Sigandur Bridge 2 Load Test : Crucial 2nd Phase Load Test Underway, Traffic Restricted! ಸಾಗರ: ಸಿಗಂದೂರು ಸೇತುವೆಯ 2ನೇ ಹಂತದ ಲೋಡ್ ಟೆಸ್ಟ್ ಆರಂಭ – ಸಂಚಾರ ನಿರ್ಬಂಧ!
ಸಾಗರ: ಇನ್ನೇನು ಉದ್ಘಾಟನೆಗೆ ಸಿದ್ದಗೊಂಡಿರುವ ಬಹುನಿರೀಕ್ಷಿತ ಸಿಗಂದೂರು ಸೇತುವೆಯಲ್ಲಿ ಈಗಾಗಲೇ ಒಂದು ಹಂತದ ಲೋಡ್ ಟೆಸ್ಟಿಂಗ್ ಮುಗಿದಿದೆ. ಇದರ ಬೆನ್ನಲ್ಲೆ ಇದೀಗ ಇನ್ನೊಂದು ಸುದ್ದಿ ಹೊರಬಿದ್ದಿದ್ದು ಎರಡನೇ ಹಂತದ ಲೋಡ್ ಟೆಸ್ಟ್ (ಭಾರ ಪರೀಕ್ಷೆ) ಪ್ರಕ್ರಿಯೆ ಪ್ರಾರಂಭವಾಗಿದೆ.

Karnataka’s longest inland cable-stayed bridge – a massive 2.25 km extradosed balanced cantilever structure with 740m of cable.
ಸೇತುವೆ ಕ್ಷಮತೆ ಅಥವಾ ಸೇತುವೆಯ ಶಕ್ತಿಯನ್ನು ಅಳೆಯುವ ಹಾಗೂ ಅದರ ಸುರಕ್ಷತೆಯನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಈ ಲೋಡ್ ಟೆಸ್ಟ್ ನಡೆಸಲಾಗುತ್ತದೆ. ಅಂಬಾರಗೋಡ್ಲು ಮತ್ತು ಕಳಸವಳ್ಳಿ ನಡುವೆ ನಿರ್ಮಾಣಗೊಂಡಿರುವ ಈ ಸೇತುವೆಯ ಕಾಮಗಾರಿ ಬಹುತೇಕ ಅಂತಿಮಗೊಂಡಿದ್ದು ಉದ್ಘಾಟನೆಗೆ ಸಿದ್ದವಾಗುತ್ತಿದೆ. ಮೊದಲ ಲೋಡ್ ಟೆಸ್ಟ್ ಮಾದರಿಯಲ್ಲಿ ಎರಡನೇ ಲೋಡ್ ಟೆಸ್ಟಿಂಗ್ ನಡೆಯಲಿದ್ದು, ಈ ಸಲ ಕೇಬಲ್ ಗಳನ್ನು ಅಳವಡಿಸಿರುವ ಜಾಗದಲ್ಲಿ ಪರೀಕ್ಷೆಗೆ ನಡೆಯಲಿದೆ. ಈ ಬಾರಿಯೂ ನೂರು ಟನ್ ಭಾರವನ್ನು ಸೇತುವೆಯ ಮೇಲೆ ಹೊರಿಸಿ ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

Karnataka’s longest inland cable-stayed bridge – a massive 2.25 km extradosed balanced cantilever structure with 740m of cable.
ಸೇತುವೆಯಲ್ಲಿ ಕೇಬಲ್‌ಗಳು ಅಳವಡಿಸಲಾಗಿರುವ ಭಾಗಗಳಲ್ಲಿ ಮಾತ್ರ ನೂರು ಟನ್ ಭಾರವನ್ನು ಹೇರಿ ಅದರ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತಿದೆ. ಕೇಬಲ್‌ಗಳಿಲ್ಲದ ಸೇತುವೆಯ ಭಾಗದಲ್ಲಿ ಈಗಾಗಲೇ ಮೊದಲ ಹಂತದ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನೂ ಲೋಡ್ ಟೆಸ್ಟ್ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸದ್ಯಕ್ಕೆ ಸೇತುವೆ ಮೇಲೆ ವಾಹನಗಳು ಮತ್ತು ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಮೊದಲ ಲೋಡ್ ಟೆಸ್ಟ್ನ ಸುದ್ದಿ ಇಲ್ಲಿದೆ ಓದಿ : Sagar Sigandur Bridge june 25 /ಫಸ್ಟ್ ಟೆಸ್ಟ್ನಲ್ಲಿ ಸಿಗಂದೂರು ಸೇತುವೆ/ ಏನಿದು ಲೋಡ್ ಟೆಸ್ಟಿಂಗ್ ?
The second phase of the load test has begun on the Sigandur Bridge in Sagar, Karnataka. 100 tonnes of weight are being used for this crucial test on the Ambaragodlu-Kalasavalli bridge, leading to temporary traffic restrictions.
Sigandur Bridge 2 Load Test Sigandur Bridge, Sagar, Load Test, Bridge construction, Ambaragodlu, Kalasavalli, Extra Dosed Cable Test, Traffic restrictions, Karnataka infrastructure, Shivamogga news, Bridge safety, Public works.
Sigandur Bridge 2 Load Test