Daily Horoscope December 26 2025 ಶಿವಮೊಗ್ಗ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿಯು ಇಂದು ಬೆಳಿಗ್ಗೆ 10.06 ರವರೆಗೆ ಇರಲಿದ್ದು, ತದನಂತರ ಸಪ್ತಮಿ ತಿಥಿ ಆರಂಭವಾಗಲಿದೆ. ಪೂರ್ವಾಭಾದ್ರ ನಕ್ಷತ್ರವು ನಾಳೆ ಬೆಳಿಗ್ಗೆ (ಶನಿವಾರ) 6.03 ರವರೆಗೆ ಇರಲಿದ್ದು, ನಂತರ ಉತ್ತರಾಭಾದ್ರ ನಕ್ಷತ್ರ ಪ್ರಾರಂಭವಾಗಲಿದೆ. ಅಮೃತ ಘಳಿಗೆಯು ರಾತ್ರಿ 10.02 ರಿಂದ 11.38 ರವರೆಗೆ ಇರಲಿದೆ.

ಶಿವಮೊಗ್ಗದಲ್ಲಿ ಚುರುಕಾದ ಅಡಿಕೆ ವ್ಯಾಪಾರ! ಯಾವ ತಳಿಗೆ ಎಷ್ಟಿದೆ ರೇಟು! ದಾವಣಗೆರೆ, ಚಿತ್ರದುರ್ಗ, ಶಿರಸಿ?
ಇವತ್ತಿನ ರಾಶಿಫಲ/Daily Horoscope December 26 2025
ಮೇಷ : ಶುಭದಾಯಕ ದಿನವಾಗಿದ್ದು, ಶುಭ ವಾರ್ತೆಗಳನ್ನು ಕೇಳುವಿರಿ. ಅನಿರೀಕ್ಷಿತವಾಗಿ ಧನ ಲಾಭ,ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಸಮಾಜದಲ್ಲಿ ಗೌರವ, ಈ ದಿನ ಮನಸ್ಸಿಗೆ ಹರ್ಷ ತರಲಿದ್ದು, ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ಸಾಹವಿರಲಿದೆ.
ವೃಷಭ : ಪರರ ಸಹಕಾರದಿಂದ ಪ್ರಗತಿಯ ಹಾದಿ. ಅನಿರೀಕ್ಷಿತ ಧನ ಲಾಭ, ಬೆಲೆಬಾಳುವ ವಸ್ತು ಖರೀದಿ. ಬಾಲ್ಯದ ಗೆಳೆಯರ ಭೇಟಿಯಾಗುವಿರಿ, ಜೀವನದಲ್ಲಿ ಕೆಲವು ಕುತೂಹಲಕಾರಿ ಘಟನೆಗಳು ಜರುಗಲಿವೆ. ವೃತ್ತಿಜೀವನ ಮತ್ತು ಉದ್ಯೋಗದಲ್ಲಿಂದು ಪೂರಕ ವಾತಾವರಣ.
ಮಿಥುನ : ಆರ್ಥಿಕ ಸಂಕಷ್ಟ ಎದುರಾಗಲಿದ್ದು, ಸಾಲ ಮಾಡಬೇಕಾಗಬಹುದು. ಅನಿರೀಕ್ಷಿತ ಪ್ರಯಾಣ, ಆಯಾಸ, ಮನೆಯ ಒಳಗೆ ಮತ್ತು ಹೊರಗೆ ಕಿರಿಕಿರಿ. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಅವಶ್ಯಕ. ವ್ಯಾಪಾರ ವಹಿವಾಟು ಸಾಧಾರಣವಾಗಿದ್ದು, ಉದ್ಯೋಗಿಗಳಿಗೆ ಕೆಲಸದ ಒತ್ತಡ ಇರಲಿದೆ.

ಕರ್ಕಾಟಕ : ಖರ್ಚು ಹೆಚ್ಚಾಗಲಿದ್ದು, ಅಲೆದಾಟದ ದಿನವಾಗಲಿದೆ. ನೆಂಟರಿಷ್ಟರ ಜೊತೆ ಮನಸ್ತಾಪ, ಅನಗತ್ಯ ಪ್ರಯಾಣ. ಕುಟುಂಬದಲ್ಲಿ ಸಣ್ಣಪುಟ್ಟ ಕಿರಿಕಿರಿ, ಮನಸ್ಸಿಗೆ ನೆಮ್ಮದಿ ಕೆಡಿಸಬಹುದು. ದೇವರ ದರ್ಶನ, ವೃತ್ತಿ ಮತ್ತು ಕೆಲಸದಲ್ಲಿ ಈ ದಿನ ನಿಧಾನಗತಿಯಲ್ಲಿ ಸಾಗಲಿವೆ (Challenging).
ಟ್ರೇಡಿಂಗ್ ಹೆಸರಿನಲ್ಲಿ ಶಿವಮೊಗ್ಗದ ವ್ಯಕ್ತಿಗೆ 4 ಲಕ್ಷ ವಂಚನೆ : ಹೀಗೂ ಯಾಮಾರಿಸ್ತಾರೆ ಹುಷಾರ್
ಸಿಂಹ ; ಉತ್ತಮ ಪ್ರೋತ್ಸಾಹ ದೊರೆಯಲಿದೆ. ಧನಲಾಭ. ಬಹಳ ದಿನಗಳ ನಂತರ ಆತ್ಮೀಯ ಗೆಳೆಯರನ್ನು ಭೇಟಿಯಾಗುವ ಅವಕಾಶ, ಔತಣಕೂಟಗಳಲ್ಲಿ ಭಾಗವಹಿಸುವಿರಿ. ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿಂದು ಆಶಾದಾಯಕ ದಿನ
ಕನ್ಯಾ : ದೂರದ ಸಂಬಂಧಿಕರಿಂದ ಮಹತ್ವದ ಮಾಹಿತಿ. ಶುಭ ಸಮಾರಂಭ, ಯೋಜಿತ ಕೆಲಸ ಸುಗಮವಾಗಿ ಪೂರ್ಣಗೊಳ್ಳಲಿವೆ. ಸ್ಥಿರಾಸ್ತಿ ಖರೀದಿ,ವ್ಯಾಪಾರದಲ್ಲಿ ಲಾಭ, ಉದ್ಯೋಗಿಗಳಿಗೆ ಹೊಸ ಜವಾಬ್ದಾರಿ
ತುಲಾ : ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಆರ್ಥಿಕ ಅಸ್ಥಿರತೆ, ಸಾಲದ ಮೊರೆ. ಮಾನಸಿಕವಾಗಿ ಗೊಂದಲ, ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೃತ್ತಿ ಮತ್ತು ಉದ್ಯೋಗದಲ್ಲಿ ಈ ದಿನ ನಿಧಾನವಾಗಿ ಸಾಗಲಿದೆ.
ವೃಶ್ಚಿಕ : ಪ್ರತಿಯೊಂದು ಕೆಲಸದಲ್ಲೂ ವಿಳಂಬ. ಆರ್ಥಿಕ ವಿಚಾರಗಳಲ್ಲಿ ಏರಿಳಿತ, ಹೂಡಿಕೆಯ ಬಗ್ಗೆ ಎಚ್ಚರಿಕೆ ಇರಲಿ. ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದ್ದು, ವಿಶ್ರಾಂತಿ ಅಗತ್ಯ. ಧಾರ್ಮಿಕ ಕೇಂದ್ರಗಳಿಗೆ ಭೇಟಿ ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರುತ್ಸಾಹ.
ಧನು : ಉತ್ತಮ ಬಾಂಧವ್ಯದ ದಿನ. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಸಂಕೇತಗಳಿವೆ. ಉದ್ಯೋಗಸ್ಥರಿಗೆ ಉನ್ನತ ಸ್ಥಾನಮಾನ ದೊರೆಯುವ ಸಾಧ್ಯತೆಯಿದ್ದು, ವ್ಯಾಪಾರಸ್ಥರಿಗೆ ಲಾಭದಾಯಕ ದಿನವಾಗಿದ್ದು, ಆರ್ಥಿಕವಾಗಿ ಲಾಭವಾಗುವುದು.

ಮಕರ : ಕಠಿಣ ಪರಿಶ್ರಮ ಪಟ್ಟರೂ ತಕ್ಕ ಫಲಕ್ಕಾಗಿ ಕಾಯಬೇಕಾಗುವುದು. ಆಸ್ತಿ ಪಾಸ್ತಿ ವಿಚಾರದಲ್ಲಿ ವಿವಾದ. ಸುದೀರ್ಘ ಪ್ರಯಾಣ ಬಳಲಿಸಬಹುದು. ಸ್ನೇಹಿತರೊಡನೆ ವಾಗ್ವಾದ ನ. ವೃತ್ತಿ ಮತ್ತು ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು
ಕುಂಭ : ಕಷ್ಟಪಟ್ಟಿದ್ದಕ್ಕೆ ಸಾರ್ಥಕತೆ ಸಿಗಲಿದೆ. ಹೊಸ ಕೆಲಸ ಪ್ರಾರಂಭಿಸಲು ಇದು ಸಕಾಲ. ಆತ್ಮೀಯರಿಂದ ಸಿಗುವ ಶುಭ ಸುದ್ದಿ. ವಾಹನ ಖರೀದಿ, ಸೌಕರ್ಯಗಳು ಹೆಚ್ಚಲಿವೆ. ವೃತ್ತಿ ಜೀವನ ಮತ್ತು ಉದ್ಯೋಗದಲ್ಲಿಂದು ದಿನ ಸುಗಮವಾಗಿ ಸಾಗಲಿದೆ
ಹಿರಿಯೂರು ಬಸ್ ದುರಂತ: ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಮೊಬೈಲ್ ಸ್ವಿಚ್ ಆಫ್! ಸಿಗದ ಮಾಹಿತಿ
ಮೀನ : ಮಿತ್ರರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಯಿದೆ. ಹಣದ ಸಮಸ್ಯೆ ಎದುರಾಗಲಿದ್ದು, ಆರ್ಥಿಕವಾಗಿ ತುಸು ಇಕ್ಕಟ್ಟಿಗೆ ಸಿಲುಕುವಿರಿ. ಅನಿರೀಕ್ಷಿತ ಪ್ರಯಾಣ. ಮನೆಯಲ್ಲಿ ಅಶಾಂತಿ, ಆರೋಗ್ಯದ ಮೇಲೆ ಪರಿಣಾಮ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಡೆತಡೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,