ಹೇಗಾಗಿದೆ ನೋಡಿ ಸಿಗಂದೂರು ಸೇತುವೆ
The Sigandur bridge will be ready for public transport in a few days and mp BY Raghavendra has shared a drone photo of the bridge on his Facebook account.
SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 19, 2024
ಶಿವಮೊಗ್ಗ | ಇನ್ನೇನು ಕೆಲವೇ ದಿನಗಳಲ್ಲಿ ಸಿಗಂದೂರು ಸೇತುವೆ ಸಾರ್ವಜನಿಕ ಸಂಚಾರಕ್ಕೆ ಸಿದ್ದವಾಗಲಿದ್ದು, ಆ ಸೇತುವೆಯ ಡ್ರೋನ್ ಫೋಟೋವನ್ನು ಸಂಸದ ಬಿವೈ ರಾಘವೇಂದ್ರ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವೈಮಾನಿಕ ನೋಟವು ಪ್ರಗತಿ ಮತ್ತು ಸಂಪರ್ಕದ ಸಂಕೇತವಾದ ಸಿಗಂದೂರು ಸೇತುವೆಯ ಬೆರಗುಗೊಳಿಸುವ ಸೌಂದರ್ಯವನ್ನು ಸೆರೆಹಿಡಿಯುತ್ತದೆ. ಎಂದು ಸಂಸದರು ಕ್ಯಾಪ್ಷನ್ ಕೊಟ್ಟಿದ್ದಾರೆ. ಸಂಸದರ ಈ ಪೋಸ್ಟ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರು ಸಮೀಪ ಶರಾವತಿ ಹಿನ್ನೀರಲ್ಲಿ ನಿರ್ಮಾಣವಾಗುತ್ತಿರುವ ಈ ಸೇತುವೆ ಅಂತಿಮಘಟ್ಟ ತಲುಪಿದೆ. ಸೇತುವೆಯ ಕೇಬಲ್ ಅಳವಡಿಕೆ ಕೆಲಸಗಳು ನಡೆಯುತ್ತಿದ್ದು ಸೇತುವೆಯು ನೋಡಲು ಅದ್ಭುತ ರಮಣೀಯ ದೃಶ್ಯದಂತೆ ಕಾಣುತ್ತಿದೆ. 2.13 ಕಿ.ಮೀ ಉದ್ದದ ಈ ಸೇತುವೆ, ದೇಶದ 7ನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆ ಅಂತಾ ಕರೆಸಿಕೊಳ್ಳಲಿದೆ. ಸೇತುವೆ ಉದ್ಘಾಟನೆಯ ಬಗ್ಗೆ ಇತ್ತೀಚೆಗೆಷ್ಟೆ ಸಂಸದ ಬಿವೈ ರಾಘವೇಂದ್ರ ರವರು ಮಾತನಾಡಿದ್ದರು. ಸಿಗಂದೂರು ಸೇತುವೆ ಕಾಮಗಾರಿ 2025ರ ಮೇ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಅವರು ಘೋಷಿಸಿದ್ದರು.
SUMMARY | The Sigandur bridge will be ready for public transport in a few days and mp BY Raghavendra has shared a drone photo of the bridge on his Facebook account.
KEYWORDS | Sigandur bridge, public, BY Raghavendra, Facebook,