SHIVAMOGGA | Jan 25, 2024 | ಶಿವಮೊಗ್ಗ ವಿಮಾನ ನಿಲ್ದಾಣ ಆಗಾಗ ವಿಶೇಷವಾಗಿ ಸುದ್ದಿಯಾಗುತ್ತಲೇ ಇರುತ್ತದೆ. ಈ ಸರ್ತಿ ಸೋಗಾನೆಯ ಬಳಿ ಇರುವ ಕುವೆಂಪು ವಿಮಾನ ನಿಲ್ದಾಣವೂ ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ. ಇದಕ್ಕೆ ಕಾರಣ ನಾಗರ ಹಾವು.
ಮಲೆನಾಡಿನಲ್ಲಿ ಹಾವುಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದು ವಿಶೇಷವೇನಲ್ಲ. ಆದಾಗ್ಯು ಶಿವಮೊಗ್ಗ ಏರ್ಪೋರ್ಟ್ ಆರಂಭವಾದ ಮೇಲೆ ಅಲ್ಲಿ ಹಾವು ಕಾಣಿಸಿಕೊಂಡಿದ್ದರ ಉದಾಹರಣೆ ಇದೇ ಮೊದಲು. ಅದರಲ್ಲಿಯು ಹಾವು ಟರ್ಮಿನಲ್ ಒಳಗಡೆಯೇ ಕಾಣಿಸಿರುವುದು ಅಲ್ಲಿದ್ದವರ ಆತಂಕಕ್ಕೆ ಕಾರಣವಾಗಿತ್ತು.
ವಿಡಿಯೋ ನೋಡಿ, ಮಲೆನಾಡು ಟುಡೆಯ ಫೇಸ್ಬುಕ್ ಪೇಜ್ಗೆ ನಿಮ್ಮದೊಂದು ಲೈಕ್ ಕೊಡಿ , ಸುದ್ದಿ ಇನ್ನೂ ಇದೆ
ನಿನ್ನೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಾಗರ ಹಾವು ಕಾಣಿಸಿರುವುದು ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿತ್ತು. ಹೀಗಾಗಿ ಇತ್ತೀಚೆಗ ಹಾವು ಕಚ್ಚಿದ್ದರಿಂದ ಅನಾರೋಗ್ಯಕ್ಕೀಡಾಗಿ, ಇದೀಗ ಚೇತರಿಸಿಕೊಂಡು ಕಮ್ ಬ್ಯಾಕ್ ಮಾಡಿರುವ ಸ್ನೇಕ್ ಕಿರಣ್ ರಿಗೆ ಕರೆ ಮಾಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಕಿರಣ್, ಹಿಂದಿಗಿಂತಲೂ ಹೆಚ್ಚಿನ ಜಾಗ್ರತೆಯನ್ನು ವಹಿಸಿ ಸುರಕ್ಷಿತವಾಗಿ ನಾಗರಹಾವನ್ನ ಹಿಡಿದಿದ್ದಾರೆ. ಟರ್ಮಿನಲ್ನ ಒಳಗಡೆಯಿದ್ದ ಕೋಣೆಯೊಂದರಲ್ಲಿ ಹಾವು ಸೇರಿಕೊಂಡಿತ್ತು. ಬೆಳಕು ಇದ್ದ ಕಾರಣಕ್ಕೆ ಹಾವಿನ ಇರುವಿಕೆ ಸ್ಪಷ್ಟವಾಗಿತ್ತು. ನೆಲ ನೈಸ್ ಆಗಿದ್ದರಿಂದ ಹಾವಿಗೆ ಹರಿದಾಡಲು ಸ್ವಲ್ಪ ಕಷ್ಟವಾಗುತ್ತಿತ್ತು.
ವಿಡಿಯೋ ನೋಡಿ, ಮಲೆನಾಡು ಟುಡೆಯ ಫೇಸ್ಬುಕ್ ಪೇಜ್ಗೆ ನಿಮ್ಮದೊಂದು ಲೈಕ್ ಕೊಡಿ , ಸುದ್ದಿ ಇನ್ನೂ ಇದೆ
ಏರ್ಪೋರ್ಟ್ನಲ್ಲಿ ಅರ್ಧಗಂಟೆ ಕಾರ್ಯಾಚರಣೆ ನಡೆಸಿದ ಸ್ನೇಕ್ ಕಿರಣ್ ಹಾವು ಹಿಡಿವ ಟೂಲ್ಸ್ ಗಳನ್ನು ಬಳಸಿ ನಾಗರಾಜನನ್ನು ಹಿಡಿದಿದ್ದಾರೆ. ಬಳಿಕ ಅದನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಅರಣ್ಯ ಇಲಾಖೆ ಸುಪರ್ಧಿಗೆ ನೀಡಿದ್ದಾರೆ.
