ಶಿವಮೊಗ್ಗದ ಮಹಿಳೆ ಹಾಗೂ ಚಿಕ್ಕಮಗಳೂರಿನ ಯುವಕನ ಬಗ್ಗೆ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ

ಹಂಚಿಕೊಳ್ಳಿ
WhatsApp Facebook X Telegram
Two Persons Missing
Two Persons Missing

ಶಿವಮೊಗ್ಗ:  ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬ ಯುವಕ ಹಾಗೂ ಓರ್ವ ಮಹಿಳೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾರ್ವಜನಿಕರ ಸಹಕಾರ ಕೋರಿದ್ದಾರೆ. 

Two Persons Missing ಪ್ರಕರಣ 1: ಕೆಲಸಕ್ಕೆಂದು ಬಂದ ಯುವಕ ನಾಪತ್ತೆ 

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಗಿರಿಯಪುರ ಗ್ರಾಮದ ನಿವಾಸಿ ಮೀನಾಕ್ಷಮ್ಮ ಎಂಬುವವರ ಪುತ್ರ ಯಶವಂತ (27) ನಾಪತ್ತೆಯಾದ ಯುವಕ. ಈತ ಗೆಜ್ಜೆಯನಹಳ್ಳಿಯ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದನು. ಡಿಸೆಂಬರ್ 01 ರಂದು ಬೆನವಳ್ಳಿಯ ತೋಟದ ಮಾಲೀಕರನ್ನು ಭೇಟಿಯಾಗಲು ಶಿವಮೊಗ್ಗಕ್ಕೆ ಬಂದಿದ್ದ ಈತ ಈವರೆಗೂ ಮನೆಗೆ ಮರಳಿಲ್ಲ. ಈ ವ್ಯಕ್ತಿಯು 5.2 ಅಡಿ ಎತ್ತರ, ದುಂಡನೆಯ ಮುಖ ಹಾಗೂ ಗೋಧಿ ಮೈಬಣ್ಣ ಹೊಂದಿದ್ದು, ಕಾಣೆಯಾದ ಸಮಯದಲ್ಲಿ ಹಳದಿ ಟೀಶರ್ಟ್ ಮತ್ತು ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದನು.

Two Persons Missing
Two Persons Missing

 

ಪ್ರಕರಣ 2: ಮನೆಕೆಲಸಕ್ಕೆ ಹೋದ ಮಹಿಳೆ ಕಾಣೆ

ಇನ್ನೊಂದು ಪ್ರಕರಣದಲ್ಲಿ ಶಿವಮೊಗ್ಗದ ಹೊಸಮನೆ ನಿವಾಸಿ ಶಶಿಕುಮಾರ್ ಎಂಬುವವರ ಪತ್ನಿ ಅನಿತಾ (32) ನಾಪತ್ತೆಯಾಗಿದ್ದಾರೆ. ಡಿ. 12 ರಂದು ರಾಜೇಂದ್ರ ನಗರದಲ್ಲಿ ಮನೆಕೆಲಸಕ್ಕೆಂದು ಹೋದವರು ಮನೆಗೆ ಮರಳಿ ಬಂದಿಲ್ಲ. 5.2 ಅಡಿ ಎತ್ತರ, ದಪ್ಪ ಮೈಕಟ್ಟು ಮತ್ತು ಕೋಲು ಮುಖದ ಈಕೆ ಕಾಣೆಯಾದಾಗ ಗುಲಾಬಿ ಬಣ್ಣದ ಚೂಡಿದಾರ್ ಧರಿಸಿದ್ದರು. 

ಈ ಇಬ್ಬರು ವ್ಯಕ್ತಿಗಳ ಬಗ್ಗೆ ಯಾವುದೇ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ತಕ್ಷಣ ದೊಡ್ಡಪೇಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08182-261414 ಅಥವಾ ಮೊಬೈಲ್ ಸಂಖ್ಯೆ 9620348689 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.

Two Persons Missing in Shivamogga Doddapete Police Limits

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor