ಅಪ್ಪ, ಮಗ, ಹೆಂಡ್ತಿ ಯಾರೇ ತಪ್ಪು ಮಾಡಿರಲಿ ಶಿಕ್ಷೆಯಾಗುತ್ತೆ! ಬಿಡ್ತಾರೇನ್ರಿ! ಗೃಹಸಚಿವರ ಮಹತ್ವದ ಹೇಳಿಕೆ! ಕಾಂಗ್ರೆಸ್​ ಬಂದ್ ಗೆ ನಕ್ಕ ಆರಗ ಜ್ಞಾನೆಂದ್ರ

Malenadu Today

ಯಾರು ಭ್ರಷ್ಟಾಚಾರದ ತಾಯಿಯೋ ಅವರೇ ಕರ್ನಾಟಕ ಬಂದ್ ಗೆ ಕರೆ ನೀಡುತ್ತಿದ್ದಾರೆ. ಅವರ ಕೇಂದ್ರ ನಾಯಕರು, ರಾಜ್ಯದ ನಾಯಕರು ಬಹಳಷ್ಟು ದಿನ ಜೈಲಿನಲ್ಲಿದ್ದರು, ಅವರು ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ ಅಂಥವರು ಈಗ ಭ್ರಷ್ಟಾಚಾರದ ವಿರುದ್ಧ ಬಂದ್ ಗೆ ಕರೆ ನೀಡುತ್ತಿದ್ದಾರೆ  ಎಂದರೇ ಅದಕ್ಕೆ ಏನು ಹೇಳಬೇಕು ಹೇಳಿ..ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿ ಕಾರಿದರು. 

READ | ಬಾಳೆಬರೆ ಘಾಟಿ ಬಂದ್​ ಆದಾಗಿನಿಂದ ಬಸ್​ಗೆ ಬರ! ಮಕ್ಕಳ ಎಕ್ಸಾಮ್​ ಟೈಂನಲ್ಲಿಯಾದ್ರೂ ಬಸ್​ ವ್ಯವಸ್ಥೆ ಮಾಡಿ! ಹೊಸನಗರದ ಜನರ ಬೇಡಿಕೆಗೆ ಸ್ಪಂದಿಸುತ್ತಾ ಆಡಳಿತ ವ್ಯವಸ್ಥೆ

ತೀರ್ಥಹಳ್ಳಿಯಲ್ಲಿ  ಮಾತನಾಡಿದ ಗೃಹಸಚಿವರು ನಮ್ಮ ಸರ್ಕಾರ ಭ್ರಷ್ಟಾಚಾರಿಗಳ ಪರವಾಗಿಲ್ಲ. ಯಾರೇ ಇರಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಲೋಕಾಯುಕ್ತವನ್ನು ಸಿದ್ದರಾಮಯ್ಯನವರ ಕಾಲದಲ್ಲಿ ಕುತ್ತಿಗೆ ಹಿಚುಕಿ ಇಟ್ಟಿದ್ದರು. ಯಾಕೆಂದರೆ ಅವರ ಮೇಲೆ 69 ಕೇಸ್ ಇತ್ತು ಹಾಗಾಗಿ ಲೋಕಾಯುಕ್ತವನ್ನು ಮುಗಿಸಿ ಎಸಿಬಿ ಮಾಡಿದರು. ನಾವು ಕೋರ್ಟ್ ಆದೇಶದ ಬಳಿಕ ಲೋಕಾಯುಕ್ತವನ್ನು ಗಟ್ಟಿ ಮಾಡಿದ್ದೇವೆ ಎಂದರು.

READ | ರಾಗಿಗುಡ್ಡದ ಬ್ರಹ್ಮ, ವಿಷ್ಣು, ಮಹೇಶ್ವರ ದೇವಸ್ಥಾನದ ರಥಕ್ಕೆ ಪೆಟ್ರೋಲ್ ಸುರಿದು ಬೆಂಕಿ! ಕಿಡಿಗೇಡಿಗಳ ಕೃತ್ಯ! ಕೇಸ್ ದಾಖಲು

ಪೊಲೀಸ್ ಇಲಾಖೆಗೆ ಅವರು ಕೇಳಿದ ಹಾಗೆ ಒಳ್ಳೊಳ್ಳೆ ಆಫೀಸರ್ ಗಳನ್ನು ಕೊಟ್ಟಿದ್ದೇವೆ. ಲೋಕಾಯುಕ್ತ ಚೆನ್ನಾಗಿದ್ದರೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗುತ್ತೆ ಎನ್ನುವ ನಂಬಿಕೆ ಇದೆ. ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ರೀತಿಯಲ್ಲಿ ಪಾರದರ್ಶಕ ಕೆಲಸವನ್ನು ಲೋಕಾಯುಕ್ತ ಮಾಡುತ್ತಿದೆ. ಸರ್ಕಾರ ಇದರಲ್ಲಿ ಪ್ರವೇಶ ಮಾಡಿಲ್ಲ, ಸರ್ಕಾರದ ಹಸ್ತ ಕ್ಷೇಪ ಇಲ್ಲ ಎಂದರು.

ಮಾಡಾಳ್ ವಿರೂಪಾಕ್ಷಪ್ಪನವರ ಬಂಧನ ಇನ್ನು ಆಗಿಲ್ಲ ಎಂಬ ಪ್ರೆಶ್ನೆಗೆ ಅವರನ್ನು ಸುಮ್ಮನೆ ಬಿಡ್ತಾರಾ ? ಸರ್ಕಾರ ಅವರ ಬೆಂಬಲಕ್ಕೆ ನಿಂತಿಲ್ಲ ಹಾಗೇನಾದರೂ ಆಗಿದ್ದರೆ ಮಗ ಅರೆಸ್ಟ್ ಆಗ್ತಾ ಇರಲಿಲ್ಲ. ವಿಚಾರಣೆ ನೆಡೆಯುತ್ತಿದೆ. ಅಪ್ಪ ಮಗ ಅಥವಾ ಇನ್ಯಾರೆ ಇರಲಿ ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದಾರೆ, ಅವರು ಮಾಡಿರುವ ಆಸ್ತಿ ಸರಿ ಇದೆಯೋ ಇಲ್ಲವೋ ಗೊತ್ತಾಗುತ್ತೆ. ಏನು ಬೇಕಾದರೂ ಶಿಕ್ಷೆ ಆಗಲಿ ನಾವು ಮುಕ್ತರಾಗಿದ್ದೇವೆ ಎಂದರು.

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!

Share This Article