ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಇವತ್ತು ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಲೆನಾಡು ಟುಡೆ ತಂಡಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ (kimmane rathnakar shivamogga) ರವರು, ಎಕ್ಸ್ಕ್ಲ್ಯೂಸಿವ್ ಆಗಿ ಪ್ರತಿಕ್ರಿಯೆ ನೀಡಿದ್ಧಾರೆ.
ಶಿವಮೊಗ್ಗದಿಂದಲಾ ಕಿಚ್ಚ ಸುದೀಪ್ ಚುನಾವಣಾ ಸ್ಪರ್ದೆ? ಚಿತ್ರದುರ್ಗದಿಂದನಾ? ಏನಿದು ವರದಿ?
ಮಲೆನಾಡು ಟುಡೆ ತಂಡದ ಪ್ರತಿನಿಧಿ ಕಿಮ್ಮನೆ ರತ್ನಾಕರ್ರವರನ್ನು ಸಂಪರ್ಕಿಸಿದಾಗ ಮಾಜಿ ಸಚಿವರು ಪರಿಶೀಲನೆಯ ವಿಚಾರದ ಎಳೇಯನ್ನು ಬಿಚ್ಚಿಟ್ಟಿದ್ದಾರೆ. ನಾವು ಕಚೇರಿಯನ್ನು ಒಬ್ಬ ವ್ಯಕ್ತಿಯ ಬಳಿಯಲ್ಲಿ ಒಪ್ಪಂದ ಮಾಡಿಕೊಂಡು ತೆಗೆದುಕೊಂಡಿದ್ದೇವೆ. 10 ಲಕ್ಷ ರೂಪಾಯಿ ಅಡ್ವಾನ್ಸ್ ಹಾಗೂ ತಿಂಗಳ ಒಂದು ಸಾವಿರ ಬಾಡಿಗೆಯಂತೆ ಪಡೆದಿದ್ದೇವೆ. ಅದಕ್ಕೆ ಪೂರಕವಾದ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ನಮಗೆ ಕಚೇರಿ ಬಾಡಿಗೆ ನೀಡಿದ್ದ ವ್ಯಕ್ತಿಯು ಈಗಿಲ್ಲ. ಅವರು, ತೀರ್ಥಹಳ್ಳಿಯ ಶಾರೀಖ್ ಗೆ ರಿಲೇಟೆಡ್ ಆಗಿದ್ದಾರೆ. ನಮಗೆ ಕಚೇರಿ ನೀಡಿರುವ ವ್ಯಕ್ತಿಯ ಜೊತೆಗೆ ನಮ್ಮ ವಹಿವಾಟು ನಡೆದಿದ್ದು, ಇದಕ್ಕೂ ಆರೋಪಿತ ವ್ಯಕ್ತಿಗೂ ಸಂಬಂಧವಿಲ್ಲ.
ಈ ಸಂಬಂಧ ಇವತ್ತು ಬಂದಿದ್ದ ಅಧಿಕಾರಿಗಳು ಯಾರ ಬಳಿಯಲ್ಲಿ ಕಚೇರಿಯ ಬಾಡಿಗೆ ಪಡೆದಿದ್ದೀರಿ ಎಂದು ಮಾಹಿತಿ ಕೇಳಿದ್ದರು. ಅವರು ಕೇಳಿದ ಸೂಕ್ತ ದಾಖಲೆಗಳನ್ನು ನೀಡಿದ್ದೇವೆ. ಅವರು ನಮ್ಮ ಅಡ್ವಾನ್ಸ್ ಹಣವನ್ನು ವಾಪಸ್ ಕೊಟ್ಟರೆ, ನಾವು ಕಚೇರಿಯನ್ನು ತೆರವುಗೊಳಿಸುತ್ತೇವೆ ಎಂದಿದ್ದಾರೆ.
ಅಲ್ಲದೆ ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ.ಇಲ್ಲಿ ನಮ್ಮ ಗೃಹಸಚಿವರಿಗೆ ಯಾವ ಲಿಂಕ್ ಇದೆಯೋ ನಮಗೆ ಗೊತ್ತಿಲ್ಲ. ನಮಗೆ ಕೆಲವರು ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಹೇಳಿದ್ರು, ಆದರೆ ಇಡಿಯವರು ಬಂದರೆ ನನ್ನ ಬಳಿ ಏನು ಸಹ ಸಿಗೋದಿಲ್ಲ. ಅವರೇ ನಮಗೆ ದುಡ್ಡು ಕೊಟ್ಟು ಹೋಗಬೇಕು. ಕನಿಷ್ಟ ಹತ್ತು ಸಾವಿರವೂ ನನ್ನ ಬಳಿ ಸಿಗೋದಿಲ್ಲ ಎಂದಿದ್ಧಾರೆ.
