ಶಿವಮೊಗ್ಗ ಸಿಟಿಯಲ್ಲಿಯೇ ತುಂಗಾ ನದಿಗೆ ನಾಲ್ಕನೇ ಸೇತುವೆ ನಿರ್ಮಾಣ! ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ

SHIVAMOGGA|  Dec 17, 2023  |  ಶಿವಮೊಗ್ಗದಲ್ಲಿ ತುಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಮತ್ತೊಂದು ಸೇತುವೆ ಉದ್ಘಾಟನೆಗೊಂಡಿದೆ. ಇವತ್ತು 20.38ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಎನ್​ಟಿ ರಸ್ತೆಯನ್ನ ಸಂಪರ್ಕಿಸುವ ಸೇತುವೆಯನ್ನ ಸಂಸದ ಬಿ.ವೈ.ರಾಘವೇಂದ್ರ ರವರು ಉದ್ಘಾಟನೆಗೊಳಿಸಿದ್ರು. 

ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತೆ ತುಂಗಾ ನದಿಗೆ ಎರಡು ಸೇತುವೆಗಳಿದ್ದವು. ಹೊಳೆಬಸ್​ಸ್ಟಾಪ್​ನ ಮೂಲಕ ವಿದ್ಯಾನಗರ ಸಂಪರ್ಕಿಸುವ ಹಳೆ ಸೇತುವೆ ಒಂದಾದರೆ ಇನ್ನೊಂದು ಕಡೆ ಎನ್​ಟಿ ರಸ್ತೆಗೆ ಹೊಂದಿಕೊಂಡ ಬೈಪಾಸ್​ ‘ರಸ್ತೆ ಮೂಲಕ ಎಂಆರ್​ಎಸ್ ಸರ್ಕಲ್​ ಕಡೆಗೆ ಹೋಗುವ ರಸ್ತೆಯನ್ನು ಸಂರ್ಪಕಿಸುವ ಸೇತುವೆ ಇನ್ನೊಂದು ಕಡೆಯಾಗಿತ್ತು. ಇದನ್ನ ಹೊಸ ಸೇತುವೆ ಎಂದೇ ಕರೆಯುತ್ತಿದ್ರು. 

READ : ಭದ್ರಾವತಿ ಹೆಚ್​.ಕೆ.ಜಂಕ್ಷನ್​ ಬಳಿ ಮರಕ್ಕೆ ಕಾರು ಡಿಕ್ಕಿ ! ಚಿಕ್ಕಮಗಳೂರು ನಿವಾಸಿ ಸಾವು!

ಈ ನಡುವೆ ಹೊಳೆ ಬಸ್​ ನಿಲ್ದಾಣದ ಕಡೆಯಿಂದ ಮತ್ತೊಂದು ಹೊಸಸೇತುವೆ ನಿರ್ಮಾಣವಾಗಿತ್ತು. ಹಾಗಾಗಿ ಹಳೆ ಸೇತುವೆ ಹೊಸ ಸೇತುವೆ ಹೆಸರುಗಳು ಮರೆಯಾದವು. ಇದೀಗ ಎನ್​ ಟಿ ರೋಡ್​ನ ಬೈಪಾಸ್​ ರೋಡ್​ನಿಂದ ಮತ್ತೊಂದು ಸೇತುವೆಯನ್ನ ನಿರ್ಮಿಸಲಾಗಿದೆ. ಈ ಸೇತುವೆಯ ಉದ್ಘಾಟನೆಯನ್ನ ಸಂಸದ ಬಿ.ವೈ.ರಾಘವೇಂದ್ರರವರು ನೆರವೇರಿಸಿದ್ದಾರೆ. ಈ ವೇಳೇ ಸ್ಥಳೀಯ ಶಾಸಕ ಎಸ್ಎನ್ ಚನ್ನಬಸಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಸ್ಥಳದಲ್ಲಿದ್ದರು. 


 

Leave a Comment