nitin gadkari july 12:  ಪ್ರಧಾನಿ ಹುದ್ದೆಗೆ ನಿತಿನ್ ಗಡ್ಕರಿ ಸೂಕ್ತ : ಬೇಳೂರು ಗೋಪಾಲಕೃಷ್ಣ 

ಹಂಚಿಕೊಳ್ಳಿ
WhatsApp Facebook X Telegram
MLA Beluru Gopalakrishna statement madhu bangarappa
MLA Beluru Gopalakrishna statement madhu bangarappa

nitin gadkari :  ಪ್ರಧಾನಿ ಹುದ್ದೆಗೆ ನಿತಿನ್ ಗಡ್ಕರಿ ಸೂಕ್ತ : ಶಾಸಕ ಬೇಳೂರು ಗೋಪಾಲಕೃಷ್ಣ 

ಪ್ರಧಾನಿ ಹುದ್ದೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಮರ್ಥ ಅಭ್ಯರ್ಥಿಯಾಗಿದ್ದು, ಅವರಿಗೆ ಪ್ರಧಾನಿ ಸ್ಥಾನ ನೀಡಬೇಕು ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

nitin gadkari ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು “ರಾಜಕೀಯದಲ್ಲಿ 75 ವರ್ಷ ದಾಟಿದವರು ಸ್ವಯಂ ನಿವೃತ್ತರಾಗಬೇಕು” ಎಂದು ಹೇಳಿದ್ದಾರೆ. ಇದೇ ಸೆಪ್ಟೆಂಬರ್ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ತುಂಬಲಿದ್ದು, ಭಾಗವತ್ ಅವರ ಈ ಹೇಳಿಕೆಯು ಮೋದಿ ಅವರು ಪ್ರಧಾನಿ ಸ್ಥಾನದಿಂದ ಇಳಿಯಬೇಕೆಂದು ಪರೋಕ್ಷವಾಗಿ ಸೂಚಿಸಿದಂತಿದೆ.ಪ್ರಧಾನಿ ಮೋದಿ ಅಧಿಕಾರದಿಂದ ಕೆಳಗಿಳಿಯಬೇಕು, ನಿತಿನ್ ಗಡ್ಕರಿ ಅವರಿಗೆ ಪ್ರಧಾನಿ ಹುದ್ದೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಇತ್ತೀಚೆಗಷ್ಟೇ ನಿತಿನ್ ಗಡ್ಕರಿ ಅವರು ತಮ್ಮ ಭಾಷಣದಲ್ಲಿ, “ಬಡವರು, ಬಡವರಾಗಿಯೇ ಇದ್ದಾರೆ. ಭಾರತ ಈಗಲೂ ಬಡವರ ರಾಷ್ಟ್ರವಾಗಿದೆ” ಎಂದು ಹೇಳಿದ್ದರು. ಗಡ್ಕರಿ ಅವರು ಇದ್ದದ್ದನ್ನು ಇದ್ದ ಹಾಗೆ ನೇರವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಹೊಗಳಿದರು. ಹೀಗಾಗಿ, ಅವರು ಪ್ರಧಾನಿಯಾದರೆ ದೇಶ ಮತ್ತಷ್ಟು ಅಭಿವೃದ್ಧಿಯಾಗಲು ಸಾಧ್ಯ ಎಂದು ಬೇಳೂರು ವಿಶ್ವಾಸ ವ್ಯಕ್ತಪಡಿಸಿದರು.

nitin gadkari ಬೇಲೂರು ಗೋಪಾಲ ಕೃಷ್ಣ
nitin gadkari ಬೇಲೂರು ಗೋಪಾಲ ಕೃಷ್ಣ

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor