24 December 2025 ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಇಂದಿನ ಗ್ರಹಗತಿಯನ್ನು ಗಮನಿಸುವುದಾದರೆ, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷದ ಚೌತಿ ತಿಥಿ ಬೆಳಿಗ್ಗೆ 10.51 ರವರೆಗೆ ಇರಲಿದ್ದು, ತದನಂತರ ಪಂಚಮಿ ಆರಂಭವಾಗಲಿದೆ. ಧನಿಷ್ಠಾ ನಕ್ಷತ್ರ ನಾಳೆ ಮುಂಜಾನೆ 6.24 ರವರೆಗೆ ಇರಲಿದ್ದು, ನಂತರ ಶತಭಿಷ ನಕ್ಷತ್ರ ಪ್ರಾರಂಭವಾಗಲಿದೆ. ಅಮೃತ ಘಳಿಗೆ ರಾತ್ರಿ 7.35 ರಿಂದ 9.15 ರವರೆಗೆ ಇರಲಿದೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ, 6.43 ಕೋಟಿ ಮೌಲ್ಯದ ಕಳವು ಮಾಲು ವಾರಸುದಾರರಿಗೆ ವಾಪಸ್!
ಇವತ್ತಿನ ರಾಶಿಫಲ/ 24 December 2025
ಮೇಷ : ಸಂಬಂಧ ವೃದ್ಧಿಯಾಗಲಿದ್ದು, ದೀರ್ಘಕಾಲದ ಆಸ್ತಿ ವಿವಾದ ಬಗೆಹರಿಯಲಿವೆ. ದೂರದ ಊರಿನಿಂದ ಶುಭಸುದ್ದಿ ಬರಲಿದೆ. ಆರ್ಥಿಕ ಸುಧಾರಣೆ , ವೃತ್ತಿ ಕ್ಷೇತ್ರದಲ್ಲಿ ಪ್ರಗತಿ, ಉದ್ಯೋಗದಲ್ಲಿ ಒಂದೊಳ್ಳೇ ವರ್ತಮಾನ ಸಿಗಲಿದೆ.
ವೃಷಭ : ಉದ್ಯೋಗ ಸಂದರ್ಶನ, ಕೈಗೊಂಡ ಕೆಲಸಗಳಲ್ಲಿ ಸಫಲತೆ. ಆರ್ಥಿಕವಾಗಿ ಸದೃಢ, ಆಸ್ತಿ ಲಾಭ. ಧನಲಾಭ, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಈ ದಿನ ಸಾಧರಣವಾಗಿರಲಿದೆ.
ಮಿಥುನ : ಹಣಕಾಸಿನ ವ್ಯವಹಾರದಲ್ಲಿ ವಿಶೇಷವಿರಲಿದೆ. ಅನಗತ್ಯ ಖರ್ಚು ಹಾಗೂ ಕುಟುಂಬದಲ್ಲಿ ಮನಸ್ತಾಪ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಧನಲಾಭ

ಗಮನಕ್ಕೆ: ಶಿವಮೊಗ್ಗ ಜಿಲ್ಲಾ ಪಂಚಾಯತಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಹುದ್ದೆ! ಉದ್ಯೋಗ ಸುದ್ದಿ!
ಕರ್ಕಾಟಕ : ಕೆಲಸಗಳಲ್ಲಿ ಅಡೆತಡೆ ಎದುರಾಗಲಿದ್ದು, ಆರ್ಥಿಕ ಹಿನ್ನಡೆ , ಪರಿಶ್ರಮ ಹೆಚ್ಚಿದು, ಲಾಭ ಕಡಿಮೆ ಇರಲಿದೆ. ನೆರೆಹೊರೆಯವರೊಂದಿಗೆ ವಿವಾದ, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಉತ್ಸಾಹದಾಯಕ ದಿನ.
ಸಿಂಹ : ಕಾರ್ಯಸಿದ್ಧಿ, ಶುಭ ಸಮಾರಂಭ. ಹಳೆಯ ಸಾಲ ವಾಪಸ್ ಬರಲಿದ್ದು, ಬಾಲ್ಯದ ಗೆಳೆಯರ ಭೇಟಿ, ಮನಸ್ಸಿಗೆ ಸಂತೋಷವಾಗಲಿದೆ.ಉದ್ಯೋಗ ಹಾಗೂ ವ್ಯಾಪಾರದಲ್ಲಿ ದಿನ ವಿಶೇಷವಾಗಿರಲಿದೆ.
ಕನ್ಯಾ : ಉದ್ಯೋಗದ ಲಾಭ ದೊರೆಯಲಿದ್ದು, ಆಪ್ತರೊಂದಿಗಿನ ಕಲಹ ಕೊನೆಯಾಗಲಿವೆ. ಭೂಮಿ ಅಥವಾ ವಾಹನ ಖರೀದಿ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ.
24 December 2025
ತುಲಾ : ಭಿನ್ನಾಭಿಪ್ರಾಯ ಮೂಡುವ ಸಂಭವವಿದ್ದು, ಕೆಲಸದ ಒತ್ತಡ ಹೆಚ್ಚಾಗಲಿದೆ. ವಿದ್ಯಾರ್ಥಿಗಳಲ್ಲಿ ನಿರುತ್ಸಾಹ ಮೂಡಬಹುದು. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಸಾಮಾನ್ಯ ದಿನ
ವೃಶ್ಚಿಕ : ಅಧಿಕ ಶ್ರಮ ಹಾಗೂ ಧನವ್ಯಯ. ಕುಟುಂಬದಲ್ಲಿ ಜಗಳ, ವೃತ್ತಿಯಲ್ಲಿ ಅನಿರೀಕ್ಷಿತ ಬದಲಾವಣೆ, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಧನಲಾಭ.

ಶಿವಮೊಗ್ಗ ನಗರ ಪಾಲಿಕೆಯಲ್ಲಿ ಇ ಸ್ವತ್ತು ವಿತರಣೆ ತಾತ್ಕಾಲಿಕ ಸ್ಥಗಿತ! ಕಾರಣ ಇದೆ! ಪೂರ್ತಿ ವಿವರ ಓದಿ
ಧನುಸ್ಸು: ಹೊಸ ಕೆಲಸಕ್ಕೆ ಚಾಲನೆ, ಆರ್ಥಿಕಾಭಿವೃದ್ಧಿಯ ಜೊತೆಗೆ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದಾರೆ. ಆರ್ಥಿಕ ಸಂಕಷ್ಟ ನಿವಾರಣೆಯತ್ತ ಗಮನ, ಅನಾರೋಗ್ಯ , ಉದ್ಯೋಗ ಹಾಗೂ ವ್ಯಾಪಾರದಲ್ಲಿ ಶ್ರಮದ ದಿನ.
ಮಕರ : ವ್ಯವಹಾರಗಳಲ್ಲಿ ಅಲ್ಪ ಆತಂಕ ಅಥವಾ ಅಡೆತಡೆ, ದೈಹಿಕ ಶ್ರಮ, ಕೆಲಸದ ಒತ್ತಡ, ಮನಸ್ಸಿಗೆ ಕಿರಿಕಿರಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಒತ್ತಡದ ದಿನ
ಕುಂಭ : ಹೊಸ ವ್ಯಕ್ತಿಗಳ ಪರಿಚಯ, ಸಮಾಜದಲ್ಲಿ ಗೌರವ. ಹಣಕಾಸಿನ ಪರಿಸ್ಥಿತಿಯು ತೃಪ್ತಿಕರ, ಉದ್ಯೋಗ ಹಾಗೂ ವ್ಯಾಪಾರದಲ್ಲಿಂದು ಧನಲಾಭ.
ಮೀನ : ಕೆಲಸ ಕಾರ್ಯಗಳಲ್ಲಿ ಸಂಕಷ್ಟ, ಅನಗತ್ಯ ಖರ್ಚು. ಮನೆಯವರ ಜೊತೆ ಮಾತಿನ ಚಕಮಕಿ, ಆರ್ಥಿಕ ಪರಿಸ್ಥಿತಿಯು ಗೊಂದಲಮಯ. ಆಧ್ಯಾತ್ಮಿಕ ಚಿಂತನೆಗಳತ್ತ ಗಮನ . ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ

ಮಲೆನಾಡು APMCಗಳಲ್ಲಿ ಅಡಿಕೆ ವಹಿವಾಟು ಜೋರು! ಶಿವಮೊಗ್ಗ, ಸಾಗರ, ಯಲ್ಲಾಪುರ, ಶಿರಸಿ! ಎಲ್ಲೆಲ್ಲಿ ಎಷ್ಟಾಗಿದೆ ಅಡಿಕೆ ದರ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಇಂದಿನ ದಿನ ಭವಿಷ್ಯ: ಹನ್ನೆರಡು ರಾಶಿಗಳ ಫಲ ಮತ್ತು ಪಂಚಾಂಗದ ವಿವರಗಳು ಇಲ್ಲಿದೆ , Daily Horoscope 24 December 2025: Rashi Bhavishya and Panchangam in Kannada
