ಕ್ಲುಲ್ಲಕ ಕಾರಣಕ್ಕೆ ಮಗನನ್ನೆ ಮಚ್ಚಿನಿಂದ ಕೊಚ್ಚಿ ಕೊಂದ ತಂದೆ 

prathapa thirthahalli
Prathapa thirthahalli - content producer
SUNCONTROL_FINAL-scaled

ಚಿಕ್ಕಮಗಳೂರು : ಕುಡಿದ ಮತ್ತಿನಲ್ಲಿ ತಂದೆ ಮಗನ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ಹೋಗಿ ತಂದೆಯೇ ಮಗನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಲ್ಲಿನ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ  ನಡೆದಿದೆ. ಈ ದುರ್ಘಟನೆಯಲ್ಲಿ 29 ವರ್ಷದ ಪ್ರದೀಪ್ ಆಚಾರ್ ಮೃತಪಟ್ಟ ದುರ್ದೈವಿಯಾಗಿದ್ದು, ತಂದೆ ರಮೇಶ್ ಆಚಾರ್ ಕೊಲೆ ಮಾಡಿದ ಆರೋಪಿಯಾಗಿದ್ದಾರೆ.

udhyoga mele

ಸಿಟಿಯಿಂದ ಹಳ್ಳಿಗಳವರೆಗೂ ನಾಳೆ ಶಿವಮೊಗ್ಗದಲ್ಲಿ ಬಹುತೇಕ ಕಡೆಗಳಲ್ಲಿ ಕರೆಟ್ ಇರಲ್ಲ! ವಿವರ ತಿಳ್ಕೊಂಡುಬಿಡಿ

chikkamagaluru ಮೂಲಗಳ ಪ್ರಕಾರ, ರಮೇಶ್ ಆಚಾರ್ ಹಾಗೂ ಪ್ರದೀಪ್ ಇಬ್ಬರೂ ಕುಡಿತದ ವ್ಯಸನಿಗಳಾಗಿದ್ದು, ಮನೆಯಲ್ಲಿ ಪ್ರತಿದಿನವೂ ಕಿತ್ತಾಡುತ್ತಿದ್ದರು. ಇವರ ನಿರಂತರ ಜಗಳದಿಂದ ಬೇಸತ್ತಿದ್ದ ತಾಯಿ ಮನೆಯನ್ನೇ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಎಂದಿನಂತೆ ನಿನ್ನೆಯೂ ಸಹ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ವಿಕೋಪಕ್ಕೆ ಹೋದಾಗ ತಂದೆ ರಮೇಶ್ ಆಚಾರ್ ಮಗನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಪ್ರದೀಪ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

SUNCONTROL_FINAL-scaled

ಹತ್ಯೆಯ ನಂತರ ತಂದೆ ರಮೇಶ್ ಮಗನ ಮೃತದೇಹವನ್ನು ಮನೆಯ ಹಾಲ್‌ನಿಂದ ವರಾಂಡಕ್ಕೆ ಎಳೆದು ತಂದು ಹಾಕಿದ್ದಾನೆ. ಇಂದು ಬೆಳಿಗ್ಗೆ ಇದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಚಿಕ್ಕಮಗಳೂರು ಎಸ್ಪಿ ಜೀತೇಂದ್ರ ಕುಮಾರ್ ದಯಾಮ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

chikkamagaluru Father Kills Son in Mudigere

 

 

SUNCONTROL_FINAL-scaled
Share This Article