
ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಕಾರವಾರ ನಗರ ವಾಸಿ ಭೂದೇವಿ ಎಂಬ 69 ವರ್ಷದ ಮಹಿಳೆಯು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆಕೆಯನ್ನು ಶಿವಮೊಗ್ಗದ ಮಾನಸ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದ ವೇಳೆ ನವಂಬರ್ 05 ರಂದಯ ಕಾಣೆಯಾಗಿದ್ದು, ಪತ್ತೆಗಾಗಿ ಪೊಲೀಸರು ಪ್ರಕಟಣೆಯನ್ನು ಹೊರಡಿಸಿದ್ದಾರೆ.



ಈಕೆಯು 5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ದಪ್ಪ ಮೈಕಟ್ಟು ಹೊಂದಿದ್ದು, ಎಡಗೈ ಮೇಲೆ ಹಳೆಯ ಗಾಯದ ಗುರುತು ಇರುತ್ತದೆ. ಕೆಂಪು ಬಣ್ಣದ ಸೀರೆ ಧರಿಸಿದ್ದು, ನೀಲಿ ಬಣ್ಣದ ಬ್ಯಾಗ್ ತೆಗೆದುಕೊಂಡು ಹೋಗಿರುತ್ತಾರೆ.
ಈಕೆಯ ಬಗ್ಗೆ ಸುಳಿವು ದೊರತಲ್ಲಿ, ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9480803345/ 948366947 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.


