ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಬೈಪಾಸ್ ರಸ್ತೆಯಲ್ಲಿ ನಿನ್ನೆ ಕಾರೊಂದು ನಡು ರಸ್ತೆಯಲ್ಲಿಯೇ ಹೊತ್ತಿ ಉರಿದಿದೆ. ರಸ್ತೆಯಲ್ಲಿ ಹೋಗುತ್ತಿದ್ಧಾಗಲೇ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿ (Sudden Fire) ಭುಗಿಲೆದ್ದಿದೆ. ತಕ್ಷಣ ಕಾರಿನಲ್ಲಿದ್ದವರು ಅದರಿಂದ ಕೆಳಕ್ಕೆ ಇಳಿದಿದ್ದಾರೆ.
ಇನ್ನೂ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ತಕ್ಷಣವೇ ಫೋನಾಯಿಸಿ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ರು. ಅಷ್ಟರಲ್ಲಿ ಕಾರಿನ ಮುಂಭಾಗ ಬಹುತೇಕ ಸುಟ್ಟು ಕರಕಲಾಗಿತ್ತು. ಎಂಪಿಎಂ ಸಮೀಪ ಹಾದು ಹೋಗುವ ಬೈಪಾಸ್ ರಸ್ತೆಯಲ್ಲಿ ಘಟನೆ ಸಂಭವಿಸಿದ್ದು, ಹಳೇನಗರದ ನಿವಾಸಿ ಶ್ರೀಕಾಂತ್ ಎಂಬುವರಿಗೆ ಸೇರಿದ ಹೊಂಡಾ ಸಿಟಿ ಕಾರು ಅಗ್ನಿಗೆ ಆಹುತಿಯಾಗಿತ್ತು. ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.