china theft ಶಿವಮೊಗ್ಗ : malenadutoday news ಶಿವಮೊಗ್ಗದಲ್ಲಿ ನಡೆದ ವಿವಿಧ ಘಟನೆಗಳಿಗೆ ಸಂಬಂಧಿಸಿದಂತೆ ಸಂಕ್ಪ್ತಿಪ್ತವಾಗಿ ವರದಿ ನೀಡುವ ಮಲೆನಾಡು ಟುಡೆಯ ಇವತ್ತಿನ ಚಟ್ ಪಟ್ ಸುದ್ದಿ ಇಲ್ಲಿದೆ
china theft ಕಾರು ಡಿಕ್ಕಿ ಪಾದಾಚಾರಿ ಸಾವು
ಭದ್ರಾವತಿ ತಾಲ್ಲೂಕು ಅಗರದಹಳ್ಳಿ ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿಯಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಸಾವನ್ನಪ್ಪಿದ್ದಾರೆ. ಮೃತರನ್ನು ಅಗರದಹಳ್ಳಿ ಕ್ಯಾಂಪ್‌ನ ನಾಗಪ್ಪ (62) ಮೃತ ದುರ್ದೈವಿ. ಶಿವಮೊಗ್ಗ – ಚನ್ನಗಿರಿ ರಸ್ತೆಯಲ್ಲಿ ಘಟನೆ ನಡೆದಿದ್ದು ಪ್ರಕರಣ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ
ಸಾಮೂಹಿಕ ಮದುವೆಯಲ್ಲಿ ಅಪ್ರಾಪ್ತ ವಿವಾಹಕ್ಕೆ ತಡೆ
ಶಿವಮೊಗ್ಗ ಸಿಟಿಯಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ವಿನೋಬನಗರ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹದಲ್ಲಿ ನಡೆಯಬೇಕಿದ್ದ ಎರಡು ಜೋಡಿ ಅಪ್ರಾಪ್ತರ ಮದುವೆಯನ್ನು ಶಿವಮೊಗ್ಗ ತಹಶಿಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ತಡೆದಿದೆ. ಒಟ್ಟು 8 ಜೋಡಿಗಳ ಸಾಮೂಹಿಕ ವಿವಾಹ ಇಲ್ಲಿ ನಡೆಯುತ್ತಿತ್ತು. ಈ ಪೈಕಿ ಎರಡು ಜೋಡಿ ಅಪ್ರಾಪ್ತರು ಮದುವೆಗೆ ಸಿದ್ಧವಾಗಿದ್ದರು. ಈ ಹಿನ್ನೆಲೆಯಲ್ಲಿ ಮಾಹಿತಿ ಪಡೆದ ತಹಶೀಲ್ದಾರ್ ರಾಜೀವ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಾಬಾಯಿ, ವಲಯ ಮೇಲ್ವಿಚಾರಕಿ ರೇಖಾ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಯು ವಿನೋಬನಗರ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ. ಬಳಿಕ ಅಪ್ರಾಪ್ತರಾಗಿದ್ದವರನ್ನು ಮಕ್ಕಳ ಸಹಾಯವಾಣಿ ಸಿಬ್ಬಂದಿಯು ಕಾನೂನು ಪ್ರಕಾರ ಮಕ್ಕಳ ಮತ್ತು ಮಹಿಳಾ ಇಲಾಖೆಯ ವಶಕ್ಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸರ ಕಳ್ಳತನ
ಪೊಲೀಸರ ಕಾಲ್ನಡಿಗೆ ಗಸ್ತು, ಏರಿಯಾ ಡಾಮಿನೇಷನ್ ಹಾಗೂ ಎರಿಯಾ ಪೆಟ್ರೋಲಿಂಗ್ನ ನಡುವೆ ಶಿವಮೊಗ್ಗದಲ್ಲಿ ಮತ್ತೊಮ್ಮೆ ಸರಗಳ್ಳತನ ನಡೆದಿದೆ. ನಗರದ ರಾಜೇಂದ್ರ ನಗರದ ಪಾರ್ಕ್ ಬಳಿಯಲ್ಲಿ ಬೆಳಗ್ಗೆ ವಾಕ್ ಮಾಡುತ್ತಿದ್ದ ಮಹಿಳೆಯನ್ನ ಬೈಕ್ನಲ್ಲಿ ಬೆನ್ನತ್ತಿದ್ದ ವ್ಯಕ್ತಿಯೊಬ್ಬ, ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತೋಯ್ದಿದ್ದಾನೆ. ಘಟನೆಯಲ್ಲಿ ಸುಮಾರು ₹2.30 ಲಕ್ಷದ 40 ಗ್ರಾಂ ತೂಕದ ಚಿನ್ನದ ಸರ ಕಳುವಾಗಿದ್ದು, ಈ ಕುರಿತು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಧರ್ಮಸ್ಥಳ ಅನನ್ಯಾ ಭಟ್ ಕೇಸ್, ರಿಪ್ಪನ್ಪೇಟೆಯಲ್ಲಿದ್ರಾ ಸುಜಾತಾ ಭಟ್! ನಿಜವೇನು? https://malenadutoday.com/dharmasthala-ananya-bhat-case-link-to-shivamogga/
