Congress Government ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಪುತ್ರ ಬಿಎಸ್ ಗಣೇಶ್ಗೆ ಹೊಸ ಜವಾಬ್ದಾರಿ! ಕುತೂಹಲ ಮೂಡಿಸಿದ ಕಾಂಗ್ರೆಸ್ ಸರ್ಕಾರದ ನಡೆ
Congress Government ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳನ್ನು ನೋಡುತ್ತಿದ್ದೇವೆ. ಇದರ ನಡುವೆ ಎರಡನೇ ಹಂತದ ರಾಜಕೀಯ ನಾಯಕರಿಗೆ ಸ್ಥಾನಮಾನಗಳನ್ನು ನೀಡುವ ಕೆಲಸಗಳು ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ರವರ ಪುತ್ರ ಬಿಎಸ್ ಗಣೇಶ್ರವರನ್ನು ಶಿವಮೊಗ್ಗ ಜಿಲ್ಲಾ ಯೋಜನೆಗಳ ಅನುಷ್ಠಾನ ಸಮಿತಿಗೆ ನೇಮಿಸಿದೆ. ಈ ಹಿಂದೆ 13-03-2024 ರಂದು ರಚಿಸಿದ್ದ ಸಮಿತಿಗೆ ಭದ್ರಾವತಿ ಅರಳಹಳ್ಳಿಯ ಮಣಿ ಶೇಖರ್ರವರನ್ನು ನೇಮಿಸಲಾಗಿತ್ತು. ಇದೀಗ 10.07.2025 ರಂದು ರಾಜ್ಯ ಸರ್ಕಾರ ಈ ಸಂಬಂಧ ಹೊಸದೊಂದು ಆದೇಶವನ್ನು ಹೊರಡಿಸಿದೆ.
ಮಣಿ ಶೇಖರ್ರವರ ಬದಲಾಗಿ ಬಿಎಸ್ ಗಣೇಶ್ರನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರನ್ನ ನೇಮಿಸಲಾಗಿದೆ. ಭದ್ರಾವತಿ ರಾಜಕಾರಣದಲ್ಲಿ ಕಾಂಗ್ರೆಸ್ ಸರ್ಕಾರದ ಈ ನಡೆ ಸಾಕಷ್ಟು ಕುತೂಹಲವನ್ನು ಮೂಡಿಸುತ್ತಿದೆ.
ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸಂಬಂಧಿಸಿದಂತೆ ಮಹತ್ವದ ತಿದ್ದುಪಡಿ ಆದೇಶವನ್ನು ಹೊರಡಿಸಿರುವುದು, ಎರಡನೇ ಹಂತದ ನಾಯಕರನ್ನು ಸಕ್ರಿಯ ರಾಜಕಾರಣದಲ್ಲಿ ಸ್ಥಾನಮಾನ ಒದಗಿಸುವ ಪ್ರಾಥಮಿಕ ಪ್ರಕ್ರಿಯೆ ಎಂದು ಚರ್ಚೆಯಾಗುತ್ತಿದ್ದು, ಭದ್ರಾವತಿಯ ಸ್ಥಳೀಯರ ಮುಖಂಡರು ಬಿಎಸ್ ಗಣೇಶ್ರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
