ಸುದ್ದಿಯ ಸ್ಥಳ: Shivamogga district, Karnataka
ಶಿವಮೊಗ್ಗ ಸುದ್ದಿ, malenadu today news , ಹಾಗೊಂದು ವೇಳೆ ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರಿಂದ ಬಚಾವ್ ಆಗಬಹುದೇನೋ! ಆದರೆ ಶಿವಮೊಗ್ಗ ಟ್ರಾಫಿಕ್ ಪೊಲೀಸರ ಕಣ್ಣಗಳಿಂದ ತಪ್ಪಿಸಿಕೊಳ್ಳುವುದು ಕಷ್ಟ. ಕಷ್ಟ.ಏಕೆಂದರೆ ಶಿವಮೊಗ್ಗ ನಾಗರಿಕರೇ ನೇರವಾಗಿ ಫೋಟೋ ತೆಗೆದು ಟ್ರಾಫಿಕ್ ರೂಲ್ಸ್ ವೈಲೇಷನ್ ಆಗಿದೆ ಎಂದು ಟ್ರಾಫಿಕ್ ಪೊಲೀಸರಿಗೆ ವಾಟ್ಸ್ಯಾಪ್ ಮಾಡುತ್ತಾರೆ. ಯೂತ್ಸ್ನ ಕಾಮನ್ ಲಾಂಗ್ವೇಜ್ನಲ್ಲಿ ಹೇಳಬೇಕೆಂದರೆ, ಜನರೇ ಹಾಕ್ಕೊಡುತ್ತಾರೆ. ಇದಕ್ಕೆ ಶಿವಮೊಗ್ಗ ಸಿಟಿ ಬಸ್ ಡ್ರೈವರ್ ಒಬ್ಬರು ಸಾಕ್ಷಿಯಾಗಿದ್ದಾರೆ
ಹೌದು, ಕಳೆದ ಭಾನುವಾರ, ಶಿವಮೊಗ್ಗ ನಗರ ದ ಸಿಟಿ ಬಸ್ ವೊಂದರ ಚಾಲಕ ಮೊಬೈಲ್ನಲ್ಲಿ ಮಾತನಾಡ್ತಾ ಡ್ರೈವ್ ಮಾಡುತ್ತಿದ್ದರು. ನ್ಯಾಕ್ ಸಿಕ್ಕ ಮೇಲೆ ಯಾವ ಕೆಲಸವಾದರೂ ಸಲೀಸು ಎನ್ನುವ ಹಾಗೆ ಡ್ರೈವರ್ ಸಹ ಮೊಬೈಲ್ನಲ್ಲಿ ಮಾತನಾಡುವ ಹಾಗೂ ಬಸ್ ಚಲಾಯಿಸುವ ಎರಡು ಕೆಲಸವನ್ನು ಒಟ್ಟಿಗೆ ಮಾಡುತ್ತಿದ್ದರು. ಸಹಜವಾಗಿ ಇದು ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ. ಟಿಪ್ಪುನಗರದಿಂದ ಬಸ್ ನಿಲ್ದಾಣದವರೆಗೆ ಚಾಲಕ ಮೊಬೈಲ್ನಲ್ಲಿ (ಫೋನ್) ಮಾತನಾಡುತ್ತಾ ಬಸ್ ಚಲಾಯಿಸುತ್ತಿರುವುದನ್ನು ನೋಡಿ ಸಿಟ್ಟಿಗೆದ್ದ ಸಾರ್ವಜನಿಕರು ಆ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಅವರ ಮೊಬೈಲ್ಗೆ ವಾಟ್ಸಾಪ್ ಮಾಡಿದ್ದಾರೆ.
ವಿಡಿಯೋ ನೋಡಿದ ಪಿಎಸ್ಐ ಚಾಲಕನಿಗೆ ಮೊಬೈಲ್ ರೈಡ್, ಅಜಾಗರೂಕ ಮತ್ತು ಅಪಾಯಕಾರಿ ಚಾಲನೆ (ಅಜಾಗರೂಕ ಚಾಲನೆ), ಮತ್ತು ಸಮವಸ್ತ್ರವಿಲ್ಲದೆ ವಾಹನ ಚಾಲನೆ ಆರೋಪದ ಅಡಿಯಲ್ಲಿ ಒಟ್ಟು ಒಟ್ಟು ರೂ. 2,500 ದಂಡ ವಿಧಿಸಿದ್ದಾರೆ. ಈ ಬಗ್ಗೆ ಶಿವಮೊಗ್ಗ ಟ್ರಾಪಿಕ್ ಪೊಲೀಸ್ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಸಹ ಮಾಡಲಾಗಿದೆ.
bus driver
