ಎಂಟು ದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ಹಿನ್ನೆಲೆ ಪರ್ಯಾಯ ಮಾರ್ಗ ಸೂಚಿಸಿದ ಜಿಲ್ಲಾಡಳಿತ! ಶಿವಮೊಗ್ಗ-ಚಿತ್ರದುರ್ಗ!

The district administration suggested an alternative route for eight days of work on the Shimoga-Chitradurga highway! ಎಂಟು ದಿನ ಶಿವಮೊಗ್ಗ-ಚಿತ್ರದುರ್ಗ ಹೆದ್ದಾರಿಯಲ್ಲಿ ಕಾಮಗಾರಿ ಹಿನ್ನೆಲೆ ಪರ್ಯಾಯ ಮಾರ್ಗ ಸೂಚಿಸಿದ ಜಿಲ್ಲಾಡಳಿತ!

ಎಂಟು ದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ಹಿನ್ನೆಲೆ ಪರ್ಯಾಯ ಮಾರ್ಗ ಸೂಚಿಸಿದ ಜಿಲ್ಲಾಡಳಿತ! ಶಿವಮೊಗ್ಗ-ಚಿತ್ರದುರ್ಗ!

KARNATAKA NEWS/ ONLINE / Malenadu today/ Oct 9, 2023 SHIVAMOGGA NEWS

ರಾಷ್ಟ್ರೀಯ ಹೆದ್ದಾರಿ-13 ಚಿತ್ರದುರ್ಗ-ಶಿವಮೊಗ್ಗ  (National Highway-13)ನಡುವಿನ 525.00 ಕಿ.ಮೀ ನಲ್ಲಿ ಎಲ್‍ಸಿ-46 ರಲ್ಲಿ ಟೂ ಲೇನ್ ಸ್ಟೀಲ್ ಕಾಂಪೋಸಿಟ್ ಆರ್‍ಓಬಿ ನಿರ್ಮಾಣ ಮಾಡಲಿರುವುದರಿಂದ ದಿ: 01-10-2023 ರಿಂದ 08-11-2023 ರವರೆಗೆ ವಾಹನಗಳು ಕೆಳಕಂಡ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಆದೇಶಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಅಧಿಸೂಚಿಸಿರುತ್ತಾರೆ.  

ಶಿವಮೊಗ್ಗದಿಂದ-ಚಿತ್ರದುರ್ಗಕ್ಕೆ ಹೋಗುವ ವಾಹನಗಳು ಶಿವಮೊಗ್ಗದಿಂದ ಚಿತ್ರದುರ್ಗ ಕಡೆ ಹೋಗುವ ಬೈಕು, ಕಾರು ಹಾಗೂ ಎಲ್‍ಎಂವಿ ವಾಹನಗಳು ಶಾಂತಮ್ಮ ಲೇ ಔಟ್ ಮುಖಾಂತರ ಮತ್ತು ಭಾರೀ ವಾಹನಗಳಾದ ಬಸ್,ಲಾರಿ, ಟ್ರಕ್‍ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಹೊನ್ನಾಳಿ ರಸ್ತೆ, ಹೊಳಲೂರು ಮಾರ್ಗವಾಗಿ ಹೊಳಲೂರು, ತುಂಗಭದ್ರ ಹೊಸ ಸೇತುವೆ, ಸನ್ಯಾಸಿ ಕೋಡಮಗ್ಗಿ, ಹೊಳೆಹೊನ್ನೂರು ಮುಖಾಂತರ ಅಥವಾ ಎಂ.ಆರ್.ಎಸ್ ಸರ್ಕಲ್, ಹರಿಗೆ, ಮಾಚೇನಹಳ್ಳಿ, ಭದ್ರಾವತಿ ಮುಖೇನ ಚಲಿಸಬಹುದಾಗಿದೆ 

ಚಿತ್ರದುರ್ಗದಿಂದ-ಶಿವಮೊಗ್ಗಕ್ಕೆ ಹೋಗವು ವಾಹನಗಳು ಶಿವಮೊಗ್ಗ ನಗರದ ಶಾಂತಮ್ಮ ಲೇಔಟ್‍ನಲ್ಲಿ ಹಾದು ಹೋಗುವ ರಸ್ತೆಯುವ ಚಿಕ್ಕ ರಸ್ತೆಯಾಗಿದ್ದು ಸದರಿ ರಸ್ತೆಯಲ್ಲಿ ಭಾರೀ ವಾಹನಗಳಾದ ಬಸ್, ಲಾರಿ, ಟ್ರಕ್‍ಗಳು ತಿರುವು ಪಡೆದುಕೊಳ್ಳಲು ಮತ್ತು ಚಲಿಸಲು ಸಾಧ್ಯವಾಗುವುದಿಲ್ಲ. ಚಿಕ್ಕ ರಸ್ತೆಯಾಗಿರುವುದರಿಂದ ಪದೇ ಪದೇ ಟ್ರಾಫಿಕ್ ಉಂಟಾಗುವ ಮತ್ತು ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬರುವ ವಾಹನಗಳು ಫ್ಲೈಓವರ್‍ನ ಸರ್ವಿಸ್ ರಸ್ತೆಯಲ್ಲಿ ಚಲಿಸುವಂತೆ ತಿಳಿಸಲಾಗಿದೆ  


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?