗೆ ಉಚಿತ ಚಿಕಿತ್ಸೆ

ಆಸರೆ ಯೋಜನೆಯಡಿ ಒಂದು ವ್ಯಕ್ತಿಗೆ ದಿನಕ್ಕೆ ಒಂದು ರೂ ದೇಣಿಗೆ ನೀಡಿ ಹೆಸರು ನೋಂದಣಿ ಮಾಡಿಕೊಂಡರೆ ಮೂರು ಲಕ್ಷ ರೂ ಗಳ ವರೆಗೆ ಉಚಿತ ಚಿಕಿತ್ಸೆ ದೊರಕುತ್ತದೆ. ಅದೇ ರೀತಿ ಅಭಯ ಯೋಜನೆಯಡಿ ದಿನಕ್ಕೆ ಐದು ರೂ ನೀಡಿ ಹೆಸರು ನೋಂದಣಿ ಮಾಡಿಕೊಂಡರೆ 10 ಲಕ್ಷದ ತನಕ ಉಚಿತ ಚಿಕಿತ್ಸೆ ದೊರಕುತ್ತದೆ ಎಂದರು.

ಹಾಗಾಗಿ ಕ್ಯಾನ್ಸ‌ರ್ ರೋಗಿಗಳು ಭಯ ಪಡುವ ಅಗತ್ಯವಿಲ್ಲ ಉತ್ತಮ ಜೀವನ ಶೈಲಿಯಿಂದ ಕ್ಯಾನ್ಸರ್ ಬರದಂತೆ ನೋಡಿಕೊಳ್ಳಬಹುದು ಬಂದರೂ ಕೂಡ ತೀರಾ ತಡ ಮಾಡದೇ ಆಸ್ಪತ್ರೆಗೆ ಬಂದರೆ ಗುಣಪಡಿಸ ಬಹುದಾದ ಸಾಧ್ಯತೆ ಹೆಚ್ಚು ಎಂದರು.

 

Share This Article