Shimoga Sabarimala Devotees | ಶಿವಮೊಗ್ಗ | ಶಬರಿ ಮಲೆ | ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಶಿವಮೊಗ್ಗ ಮತ್ತು ಭದ್ರಾವತಿಯಿಂದ ತೆರಳಿರುವ ಮಾಲಾಧಾರಿಗಳಿಗೆ ಅಲ್ಲಿ ಸಂಕಷ್ಟ ಎದುರಾಗಿದೆ. ಅಲ್ಲದೆ ಕೇರಳ ಸರ್ಕಾರದ ಧೋರಣೆ ಹಾಗೂ ಅಲ್ಲಿನ ಪೊಲೀಸರ ನಡವಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಏರುಮಲೆ ಎಂಬಲ್ಲಿ ರಾಜ್ಯದ ಭಕ್ತರನ್ನು ಮುಂದಕ್ಕೆ ಸಾಗದಂತೆ ತಡೆಯಲಾಗುತ್ತಿದೆ ಎಂಬ ಆರೋಪ ಶಿವಮೊಗ್ಗದಿಂದ ಶಬರಿಮಲೆಗೆ ತೆರಳಿರುವ ಭಕ್ತರದ್ದಾಗಿದೆ. ರಾಜ್ಯದ ವಾಹನಗಳನ್ನು ಮಾತ್ರವಲ್ಲದ ಆಂಧ್ರ, ತೆಲಂಗಾಣ, ತಮಿಳುನಾಡಿನ ವಾಹನಗಳನ್ನ ಸಹ ತಡೆಯಲಾಗುತ್ತಿದೆ ಎಂದು ಭಕ್ತರು ಆರೋಪಿಸ್ತಿದ್ದು, ಭಜನೆ ಮಾಡುವ ಮೂಲಕ ಸ್ಥಳದಲ್ಲಿಯೇ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ ರಸ್ತೆಯಲ್ಲೇ ಘೋಷಣೆಗಳನ್ನು ಕೂಗಿದ್ದಾರೆ.

ಸನ್ನಿದಾನದಿಂದ 45 ಕಿಲೋಮೀಟರ್ ದೂರವಿರುವ ಏರುಮಲೆ ಎಂಬಲ್ಲಿ ಇಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದಲೇ ವಾಹನಗಳನ್ನು ತಡೆದು ನಿಲ್ಲಿಸಲಾಗುತ್ತಿದೆಯಂತೆ. ಭದ್ರಾವತಿಯ ಉಮೇಶ್ ಹಾಗೂ ಉಳಿದವರು ಸಣ್ಣ ಸಣ್ಣ ಮಕ್ಕಳು ಜೊತೆಗಿದ್ದು, ಕೇರಳದ ಸಿಬ್ಬಂದಿ ತಮ್ಮನ್ನು ಮುಂದಕ್ಕೆ ಸಾಗದಂತೆ ತಡೆಯುತ್ತಿದ್ದಾರೆ. ಇದು ಅನ್ಯಾಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಬಗ್ಗೆ ಗಮನಹರಿಸಿ ಅಡೆತಡೆಗಳನ್ನ ನಿವಾರಿಸಬೇಕು ಎಂದು ಮನವಿ ಮಾಡಿದ್ದಾರೆ.

10 ದಿನದಲ್ಲಿ 50 ಪೆರ್ಸೆಂಟ್ ಲಾಭದ ಆಸೆಗೆ ಶಿವಮೊಗ್ಗದ ವ್ಯಕ್ತಿ ಕಳೆದುಕೊಂಡಿದೆಷ್ಟು ಲಕ್ಷ ಗೊತ್ತಾ..?
ಸ್ಥಳೀಯರಿಗೆ ಅನುಕೂಲವಾಗಲಿ ಎಂದು ಈ ರೀತಿ ಮಾಡಲಾಗುತ್ತಿದೆ ಎಂಬುದು ಭಕ್ತರ ದೂರಾಗಿದೆ. 2 ದಿನಗಳ ಕಾಲ ಕಾಯುವಂತೆ ಮಾಡಿ ದುಬಾರಿ ಪಾರ್ಕಿಂಗ್ ಶುಲ್ಕ ಹಾಗೂ ಸ್ಥಳೀಯ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ಹಿನ್ನೆಲೆಯಿಂದ ಈ ರೀತಿಯಲ್ಲಿ ಮಾಡಲಾಗುತ್ತಿದೆ ಎಂದು ಅಯ್ಯಪ್ಪ ಮಾಲಾಧಾರಿಗಳು ದೂರಿದ್ದಾರೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.