ಅಡವಿಟ್ಟ ಮೊಬೈಲ್ ಬಿಡಿಸಿಕೊಳ್ಳಲು ನಡೆದಿತ್ತು ಜೋಡಿ ಕೊಲೆ! 20 ಬಂಗಾರಕ್ಕೆ ಕತ್ತು ಸೀಳಿದ್ದ ಆರೋಪಿ ‘ಅಮ್ಮ’ನ ಸೆಂಟಿಮೆಂಟ್​ಗೆ ಸತ್ಯಹೇಳಿದ್ದ! ಜೆಪಿ ಫ್ಲ್ಯಾಶ್ ಬ್ಯಾಕ್

KARNATAKA NEWS/ ONLINE / Malenadu today/ May 24, 2023 SHIVAMOGGA NEWS

ಅಲ್ಲಿ ಅಡವಿಟ್ಟ ಮೊಬೈಲ್ ಬಿಡಿಸಿಕೊಳ್ಳಲು ಪಾತಕಿಗಳು ಮಾಡಿದ್ದರು ಜೋಡಿ ಕೊಲೆ, ಕೇವಲ ಚಿನ್ನಾಭರಣಕ್ಕಾಗಿ ದಂಪತಿ ಕತ್ತು ಸೀಳಿದ್ದ ದುಷ್ಕರ್ಮಿಗಳು… ಪೊಲೀಸ್ ಟಾರ್ಚರ್ ಗೆ  ಬಾಯಿ ಬಿಡದ ಆರೋಪಿ ತಾಯಿ ಸೆಂಟಿಮೆಂಟಿಗೆ ಪಿದಾ ಆಗಿ ಸತ್ಯ ಕಕ್ಕಿದ್ದರು..ಸ್ನೇಹಿತರೆ ಇದು ಇವತ್ತಿನ ಪ್ಲ್ಯಾಶ್ ಬ್ಯಾಕ್​ನಲ್ಲಿ,, ನಾನು ನಿಮ್ಮ ಜೆಪಿ! 

ಘಟನೆ ! 

28-01-14 ಆ ರಬ್ಬರ್ ತೋಟದಲ್ಲಿ ನಡೆದ  ಜೋಡಿ ಕೊಲೆಯನ್ನು ನೋಡಿ ಶಿವಮೊಗ್ಗ ಜಿಲ್ಲೆ ಜನರು ಅಕ್ಷರ ಸಹ  ಬೆಚ್ಚಿಬಿದ್ದಿದ್ರು. ತೋಟ ಕಾಯುತ್ತಿದ್ದ ದಂಪತಿಯನ್ನೇ ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿಗಳು ಅರೆಸ್ಟ್ ಆಗೋವರೆಗೂ, ಒಂಟಿ ಮನೆಗಳಲ್ಲಿ ವಾಸಿಸುತ್ತಿದ್ದ ಜನರು ನಿದ್ದೆಗೆಟ್ಟಿದ್ರು

ಚಿನ್ನಾಭರಣಕ್ಕಾಗಿ ಈ ಕೊಲೆ ನಡೆದಿದೆ ಎಂಬುದು ಗೊತ್ತಾಗ್ತಿದ್ದ ಹಾಗೆ ಜನರು ಮತ್ತಷ್ಟು ತತ್ತರಿಸಿದ್ದರು. ಎಲ್ಲೆಲ್ಲೂ ಜೋಡಿ ಕೊಲೆಯದ್ದೆ ಚರ್ಚೆ ನಡೆಯುತ್ತಿತ್ತು. ಅಂತಹ ವಿಕೃತ ಕೊಲೆಗಾರ ತಮ್ಮ ನಡುವೆ ಓಡಾಡುತ್ತಿರಬಹುದು ಎಂಬ ಆತಂಕದಲ್ಲಿ ಕತ್ತಲಲ್ಲಿ ಓಡಾಡುವುದು ಸಹ ಕಡಿಮೆಯಾಗಿತ್ತು.  

ಹಿನ್ನಲೆ! 

ಯಾವುದೇ ಅಪರಾಧ ಪ್ರಕರಣ ನಡೆದಾಗ,ಆರೋಪಿಗಳ ಸ್ವಲ್ಪವೂ ಕ್ಲೂ ಸಿಗದೆ,ಅನಾಥವಾಗೋ ಅದೆಷ್ಟೋ ಕೊಲೆ ಕೇಸುಗಳು ನಮ್ಮ ಕಣ್ಣಮುಂದಿದೆ. ಇದಕ್ಕೆ ಅಪ್ಪಅಮ್ಮ ಇಲ್ಲದ ಕೇಸು ಅಂತಾನೇ ಪೊಲೀಸ್ ಭಾಷೆಯಲ್ಲಿ ಹೇಳ್ತಾರೆ .ಯಾಕೆಂದ್ರೆ  ಇಂತಹ ಪ್ರಕರಣಗಳಲ್ಲಿ ಅಪರಾಧ ಎಸಗಿರೋರ ಸ್ವಲ್ಪ ಸುಳಿವು ಇರೋದಿಲ್ಲ.ಯಾರ ಮೇಲೂ ಅನುಮಾನ ಪಡುವ ರೀತಿಯಲ್ಲಿಯು ಇರುವುದಿಲ್ಲ. ಬಂದ ಕಾಲಕ್ಕೆ ನೋಡಿಕೊಳ್ಳೋಣ ಎಂಬಂತೆ ಈ ಕೇಸ್ ಪೈಲ್ ಗಳು ರ್ಯಾಕ್ ಸೇರಿಕೊಂಡಿರ್ತವೆ.

ಜೋಡಿ ಕೊಲೆ!

ಅಂದು ರಬ್ಬರ್​ ತೋಟದಲ್ಲಿ ನಡೆದಿದ್ದ,ಜೋಡಿ ಕೊಲೆ ಪ್ರಕರಣವೂ ಹಾಗೆ ಅಡ್ರೆಸ್​ ಇಲ್ಲದೆ ಮೂಲೆಗೆ ಸೇರಬೇಕಿತ್ತು. ಆದರೆ ಶಿವಮೊಗ್ಗ ಗ್ರಾಮಾಂತರ ಠಾಣೆ  ಅಂದಿನ  ಇನ್ಸ್ ಪೆಕ್ಟರ್ ಆಗಿದ್ದ ಕುಮಾರಸ್ವಾಮಿ ಆ್ಯಂಡ್ ಟೀಂ ಇಡೀ ಪ್ರಕರಣವನ್ನು ರೋಚಕವಾಗಿ ಭೇದಿಸಿತ್ತು.  

ಬದುಕನರಸಿ ಕೇರಳದಿಂದ ಕೂಲಿಗೆ ಬಂದಿದ್ದ ದಂಪತಿ.

ಶಿವಮೊಗ್ಗದಿಂದ 26 ಕಿಲೋಮೀಟರ್ ದೂರದಲ್ಲಿರುವ ಉಂಬ್ಳೆಬೈಲು ಗ್ರಾಮದ ಹೊರವಲಯದಲ್ಲಿರುವ ರಬ್ಬರ್ ತೋಟ. ಅಲ್ಲಿ ಇಬ್ಬರ ಕೊಲೆಯಾಗಿದೆ. ಚಿನ್ನಾಭರಣ ಲೂಟಿಯಾಗಿದೆ! ಕ್ಲೂ ಸಿಗುತ್ತಿಲ್ಲ. ಕೊಲೆ ಬೀಭತ್ಸವಾಗಿತ್ತು. ಸತ್ತವರು ಗೊತ್ತಿದ್ದವರೇ ಆಗಿದ್ದರು, ಗ್ರಾಮಸ್ಥರು ಅವರನ್ನ ಕುರಿಯನ್ ಹಾಗೂ ಮೇರಿ ಎಂದು ಗುರುತಿಸಿದ್ದರು. 

ಆರೋಪಿಗಳಿಗಾಗಿ ಬಲೆಬೀಸಿದ  ಪೊಲೀಸ್ರು.

ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ  ಕೊಲೆಯಾದ ಸ್ಥಳದಲ್ಲಿ  ರಕ್ತ ಹೆಪ್ಪುಗಟ್ಟಿರೋದು  ಕಾಣಿಸುತ್ತೆ. ಅದರಿಂದ ಅವರು, ಈ ಕೊಲೆ ನಡೆದ ಬಹಳ ಹೊತ್ತಾಗಿದೆ ಎಂಬುದನ್ನ ಖಾತರಿಪಡಿಸಿಕೊಳ್ಳುತ್ತಾರೆ. ಇನ್ನೂ ಕೊಲೆಯ  ಸ್ವರೂಪವನ್ನ ಗಮನಿಸಿದ ಪೊಲೀಸ್ ಟೀಂ ಹೊರ ಜಿಲ್ಲೆಗಳು ಕ್ರೈ ಲಿಸ್ಟ್ ತರಿಸಿ ಈ ರೀತಿಯಲ್ಲಿ ಕೃತ್ಯವೆಸಗಬಹುದಾದ ಆರೋಪಿಗಳನ್ನ ಹುಡುಕಾಡುತ್ತಾರೆ. ಎಲ್ಲಿಯು ಯಾವುದೇ ಸುಳಿವು ಸಿಗದೇ ಹೋದಾಗ, ಘಟನೆ ನಡೆದ ಊರಿನ ಸುತ್ತಲು ಕಣ್ಣಿಡಲು ಆರಂಭಿಸುತ್ತಾರೆ. 

ಉಂಬ್ಳೆಬೈಲು ಗ್ರಾಮದಲ್ಲಿಯೇ ಮಪ್ತಿಯಲ್ಲಿ ಬೀಡುಬಿಟ್ಟು ಮಾಹಿತಿ ಕಲೆಹಾಕಲು ಆರಂಭಿಸುತ್ತಾರೆ.  ಕೊಲೆ ನಡೆದ ನಂತರ ಗ್ರಾಮದಲ್ಲಿ ಯಾರು ಊರು ಬಿಟ್ಟಿದ್ದಾರೆ. ಯಾರು ಮೊಬೈಲ್ ಬಳಸುವುದನ್ನು ನಿಲ್ಸಿದ್ದಾರೆ ,ಗ್ರಾಮದ ಮರಿರೌಡಿಗಳು ಪುಡಿರೌಡಿಗಳು. ಯಾರು ಎಂಬೆಲ್ಲದ ಮಾಹಿತಿಗಳನ್ನ ಕಲೆಹಾಕುತ್ತಾರೆ. ಈ ವೇಳೆ ಕೆಲವರು ತಮಗಾದವರ ಹೆಸರನ್ನ ಹೇಳಿದ್ದು ಸಹ ನಡೆಯುತ್ತದೆ. ಆದರೆ ಪೊಲೀಸರಿಗೆ ಅಂತಹವರು ಬೇಕಿರೋದಿಲ್ಲ.ಹಾಗಾಗಿ ಮಪ್ತಿ ಎನ್​ಕ್ವೈರಿ ಮುಂದುವರಿಯುತ್ತೆ. 

 

ಸಿಕ್ಕೆಬಿಡ್ತು ಸುಳಿವು! 

ಸಾರ್ ದಂಪತಿ ಕೊಲೆಯಾದ ನಂತರ, ಇಬ್ಬರು ಯುವಕರು ಊರು ತುಂಬೆಲ್ಲಾ ಕೊಲೆಗಾರನ್ನ ಹಿಡಿಯೋಕೆ ಸಾಧ್ಯನಾ ಎಂದು ವಿಚಾರಿಸ್ತಿದ್ದಾರೆ! ಅವರ ಬಗ್ಗೆ ಯಾರಿಗೂ ಒಳ್ಳೆ ಅಭಿಪ್ರಾಯ ಇಲ್ಲ ಅಂತಾ ಯಾರೋ ಒಂದಿಬ್ಬರು ಪೊಲೀಸರಿಗೆ ಹೇಳುತ್ತಾರೆ. ಪೊಲೀಸರಿಗೆ ಬೇಕಾದ ವಿಷಯ ಸಿಕ್ಕಿತ್ತು! ತಕ್ಷಣವೇ  ಆದಿ (ಹೆಸರು ಬದಲಾಯಿಸಲಾಗಿದೆ)  ಎಂಬಾತನನ್ನ ಎತ್ತಾಕಿಕೊಂಡು ಬರುತ್ತಾರೆ ಪೊಲೀಸರು..

ಪೊಲೀಸ್ ಭಾಷೆ ಮತ್ತು ಕೆಲಸಕ್ಕೆ ಬಾಯಿ ಬಿಡದ ಆರೋಪಿ.

ಆರೋಪಿಯು ಸಾಮಾನ್ಯದವ ಆಗಿರಲಿಲ್ಲ. ಪೊಲೀಸರ ಪೆಟ್ಟು ಎಷ್ಟೆ ಬಿದ್ರೂ ಬಾಯಿ ಬಿಟ್ಟಿರಲಿಲ್ಲ. ಅಸಲಿಗೆ ಬಿಎ ಒದುತ್ತಿದ್ದ ಆದಿ, ಗಾಂಜಾ ಅಡಿಕ್ಟ್ ಆಗಿದ್ದ, ಈತನಿಗೆ ಮೊಬೈಲ್ ಖಯಾಲಿ ಅತಿಯಾಗುವಷ್ಟಿತ್ತು. ಆದರೆ ಅದನ್ನ 1500 ರೂಪಾಯಿಗೆ ಅಡ್ಡವಿಟ್ಟಿದ್ದ. ಈ ಬಗ್ಗೆ ವಿಚಾರಿಸಿದ ಪೊಲೀಸರು ಅಡ್ಡವಿಟ್ಟ ಮೊಬೈಲ್ ಹಾಗೂ ಅಡವಿರಿಸಿಕೊಂಡಿದ್ದ ವ್ಯಕ್ತಿಯನ್ನ ಕರೆದು ವಿಚಾರಿಸಿದ್ದರು. ಅಲ್ಲದೆ ಮೊಬೈಲ್​ನಲ್ಲಿ ನೋಡಿದಾಗ ಆದಿ ಗಾಂಜಾ ಅಮಲಲ್ಲಿ ಇರುವುದು ಗೊತ್ತಾಗಿತ್ತು.ಮೇಲಾಗಿ ಆತ ಕೂಡ ಏನೂ ಬಾಯಿಬಿಟ್ಟಿರಲಿಲ್ಲ. ಹೀಗಾಗಿ ಆತನನ್ನ ಬಿಟ್ಟು ಕಳುಹಿಸಿದ್ದರು. 

ಇತ್ತ ಬಿಟ್ರು! ಆ ಕಡೆ ಹಿಡ್ಕೊಂಡ್ರು

ಹಾಗಿದ್ರೂ ಪೊಲೀಸರಿಗೆ ಅನುಮಾನ ಹೋಗಿರಲಿಲ್ಲ. ಯಾವುದಕ್ಕೂ ಇರಲಿ ಅಂತಾ ಆದಿ ಮನೆಗೆ ಎಂಟ್ರಿಕೊಟ್ಟಿದ್ರು. ರಾತ್ರಿ ಪೊಲೀಸರ ಎಂಟ್ರಿಯ ಬಗ್ಗೆ ಗೊತ್ತಿಲ್ಲದ ಆದಿ ಅಲ್ಲಿ ಯಡವಟ್ಟು ಮಾಡಿಕೊಂಡಿದ್ದ. 

ಸರಿರಾತ್ರಿಯಲ್ಲಿ ಪೊಲೀಸರು ಗೃಹಪ್ರವೇಶ ಮಾಡಿದ್ದರು. ಅಷ್ಟೊತ್ತಿಗೆ ಬಚ್ಚಲ ಒಲೆ ಉರಿಯುತ್ತಿತ್ತು. ಯಾಕೋ ಈ ರಾತ್ರಿಯಲ್ಲಿ ನೀರೊಲೆಗೆ ಬೆಂಕಿ ಎಂದು ಆದಿಯನ್ನ ವಿಚಾರಿಸಿದ್ದರು. ಆತನ ಉತ್ತರಕ್ಕೂ ಕಾಯದ ಪೊಲೀಸ್ ಅಧಿಕಾರಿಗಳು ಅಡುಗೆ ಮನೆಯೊಳಗೆ ಹೋಗ್ತಾರೆ, ಅಲ್ಲಿ ಬಟ್ಟೆ ಸುಟ್ಟಿರೋದು ಗೊತ್ತಾಗುತ್ತೆ.. ಅಷ್ಟೆ ಖತಂ ಆದಿ ಅರೆಸ್ಟ್ ಆಗಿದ್ದ. 

ವಿಚಾರಣೆಯಲ್ಲಿ ಆದಿ ಹೇಳಿದ್ದೇನು? 

ಕುರಿಯನ್ ದಂಪತಿಯನ್ನು ಕೊಲೆ ಮಾಡಿದ್ದು ಯಾರು ಹೇಳೋ..,ಅಂತಾ ವರ್ಕೌಟ್ ಮಾಡ್ತಾರೆ, ಆದ್ರೆ ಆದಿ ಬಾಯ್ಬಿಡೋದಿಲ್ಲ . ಆಗ ಪೊಲೀಸರು  ಮದರ್ ಸೆಂಟಿಮೆಂಟ್ ಅಸ್ತ್ರ ಪ್ರಯೋಗಿಸ್ತಾರೆ.ನಿನ್ನ ತಾಯಿ ನಿನಗೋಸ್ಕರ ಎಷ್ಟೆಲ್ಲಾ ಕಷ್ಟಪಡ್ತಾದಳಲ್ಲೋ,,ನೀನು ತಪ್ಪು ಒಪ್ಕೊಂಡ್ರೆ ನಿನ್ನನ್ನು ಕ್ಷಮಿಸ್ತಿನಿ ಅಂತಾ ಕೂಡ ಹೇಳಿದ್ದಾಳಲ್ಲೋ ಎನ್ನುತ್ತಾರೆ. ಆದಿಗೆ ಏನನ್ನಿಸಿತೋ ಏನೋ ಎಲ್ಲವನ್ನು ಹೇಳಿಬಿಟ್ಟಿದ್ದ. 

ನಡೆದಿದ್ದೇನು?

ಗಾಂಜಾ ಅಡಿಕ್ಟ್ ಆಗಿದ್ದ ಆದಿಗೆ  ಮೊಬೈಲ್ ಖಯಾಲಿ ಹೆಚ್ಚಿತ್ತು. ಈತನ ಜೊತೆ ಇನ್ನೊಬ್ಬ ಸೇರಿಕೊಂಡಿದ್ದ ಆದರ್ಶ (ಹೆಸರು ಬದಲಾಯಿಸಲಾಗಿದೆ) ಮರಳು ಲೋಡ್ ಹೊಡೆಯುವ ಕೆಲಸ ಮಾಡ್ತಿದ್ದ ಆದರ್ಶ ನನ್ನ ಸಹ ಪೊಲೀಸರು ಲಿಪ್ಟ್ ಮಾಡಿದ್ದರು. ಇಬ್ಬರನ್ನು ಬೆನ್ನು ಬೆನ್ನಿಗೆ ನಿಲ್ಲಿಸಿ ವಿಚಾರಣೆ ನಡೆಸಿದಾಗ,   

23 ರ ರಾತ್ರಿ  ಆದಿ ಹಾಗೂ ಆದರ್ಶ, ಗಾಂಜಾಹೊಡೆದು ಘಟನೆ ನಡೆದ ಸ್ಥಳಕ್ಕೆ ಬಂದಿದ್ದರು. ಅವರಿಗೆ ಅಲ್ಲಿದ್ದ ದಂಪತಿ ಬಳಿ ಸ್ವಲ್ಪ ಚಿನ್ನ ಇರೋದು ಗೊತ್ತಿತ್ತು. ಹಾಗಾಗಿ ಸ್ಕೆಚ್​ ಹಾಕಿ ತೋಟದ ಮನೆಗೆ ಬರುವಾಗ, ನಾಯಿ ಬೊಗಳುತ್ತದೆ. ಹೀಗಾಗಿ ತಕ್ಷಣವೇ ಆದಿ ಹಾಗೂ ಆಕಾಶ್​ ಮನೆಯೊಳಗೆ ನುಗ್ಗಿ ಚಿನ್ನ ನೀಡುವಂತೆ ಬೆದರಿಸಿದ್ದಾರೆ. ದಂಪತಿ ನಿರಾಕರಿಸಿದಾಗ ಅವರ ಕತ್ತು ಸೀಳಿದ್ದಾರೆ,.   ,20 ಗ್ರಾಂ ತೂಕದ ಬಂಗಾರಕ್ಕಾಗಿ ಇಬ್ಬರು ಸೇರಿ ಹತ್ಯೆ ಮಾಡಿದ್ದರು.  

 

 

Leave a Comment