Shimoga DC Gurudatta Hegde ಶಿವಮೊಗ್ಗ : ಸವಾಲುಗಳು ಎದುರಾದಾಗ ಕೆಲಸ ಮಾಡಲು ಹೆಚ್ಚಿನ ಉತ್ಸಾಹ ಮೂಡುತ್ತದೆ ಮತ್ತು ಅಂತಹ ಸಂದರ್ಭಗಳಲ್ಲಿ ಕಲಿಯಲು ಹೆಚ್ಚಿನ ಅವಕಾಶ ಸಿಗುತ್ತವೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಅಭಿಪ್ರಾಯಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯು ಅಂತಹ ಒಂದು ಸವಾಲಿನ ಹಾಗೂ ಅರ್ಥಪೂರ್ಣ ವೇದಿಕೆಯನ್ನು ತಮಗೆ ಒದಗಿಸಿಕೊಟ್ಟಿತ್ತು ಎನ್ನತ್ತಾ ಜಿಲ್ಲಾಧಿಕಾರಿ ಗುರುದತ್ ಹೆಗೆಡೆ ತಮ್ಮ ಅಧಿಕಾರಾವಧಿಯ ಅನುಭವಗಳನ್ನು ಮೆಲುಕು ಹಾಕಿದ್ದಾರೆ.
ನಶೆ ಮುಕ್ತ ಶಿವಮೊಗ್ಗ ಜಿಲ್ಲೆ ಸಂಕಲ್ಪ- ವಾರ್ ಫೂಟ್ ನಲ್ಲಿ ಕೆಲಸ ಮಾಡುತ್ತೇವೆ- ಎಸ್ಪಿ ಬಿ. ನಿಖಿಲ್
ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಚಹಾಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 1 ವರ್ಷ 11 ತಿಂಗಳ ಅವಧಿಯಲ್ಲಿ ಜಿಲ್ಲೆಯೊಂದಿಗೆ ತಾವು ಹೊಂದಿದ್ದ ಬಾಂಧವ್ಯ ಮತ್ತು ಕಾರ್ಯನಿರ್ವಹಣೆಯ ಅನುಭವವನ್ನು ಹಂಚಿಕೊಂಡರು. ಈ ಮೊದಲು ಧಾರವಾಡ ಜಿಲ್ಲೆಯಲ್ಲಿ ಕೆಲಸ ಮಾಡಿದ ಅನುಭವವಿದ್ದರೂ ಸಹ, ಶಿವಮೊಗ್ಗದ ಅರಣ್ಯ ಮತ್ತು ಕಂದಾಯ ಇಲಾಖೆಗಳಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಗಳು ತಮಗೆ ದೊಡ್ಡ ಮಟ್ಟದ ವೃತ್ತಿಪರ ಸವಾಲನ್ನು ನೀಡಿದ್ದವು ಎಂದು ಅವರು ತಿಳಿಸಿದರು. ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ರೈಲ್ವೆ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಎದುರಾದ ಭೂಸ್ವಾಧೀನದ ತೊಡಕುಗಳನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ತಮಗಿದೆ ಎಂದರು. ವಿಶೇಷವಾಗಿ ಬಿ.ಹೆಚ್. ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇದ್ದ 30 ಜಾಗದ ಪೈಕಿ 29 ಸ್ಥಳಗಳ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಲಾಗಿದೆ ಅಂತಾ ತಿಳಿಸಿದರು.

ಶಿವಮೊಗ್ಗದ ಪ್ರಸಿದ್ದ ರೆಸಾರ್ಟ್ಮಾಲೀಕರ ಕಾರು ಡ್ರೈವರ್ನ್ನು ಅಡ್ಡಗಟ್ಟಿ ದರೋಡೆ, ಹಲ್ಲೆ!
- ಶರಾವತಿ ಸಂತ್ರಸ್ತರ ಭೂಮಿ ಹಂಚಿಕೆಯ ಕುರಿತು ಮಾತನಾಡ್ತಾ ಡಿಸಿ ಗುರುದತ್ ಹೆಗೆಡೆ, ಈವರೆಗೆ ಒಟ್ಟು 9,900 ಎಕರೆ ಜಮೀನಿನ ಡಿಜಿಟಲ್ ಸರ್ವೆ ಕಾರ್ಯ ಪೂರ್ಣಗೊಳಿಸಲಾಗಿದೆ. ಜಾಗದ ಸಮಸ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 800 ಆಕ್ಷೇಪಣೆ ಅರ್ಜಿ ಸ್ವೀಕೃತವಾಗಿದ್ದು, ಪ್ರಸ್ತುತ ಆ ಪಟ್ಟಿಯ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಮುಂದಿನ 10 ದಿನಗಳ ಒಳಗಾಗಿ ಈ ಕುರಿತು ಅತ್ಯಂತ ಗುಣಮಟ್ಟದ ವರದಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
- ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಸುಮಾರು 40 ಕ್ಕೂ ಹೆಚ್ಚು ಪ್ರವಾಸಿ ತಾಣಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಮಾಹಿತಿ ಫಲಕ ಅಳವಡಿಸಲಾಗಿದೆ. ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
- ತಮ್ಮ ವರ್ಗಾವಣೆಯ ವಿಚಾರವಾಗಿ ಮಾತನಾಡಿದ ಗುರುದತ್ ಹೆಗೆಡೆ, ಅಧಿಕಾರಿಗಳು ಒಂದೇ ಕಡೆ 3 ವರ್ಷಗಳ ಕಾಲ ನೆಲೆ ನಿಂತರೆ ಕೆಲಸದಲ್ಲಿ ಜಡತ್ವ ಆವರಿಸುವ ಸಾಧ್ಯತೆ ಇರುತ್ತದೆ, ಆದ್ದರಿಂದ ಕಡಿಮೆ ಅವಧಿಯಲ್ಲಿ ವರ್ಗಾವಣೆಯಾಗುವುದು ಒಂದು ದೃಷ್ಟಿಯಿಂದ ಒಳ್ಳೆಯದೇ ಎಂದರು.
ನಶೆ ಮುಕ್ತ ಶಿವಮೊಗ್ಗ ಜಿಲ್ಲೆ ಸಂಕಲ್ಪ- ವಾರ್ ಫೂಟ್ ನಲ್ಲಿ ಕೆಲಸ ಮಾಡುತ್ತೇವೆ- ಎಸ್ಪಿ ಬಿ. ನಿಖಿಲ್
ಶಿವಮೊಗ್ಗ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯಲ್ಲಿ ಜಿಲ್ಲಾಧಿಕಾರಿಗಳ ಪಾತ್ರಕ್ಕೆ ಹೆಚ್ಚಿನ ಅವಕಾಶ ದೊರೆತಿದ್ದನ್ನು ಸ್ಮರಿಸಿದ ಗುರುದತ್ ಹೆಗೆಡೆ, (Shimoga DC Gurudatta Hegde) ಮಲೆನಾಡು ಭಾಗದಲ್ಲಿ ಕಂಡುಬರುತ್ತಿರುವ ವೈದ್ಯರು ಹಾಗೂ ಆಂಬ್ಯುಲೆನ್ಸ್‌ಗಳ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರಷ್ಟೆ ಅಲ್ಲದೆ ಮುಂದಿನ ದಿನಗಳಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಕಮಿಷನರ್ ಆಗಿ ಈ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಗಮನ ನೀಡುವುದಾಗಿ ಭರವಸೆ ನೀಡಿದರು.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!