Cyber Crime ಖಾಸಗಿ ಕಂಪನಿಯೊಂದರಲ್ಲಿ ಪಾರ್ಟ್ ಟೈಮ್ ಜಾಬ್ ಮಾಡಿದರೆ ಕಮಿಷನ್ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 2,49,886 ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಿ ಶಿವಮೊಗ್ಗ ಕ್ರೈಮ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿಲಾಗಿದೆ.
Cyber Crime ಹೇಗಾಯ್ತು ಘಟನೆ
ಜುಲೈ 18 ರಂದು ಶಿಕಾರಿಪುರ ತಾಲೂಕಿನ ಗಾಮ ಗ್ರಾಮದ ವ್ಯಕ್ತಿಯೊಬ್ಬರಿಗೆ ಅಪರಿಚಿತ ಟೆಲಿಗ್ರಾಂ ಖಾತೆಯಿಂದ ಸಂದೇಶವೊಂದು ಬಂದಿದೆ. ಆ ಸಂದೇಶವನ್ನು ತೆರೆದು ನೋಡಿದಾಗ, ಒಂದು ಅಜ್ಞಾತ ಕಂಪನಿಯ ಹೆಸರನ್ನು ಹೇಳಿ, ಅಲ್ಲಿ ಪಾರ್ಟ್ ಟೈಂ ಕೆಲಸವಿದೆ ಎಂದು ಆಮಿಷವೊಡ್ಡಿದ್ದಾರೆ. ಅವರ ‘ಆರ್ಡರ್’ಗಳನ್ನು ಖರೀದಿಸಿದರೆ ಹೆಚ್ಚಿನ ಮೊತ್ತದ ಕಮಿಷನ್ ನೀಡುವುದಾಗಿ ನಂಬಿಸಿದ್ದಾರೆ.
ಇದನ್ನು ನಂಬಿದ ಶಿಕಾರಿಪುರದ ವ್ಯಕ್ತಿ, ಸುಲಭವಾಗಿ ಲಾಭಾಂಶ ಪಡೆಯುವ ಉದ್ದೇಶದಿಂದ ಹಂತ ಹಂತವಾಗಿ ವಂಚಕರ ವಿವಿಧ ಯುಪಿಐ (UPI) ಐಡಿಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ. ನಂತರ, ತಮ್ಮ ಲಾಭಾಂಶವನ್ನು ಕೇಳಿದಾಗ, ವಂಚಕರು 35 ಸಾವಿರ ರೂಪಾಯಿ ‘ಸರ್ವಿಸ್ ಚಾರ್ಜ್’ ನೀಡಿದರೆ ಮಾತ್ರ ಲಾಭಾಂಶ ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಹಂತದಲ್ಲಿ, ತಾನು ವಂಚನೆಗೆ ಒಳಗಾಗಿರುವುದು ಆ ವ್ಯಕ್ತಿಗೆ ಅರಿವಾಗಿದೆ.


ಈ ಹಿನ್ನೆಲೆ ವ್ಯಕ್ತಿ ಶಿವಮೊಗ್ಗ ಕ್ರೈಮ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ವಂಚಕರನ್ನು ಬಂಧಿಸುವಂತೆ ಪ್ರಕರಣವನ್ನು ದಾಖಲಿಸಿದ್ದಾರೆ.