ಭದ್ರಾವತಿ ಹೆಚ್​.ಕೆ.ಜಂಕ್ಷನ್​ ಬಳಿ ಮರಕ್ಕೆ ಕಾರು ಡಿಕ್ಕಿ ! ಚಿಕ್ಕಮಗಳೂರು ನಿವಾಸಿ ಸಾವು!

Car hits tree near Bhadravathi HK junction Chikkamagaluru resident dies

ಭದ್ರಾವತಿ ಹೆಚ್​.ಕೆ.ಜಂಕ್ಷನ್​ ಬಳಿ ಮರಕ್ಕೆ ಕಾರು ಡಿಕ್ಕಿ ! ಚಿಕ್ಕಮಗಳೂರು ನಿವಾಸಿ ಸಾವು!
Car hits tree near Bhadravathi HK junction Chikkamagaluru resident dies

SHIVAMOGGA|  Dec 16, 2023  |  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ದಿನ ಅಪಘಾತವೊಂದು ಸಂಭವಿಸಿದೆ. ಕಾರೊಂದು ರಸ್ತೆಯ ಬದಿಯಲ್ಲಿರುವ ಮರವೊಂದಕ್ಕೆ ಡಿಕ್ಕಿಯಾಗಿರುವ ಬಗ್ಗೆ ಇಲ್ಲಿ ವರದಿಯಾಗಿದೆ 

READ : ಶಿವಮೊಗ್ಗ KSRTC ಬಸ್ ನಿಲ್ದಾಣದ ನಿರೀಕ್ಷಣಾ ಕೊಠಡಿಯಲ್ಲಿ ಕುಳಿತಲ್ಲೇ ವ್ಯಕ್ತಿ ಸಾವು!

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ /Bhadravathi Rural Police Station 

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಲಿಮಿಟ್ಸ್​​ ನಲ್ಲಿ ಸಿಗುವ ಹೆಚ್​.ಕೆ.ಜಂಕ್ಷನ್​ ಬಳಿ ಈ ಘಟನೆ ಸಂಭವಿಸಿದೆ. ಶನಿವಾರ ಬೆಳಗ್ಗಿನ ಜಾವ ಸಂಭವಿಸಿದ ಘಟನೆಯಲ್ಲಿ ಚಿಕ್ಕಮಗಳೂರು ಜಿಲ್ಲೆ  ಸಖರಾಯಪಟ್ಟಣದ ನಿವಾಸಿ ಮಂಜುನಾಥ್ ಎಂಬ 22 ವರ್ಷದ ಯುವಕ ಸಾವನ್ನಪ್ಪಿದ್ದಾನೆ. 

ಇವರು ಶಿವಮೊಗ್ಗದಿಂದ ಬಿಆರ್​ಪಿ ಮಾರ್ಗವಾಗಿ ಚಿಕ್ಕಮಗಳೂರು ಕಡೆಗೆ ಹೋಗುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿದೆ.