Daily Horoscope January 21 2026 ವಿಶ್ವಾವಸು ನಾಮಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಮಾಸದ ಈದಿನ ಶುಕ್ಲ ಪಕ್ಷದ ತದಿಗೆ ತಿಥಿಯು ರಾತ್ರಿ 2.18 ರವರೆಗೆ ಇರಲಿದ್ದು ತದನಂತರ ಚೌತಿ ತಿಥಿ ಆರಂಭವಾಗಲಿದೆ ಹಾಗೂ ಧನಿಷ್ಠ ನಕ್ಷತ್ರ ಮಧ್ಯಾಹ್ನ 2.08 ರವರೆಗೆ ಇದ್ದು ಆ ಬಳಿಕ ಶತಭಿಷ ನಕ್ಷತ್ರ ಇರಲಿದೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇದ್ದರೆ ಯಮಗಂಡ ಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಇವತ್ತಿನ ದಿನಭವಿಷ್ಯ/ Daily Horoscope January 21 2026
ಮೇಷ | ವ್ಯವಹಾರಗಳಲ್ಲಿ ಗೆಲುವು ಸಿಗಲಿದೆ ಮತ್ತು ಶುಭ ಸುದ್ದಿ ಕೇಳುವಿರಿ. ಆರ್ಥಿಕವಾಗಿ ಅಭಿವೃದ್ಧಿ, ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳವಿರಿ. ಭೂಮಿ ಹಾಗೂ ವಾಹನ ಖರೀದಿಯ ಯೋಗ ಕೂಡಿಬರಲಿದ್ದು ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗಲಿವೆ.
ಶಬರಿಮಲೆಯಲ್ಲಿ ಶಿವಮೊಗ್ಗ ಭಕ್ತರ ಸಂಕಷ್ಟ! ಸನ್ನಿದಾನದಿಂದಲೇ ಸಿಎಂ, ಡಿಸಿಎಂರ ಸಹಾಯ ಹಸ್ತ ಬೇಡಿದ ಸ್ವಾಮಿಗಳು
ವೃಷಭ | ಸಂತೋಷ ವೃದ್ಧಿಯಾಗಲಿದ್ದು ಅಂದುಕೊಂಡ ಕೆಲಸ ನಿಗದಿತ ಸಮಯದಲ್ಲಿ ಮುಗಿವುದು. ದೇವಾಲಯಗಳಿಗೆ ಭೇಟಿ , ದೂರದ ಸಂಬಂಧಿಕರನ್ನು ಭೇಟಿಯಾಗುವ ಸಂಭವ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಯಾವುದೇ ತೊಂದರೆ ಇಲ್ಲದೆ ಸುಗಮವಾಗಿ ಸಾಗಲಿದೆ.
ಮಿಥುನ | ಕೆಲವು ಕೆಲಸಗಳನ್ನು ಮುಂದೂಡುವ ಸಾಧ್ಯತೆ, ಆಸ್ತಿ ವಿಚಾರದಲ್ಲಿ ವಿವಾದ ಏರ್ಪಡಬಹುದು. ಕೆಲಸದಲ್ಲಿ ಶ್ರಮ ಹೆಚ್ಚಾಗಲಿದ್ದು ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಅನಗತ್ಯವಾಗಿ ಮನಸ್ತಾಪ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಏರಿಳಿತ.

ಕರ್ಕಾಟಕ | ಸ್ನೇಹಿತರೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಬದಲಾವಣೆ. ಅಂದುಕೊಂಡ ಕೆಲಸ ಮುಂದೆ ಸಾಗದೆ ಸ್ಥಗಿತಗೊಳ್ಳಬಹುದು ಮತ್ತು ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ವ್ಯಾಪಾರ ಮತ್ತು ಉದ್ಯೋಗದ ವಿಷಯದಲ್ಲಿ ಸ್ವಲ್ಪ ನಿರಾಸೆ.
ಸಿಂಹ | ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದ್ದು ಹೊಸ ಕೆಲಸಗಳನ್ನು ಆರಂಭಿಸಲಿದ್ದಾರೆ.ಆಪ್ತರಿಂದ ಪ್ರೀತಿ ಮತ್ತು ಆರೈಕ ದೊರೆಯಲಿದೆ. ಸಮಾಜದಲ್ಲಿ ಗೌರವ ಹಾಗೂ ಪ್ರಭಾವ ಹೆಚ್ಚಲಿದೆ. ಉದ್ಯೋಗದಲ್ಲಿ ಲಾಭ, ವ್ಯಾಪಾರ ಮತ್ತು ವೃತ್ತಿ ಬದುಕು ಅನುಕೂಲಕರ.
ಕನ್ಯಾ | ವ್ಯವಹಾರ ಅತ್ಯಂತ ಯಶಸ್ವಿಯಾಗಿ ನಡೆಯಲಿದ್ದು ಉದ್ಯೋಗಕ್ಕಾಗಿ ಕಾಯುತ್ತಿರುವ ನಿರುದ್ಯೋಗಿಗಳಿಗೆ ಶುಭ ಸುದ್ದಿ ಸಿಗಲಿವೆ. ವಾಹನ ಯೋಗ, ಮುಖ್ಯ ನಿರ್ಧಾರಗಳನ್ನು ಕೈಗೊಳ್ಳುವ ಸಮಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ತೃಪ್ತಿ ಸಿಗಲಿದೆ.
ನ್ಯಾಮತಿಯಲ್ಲಿ ಅಡ್ಡಗಟ್ಟಿ ಸುಲಿಗೆ! ದಾವಣಗೆರೆ ಪೊಲೀಸರಿಂದ ಶಿವಮೊಗ್ಗದ ಇಬ್ಬರು ಅರೆಸ್ಟ್!
ತುಲಾ | ಅನಿರೀಕ್ಷಿತ ಕಂಟಕ ಎದುರಾಗಲಿದ್ದು, ಪ್ರಯಾಣ ಮುಂದೂಡಬೇಕಾದ ಪರಿಸ್ಥಿತಿ ಬರಬಹುದು. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ, ಹಣಕಾಸಿನ ವ್ಯವಹಾರ ನಿರಾಸೆ ಉಂಟುಮಾಡಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕಿರಿಕಿರಿ
ವೃಶ್ಚಿಕ | ಆರ್ಥಿಕವಾಗಿ ಸಂಕಷ್ಟ ಎದುರಾಗಲಿದ್ದು, ದೂರ ಪ್ರಯಾಣ ಮಾಡಬೇಕಾಗುತ್ತದೆ. ಒಪ್ಪಂದಗಳಲ್ಲಿ ಅಡೆತಡೆ, ಸಂಬಂಧಿಕರೊಂದಿಗೆ ಜಗಳ. ಕೆಲಸ ಮುಂದೂಡಿಕೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಒತ್ತಡದ ದಿನ.
ಧನು | ಆದಾಯದಲ್ಲಿ ಹೆಚ್ಚಳ, ಬಾಲ್ಯದ ಸ್ನೇಹಿತರ ಭೇಟಿ, ಶುಭ ಸಮಾರಂಭ. ವ್ಯವಹಾರಗಳಲ್ಲಿ ವಿಜಯ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಆಶಾದಾಯಕವಾಗಿರಲಿವೆ.

ಮಕರ | ಸಾಲದ ಬಾಧೆ ಹೆಚ್ಚಾಗುವ ಸಾಧ್ಯತೆಯಿದ್ದು, ಅನಿರೀಕ್ಷಿತವಾಗಿ ಪ್ರಯಾಣ. ಅನಾರೋಗ್ಯದ ಸಮಸ್ಯೆ, ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ಅಂದುಕೊಂಡ ಕೆಲಸಗಳಲ್ಲಿ ವಿಳಂಬ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಮಂದಗತಿಯಲ್ಲಿ ಸಾಗಲಿದೆ.
ಕುಂಭ | ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದ್ದು ಸ್ಥಿರಾಸ್ತಿಯ ಮೌಲ್ಯ ಹೆಚ್ಚಾಗಲಿದೆ. ಪ್ರಮುಖವಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಭೂಮಿ ಹಾಗೂ ಮನೆ ಖರೀದಿ ಯೋಗ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಉತ್ಸಾಹದಾಯಕವಾಗಿ ನಡೆಯಲಿವೆ.
ಮೀನ | ಆರ್ಥಿಕ ಇಕ್ಕಟ್ಟು , ಜವಾಬ್ದಾರಿಗಳ ಹೊರೆ. ದೂರದ ಊರುಗಳಿಗೆ ಪ್ರಯಾಣ, ಆಸ್ತಿ ವಿಚಾರದಲ್ಲಿ ವಿವಾದ ಏರ್ಪಡಬಹುದು. ಅನಿರೀಕ್ಷಿತ ಪ್ರಯಾಣದ ಜೊತೆಗೆ ಉದ್ಯೋಗ ಹಾಗೂ ವ್ಯಾಪಾರದಲ್ಲಿ ಈ ದಿನ ಸಾಧಾರಣ

ಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು ಗ್ಯಾರಂಟಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.

