ಶಿವಮೊಗ್ಗ ಸಿಮ್ಸ್ ಪ್ರವೇಶಾತಿ: ಉಳಿದ ಸೀಟುಗಳಿಗೆ ಜ. 8 ರಂದು ನೇರ ಸಂದರ್ಶನ

ಶಿವಮೊಗ್ಗ | ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು (SIMS) 2025-26ನೇ ಸಾಲಿನ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಮುಂದಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಎಲ್ಲಾ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿದಿರುವ ಸೀಟುಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ವಾಕ್-ಇನ್ ಅಡ್ಮಿಷನ್ (ನೇರ ಪ್ರವೇಶಾತಿ) ಆಹ್ವಾನಿಸಲಾಗಿದೆ. 

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ : ಶಿವಮೊಗ್ಗದಲ್ಲಿ ಒಂದು ತಿಂಗಳ ಬೇಕರಿ ಉತ್ಪನ್ನಗಳ ತಯಾರಿಕಾ ತರಬೇತಿ

ಲಭ್ಯವಿರುವ ಸೀಟುಗಳ ವಿವರ 

ಸಂಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 44 ಸೀಟುಗಳು ಲಭ್ಯವಿವೆ. ಬಿಎಸ್‌ಸಿ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಯಲ್ಲಿ 09 (ರೆಗ್ಯುಲರ್ 05, ಲ್ಯಾಟರಲ್ 04), ಬಿಎಸ್‌ಸಿ ಆಪ್ಟೆಮೆಟ್ರಿ ವಿಭಾಗದಲ್ಲಿ 20, ಬಿಎಸ್‌ಸಿ ರೀನಲ್ ಡಯಾಲಿಸಿಸ್ ಟೆಕ್ನಾಲಜಿಯಲ್ಲಿ 10, ಬಿಎಸ್‌ಸಿ ರೆಸ್ಪರೇಟರಿ ಕೇರ್ ಟೆಕ್ನಾಲಜಿಯಲ್ಲಿ 02 ಹಾಗೂ ಬಿಎಸ್‌ಸಿ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಯಲ್ಲಿ 03 (ರೆಗ್ಯುಲರ್ 02, ಲ್ಯಾಟರಲ್ 01) ಸೀಟುಗಳು ಖಾಲಿ ಇವೆ. 

ಆಸಕ್ತ ಮತ್ತು ಕೆಇಎ (KEA) ನಲ್ಲಿ ನೋಂದಾಯಿತರಾಗಿರುವ ಅರ್ಹ ಅಭ್ಯರ್ಥಿಗಳು ಜನವರಿ 08 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ನೇರ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಶಿವಮೊಗ್ಗ ಸಿಮ್ಸ್ ಆವರಣದ ಎರಡನೇ ಮಹಡಿಯಲ್ಲಿರುವ ‘ಕಮ್ಯುನಿಟಿ ಮೆಡಿಸಿನ್ ಲೆಕ್ಚರರ್ ಹಾಲ್’ನಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮೆರಿಟ್ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುವುದು ಎಂದು ಸಿಮ್ಸ್ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

SIMS Shimoga Allied Health Admission Open

SIMS Shimoga Allied Health Admission Open
SIMS Shimoga Allied Health Admission Open