elephant news today : ಸಲಗ ಕಾವಲಿಗೆ ಸಿದ್ದಾಪುರಕ್ಕೆ ಹೊರಟ ಸಕ್ರೆಬೈಲು ಆನೆಗಳು

prathapa thirthahalli
Prathapa thirthahalli - content producer

elephant news today ಕಳೆದ ನಾಲ್ಕು ದಿನಗಳಿಂದ ತೀರ್ಥಹಳ್ಳಿ ಭಾಗದಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಾ ಓಡಾಡುತ್ತಿರುವ ರೇಡಿಯೊ ಕಾಲರ್ ಅಳವಡಿಸಿದ ಕಾಡಾನೆ ಹೊಸ ಹೆಜ್ಜೆ ಹಾಕುತ್ತಾ, ಮಲೆನಾಡು ದಾಟಿ ಕರಾವಳಿಯ ಗಡಿ ಭಾಗವನ್ನು ಪ್ರವೇಶಿಸಿದೆ. ಜಿಪಿಎಸ್ ಲೊಕೇಷನ್ ನಲ್ಲಿ ಸಧ್ಯಕ್ಕೆ ಸಿದ್ದಾಪುರ ಗ್ರಾಮದ ಕಾಡಿನ ಪರಿಸರ ತೋರಿಸುತ್ತಿದೆ. ಕಾಡಾನೆಯ ನಿರಂತರ ಓಡಾಟದಿಂದ ಮಲೆನಾಡು ಜನರು ಹೈರಾಣಾಗಿದ್ದಾರೆ. ಈಗ ಕರಾವಳಿ ಭಾಗ ವ್ರವೇಶಿಸಿದ್ದು ಕಾಡಾನೆ ಸಂಚರಿಸುವ ಮಾರ್ಗದ ಗ್ರಾಮಗಳಲ್ಲಿ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕಾಡಾನೆ ಸನಿಹವಿರುವ ಗ್ರಾಮಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರೈತರು ಹೊಲಗದ್ದೆಗಳಿಗೆ ತೆರಳುವ ಮುನ್ನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

elephant news today  ಕಾಡಾನೆ ಮೇಲೆ ಹದ್ದಿನ ಕಣ್ಣಿಡಲು ಸಕ್ರೆಬೈಲಿಂದ ಹೊರಟ ಸಾಕಾನೆಗಳು

ಇನ್ನು ರೇಡಿಯೊ ಕಾಲರ್ ಅಳವಡಿಸಿರುವ ಕಾಡಾನೆಯ ವಿಚಾರದಲ್ಲಿ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸಲು ಅರಣ್ಯ ಇಲಾಖೆ ಮುಂದಾಗಿದೆ. ಕಾಡಾನೆ ಸಂಚರಿಸುವ ಸ್ಥಳದ ಸನಿಹದಲ್ಲಿಯೇ ಅದರ ಮೇಲೆ ನಿಗಾ ಇಡಲು ಸಕ್ರೆಬೈಲಿನಿಂದ ಬಾಲಣ್ಣ ಸೋಮಣ್ಣ ಮತ್ತು ಬಹದ್ದೂರ್ ಕುಮ್ಕಿ ಆನೆಗಳನ್ನು ನೆನ್ನೆ ಸಂಜೆ ಲಾರಿಯ ಮೂಲಕ ಸಾಗಿಸಲಾಗಿದೆ. 

ಸಿದ್ದಾಪುರ ಭಾಗದಲ್ಲಿ ಬಿಡಾರ ಸ್ಥಾಪನೆ

ಸಧ್ಯಕ್ಕೆ ಕಾಡಾನೆ ಸಿದ್ದಾಪುರ ಭಾಗದ ಕಾಡಿನ ಪರಿಸರದಲ್ಲಿದೆ. ಅದು ಹೊಲಗದ್ದೆ ಇಲ್ಲವೇ ಮಾನಸ ಸಂಪರ್ಕಕ್ಕೆ ಬರಬಹುದಾದ ಸ್ಥಳಗಳನ್ನು ತಪ್ಪಿಸಲು ಸಿದ್ದಾಪುರ ಕಾಡಿನ ಪರಿಸರದಲ್ಲಿ ಬಿಡಾರ ಸ್ಥಾಪಿಸಲು ಚಿಂಚಿಸಲಾಗಿದೆ. ಕಾಡಾನೆ ಏನಾದ್ರೂ ಹ್ಯಾಬಿಟೇಟ್ ಕಡೆ ಬರುವ ಸಾಧ್ಯತೆ ಇದ್ದರೆ ಅದನ್ನು ಸುರಕ್ಷಿತ ಸ್ಥಳಕ್ಕೆ ಹಿಮ್ಮೆಟಿಸಲಾಗುವುದು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕ.ಟಿ ಹನುಮಂತಪ್ಪ ನವರು ಝಿ ಕನ್ನಡ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ ಬಿಟೇಟ್ ಕಡೆ ಬರುವ ಸಾಧ್ಯತೆ ಇದ್ದರೆ ಅದನ್ನು ಸುರಕ್ಷಿತ ಸ್ಥಳಕ್ಕೆ ಹಿಮ್ಮೆಟಿಸಲಾಗುವುದು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ ಹನುಮಂತಪ್ಪ ನವರು ಝಿ ಕನ್ನಡ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.ನಾನು ಕೂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಕಾಡಾನೆ ಸೇಫ್ ಝೋನ್ ಗೆ ಹೋಗುವವರೆಗೂ ಕುಮ್ಕಿ ಆನೆಗಳು ನಿರಂತರ ಕಾರ್ಯಾಚರಣೆಯಲ್ಲಿರುತ್ತವೆ. ಕಾಡಾನೆ ಅಪಾಯದ ಮಾರ್ಗದಲ್ಲಿ ಸಂಚರಿಸಿದರೆ, ಅದನ್ನು ಸುರಕ್ಷಿತ ಸ್ಥಳಕ್ಕೆ ಡ್ರೈವ್ ಮಾಡುವ ಕಾರ್ಯಕ್ಕಾಗಿಯೇ ಕಾಡಿನ ಪರಿಸರದಲ್ಲಿ ಸ್ಟೇಷನ್ ಮಾಡುತ್ತಿದ್ದೇವೆ ಎಂದು ಹನುಮಂತಪ್ಪನವರು ತಿಳಿಸಿದ್ದಾರೆ. 

elephant news today  ಕಾಡಾನೆ ಹಿಡಿಯುವ ಪ್ರಸ್ಥಾಪ ಸಧ್ಯಕ್ಕಿಲ್ಲ.

ಕಾಡಾನೆಯನ್ನು ಹಿಡಿಯುವ ಪ್ರಸ್ಥಾಪ ಸಧ್ಯಕ್ಕಿಲ್ಲ. ನಮ್ಮದು ಸೇಫ್ ಪ್ಯಾಸೆಜ್ ಇಸ್ ಫಸ್ಟ್ ಪಾಯಿಂಟ್..ಆನೆ ರಿಸ್ಕಿ ಪ್ಲೇಸ್ ಗೆ ಬಂದರೆ ಅನಿವಾರ್ಯವಾದಲ್ಲಿ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಿಸಿಎಪ್ ಹನುಮಂತಪ್ಪನವರು ಹೇಳಿದ್ದಾರೆ.

Share This Article