Shimoga Power Cut ಶಿವಮೊಗ್ಗ : ನಗರ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ನಾಳೇ ಇಡೀ ದಿನ ಕರೆಂಟ್ ಇರಲ್ಲ ಅಂತಾ ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಮೆಸ್ಕಾಂ ಪ್ರಕಟಣೆಯ ಪ್ರಕಾರ, ತುರ್ತು ನಿರ್ವಹಣಾ ಕಾರ್ಯ ಹಾಗೂ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಎರಡು ಕಡೆಗಳಲ್ಲಿ ಕಾಮಗಾರಿಯನ್ನು ಮೆಸ್ಕಾಂ ಆಯೋಜಿಸಿದೆ.

ಶಿವಮೊಗ್ಗ ಸಿಮ್ಸ್ ಪ್ರವೇಶಾತಿ: ಉಳಿದ ಸೀಟುಗಳಿಗೆ ಜ. 8 ರಂದು ನೇರ ಸಂದರ್ಶನ
ಮುಖ್ಯವಾಗಿ ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎಂಸಿಎಫ್-3, ಎಂಸಿಎಫ್-4, ಎಂಸಿಎಫ್-14 ಹಾಗೂ ಎಂಸಿಎಫ್-20 ಮಾರ್ಗಗಳಲ್ಲಿ ರಸ್ತೆ ಅಗಲೀಕರಣ ಕೆಲಸ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ. ಇದರಿಂದಾಗಿ ಮಾಚೇನಹಳ್ಳಿ, ಬಿದರೆ, ಬಿದರೆ ಗೇಟ್, ನಿದಿಗೆ, ಓತಿಘಟ್ಟ, ಹಾರೇಕಟ್ಟೆ, ಸೋಗಾನೆ, ಜನತಾ ಕಾಲೋನಿ, ಶಿವಣ್ಣ ಕ್ಯಾಂಪ್, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಜಯಂತಿ ಗ್ರಾಮ, ಹೊನ್ನವಿಲೆ, ಕಿಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆಎಸ್ಆರ್ಪಿ ಕಾಲೋನಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಸಾರ್ವಜನಿಕರಿಗೆ ವಿದ್ಯುತ್ ವ್ಯತ್ಯಯವಾಗಲಿದೆ.
ತಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜನವರಿ 7 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.

ನಶಮುಕ್ತ ಶಿವಮೊಗ್ಗ ಜನಜಾಗೃತಿ ರಥಯಾತ್ರೆಗೆ ನಾಳೆ ಚಾಲನೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಇಲ್ಲೆಲ್ಲಾ ಇರಲ್ಲ ಕರೆಂಟ್/ Shimoga Power Cut
ಕುವೆಂಪುನಗರ, ಮ್ಯಾಕ್ಸ್ ಪೂರ್ಣೋದಯ, ಎನ್.ಇ.ಎಸ್. ಬಡಾವಣೆ, ಡಿ.ವಿ.ಎಸ್. ಕಾಲೋನಿ, ಜ್ಯೋತಿನಗರ, ನವಲೆ ಕೆರೆಹೊಸೂರು, ಇಂದಿರಾಗಾಂಧಿ ಬಡಾವಣೆ, ಶಿವಬಸವನಗರ, ವೀರಭದ್ರೇಶ್ವರ ಲೇಔಟ್, ಪಿಡಬ್ಲ್ಯೂಡಿ ಲೇಔಟ್, ನವುಲೆ, ಎಲ್.ಬಿ.ಎಸ್.ನಗರ, ಅಶ್ವತ್‌ನಗರ, ಕೀರ್ತಿನಗರ, ಸವಲಂಗ ರಸ್ತೆ, ಬಸವೇಶ್ವರನಗರ, ಕೃಷಿನಗರ, ರಾಯಲ್ ಬಡಾವಣೆ, ಅನೂಪ್ ಪಾಟೀಲ್ ಬಡಾವಣೆ, ಪವನಶ್ರೀ ಬಡಾವಣೆ ಹಾಗೂ ಅಮೀರ್ ಅಹಮದ್ ಕಾಲೋನಿಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದಲ್ಲದೆ ವೆಂಕಟಾಪುರ, ದೇವಾಂಗಿ ಸ್ಟೇಜ್ 1, ರೆಡ್ಡಿ ಲೇಔಟ್, ಜೆ.ಎನ್.ಸಿ.ಸಿ. ಕಾಲೇಜ್, ಹಳೆ ಬೊಮ್ಮನಕಟ್ಟೆ, ದೇವಾಂಗಿ ಸ್ಟೇಜ್ 2, ಬೊಮ್ಮಕಟ್ಟೆ ಎ ಯಿಂದ ಹೆಚ್ ಬ್ಲಾಕ್‌ವರೆಗೆ, ಎಂ.ಎನ್.ಕೆ.ಲೇಔಟ್, ಸಾನ್ವಿ ಲೇಔಟ್, ವಿನಾಯಕ ಲೇಔಟ್, ಮಲ್ನಾಡ್ ಕೌಂಟಿ, ಸಾಯಿ ಲೇಔಟ್, ಶಾಂತಿನಗರ, ತಾವರೆಚಟ್ನಹಳ್ಳಿ, ಹೊನ್ನಳ್ಳಿ ರಸ್ತೆ, ಶಾದ್‌ನಗರ, ಮಲ್ಲಿಕಾರ್ಜುನ ನಗರ, ಸೇವಾಲಾಲ್ ನಗರ, ತರಳಬಾಳು ಬಡಾವಣೆ, ಪೇಸ್ ಕಾಲೇಜ್, ಗುಂಡಪ್ಪ ಶೆಡ್, ದೇವಾಂಗಿ ತೋಟ, ವೆಂಕಟೇಶ್ವರ ಸಾಮಿಲ್, ಯು.ಜಿ.ಡಿ. ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ.

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ : ಶಿವಮೊಗ್ಗದಲ್ಲಿ ಒಂದು ತಿಂಗಳ ಬೇಕರಿ ಉತ್ಪನ್ನಗಳ ತಯಾರಿಕಾ ತರಬೇತಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.