Bhadravati news today : ಹುಷಾರ್​ ನಿಮ್ಮ ರೀಲ್ಸ್​ ಮೇಲಿರಲಿದೆ ಸೋಶಿಯಲ್ ಮೀಡಿಯಾ ಸೆಲ್​ ಕಣ್ಣು! ಭದ್ರಾವತಿಯಲ್ಲಿ fir

Malenadu Today

Bhadravati news today  : ಪಹಲ್ಗಾಮ್​ ಘಟನೆ ಬೆನ್ನಲ್ಲೆ ಆ ಘಟನೆಯನ್ನು ನೋಡಿ ಸಂತೋಷ ಪಡುವಂತಹ ಮತ್ತು ಅದನ್ನು ಬಳಸಿ ಪ್ರಚೋದಿಸುವಂತಹ ಸೋಶೀಯಲ್ ಮೀಡಿಯಾ ಪೋಸ್ಟ್​ಗಳು ಹಲವೆಡೆ ಕಂಡು ಬರುತ್ತಿದೆ. ಜೊತೆಯಲ್ಲಿಯೇ ಈ ರೀತಿಯ ಫೋಸ್ಟ್ ಗಳನ್ನು ಹಾಕುವವರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತಹ ಘಟನೆ ಭದ್ರಾವತಿಯಲ್ಲಿ ನಡೆದಿದೆ.

Bhadravati news today/ ಸುಮುಟೋ ಕೇಸ್ 

ಇಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ಪ್ರಚೋದನಕಾರಿ ವಿಡಿಯೋ ಮೂಲಕ ದ್ವೇಷ ಬಿತ್ತುವ ಪ್ರಯತ್ನದ ಆರೋಪಕ್ಕೆ ಸಂಬಂಧಿಸಿದಂತೆ ಸುಮುಟೋ ಕೇಸ್ ದಾಖಲಿಸಲಾಗಿದೆ. 

ಪೊಲೀಸರು ಸೋಶಿಯಲ್ ಮೀಡಿಯಾ ಮಾನಿಟಿರಿಂಗ್​ ಸೆಲ್​ ಮೂಲಕ ವಿವಿಧ ಸೋಶಿಯಲ್ ಮೀಡಿಯಾ ಅಕೌಂಟ್​ಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಪಾಕಿಸ್ತಾನದ ಹೆಸರು ಬಳಸಿಕೊಂಡು ಪ್ರಚೋದನಕಾರಿ ವಿಡಿಯೋ ಮಾಡಿರುವುದು ಕಾಣಿಸಿದೆ. 

ಈ ಸಂಬಂಧ ಬಿಎನ್​ಎಸ್​ ಆಕ್ಟ್​ ಅಡಿಯಲ್ಲಿ ಪಾಕಿಸ್ತಾನದ ಹೆಸರು ಬಳಸಿ ವಿಡಿಯೊ ಮಾಡಿ ಧಾರ್ಮಿಕವಾಗಿ ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತಲು ಯತ್ನಿಸಿದ ಆರೋಪದ ಅಡಿಯುಲ್ಲಿ ಇಬ್ಬರ ವಿರುದ್ಧ  ಸ್ವಯಂಪ್ರೇರಿತ ಅಂದರೆ ಸುಮುಟೋ ಕೇಸ್ ದಾಖಲಿಸಲಾಗಿದೆ. 

 

Share This Article