Karnataka election/ ಕಡೆಯ ಆಟ… ಕೊನೆಯ ಪ್ರಚಾರ… ಸ್ಟಾರ್​ ಅಭ್ಯರ್ಥಿ, ಸ್ಟಾರ್​ ಪ್ರಚಾರ/ ಸ್ವಾಭಿಮಾನದ ಸನ್ಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ

Malenadu Today

KARNATAKA NEWS/ ONLINE / Malenadu today/ May 7, 2023 GOOGLE NEWS 

ಶಿವಮೊಗ್ಗದಲ್ಲಿ ಚುನಾವಣೆಯ ರಂಗು ಮತ್ತಷ್ಟು ಕಳೆಗಟ್ಟಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇವತ್ತು ಕಡೆದಿನ, ನಾಳೆಯಿಂದ ಮನೆಮನೆ ಪ್ರಚಾರ ಹಾಗೂ ಚುನಾವಣ ನಿರ್ಬಂಧಗಳನ್ನು ಅನುಸರಿಸಬೇಕು. ಈ ನಿಟ್ಟಿನಲ್ಲಿ ಇವತ್ತು ಎಲ್ಲಾ ಕಡೆಗಳಲ್ಲಿಯು ಅಬ್ಬರ ಪ್ರಚಾರಗಳು ಕಂಡುಬಂದವು

Narendra modi/  ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್

Malenadu Today

narendramodi/  ನರೇಂದ್ರ ಮೋದಿ ನಮಸ್ಕಾರವನ್ನು ಮನೆಮನೆಗೂ ತಲುಪಿಸಿ ಎಂದು ಟಾಸ್ಕ್​ ಕೊಟ್ಟ ಪ್ರಧಾನಿ!  ಮೋದಿ ಮಾತಿನ ಪೂರ್ತಿ ವಿವರ ಇಲ್ಲಿದೆ

ಶಿಕಾರಿಪುರದಲ್ಲಿ  ಪಕ್ಷೇತರ ಅಭ್ಯರ್ಥಿ ನಾಗಾರಜ್ ಗೌಡ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ರು. ಪಟಾಕಿ ಸಿಡಿಸಿ ಬಂಡಾಯ ಭಾವುಟಗಳನ್ನು ಹಾರಿಸುತ್ತಾ, ಪ್ರಚಾರ ನಡೆಸಿದ ಅವರು, ಸ್ವಾಭಿಮಾನದ ಮತ ನೀಡುವಂತೆ ಮತದಾರರನ್ನ ಕೋರಿದರು. ಹುಚ್ಚರಾಯ ಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಇವತ್ತು ವಿಜಯೇಂದ್ರರ ಪರವಾಗಿ ಕ್ಯಾಂಪೇನ್​ ನಡೆಸ್ತಿರುವ ಕಿಚ್ಚ ಸುದೀಪ್​ರ ರ್ಯಾಲಿಗೆ ಟಕ್ಕರ್ ನೀಡುತ್ತಿತ್ತು. 

Malenadu Today

ಇನ್ನೊಂದೆಡೆ ಸ್ಟಾರ್ ಕ್ಯಾಂಡಿಡೇಟ್​ ಬಿ.ವೈ.ವಿಜಯೇಂದ್ರರ ಪರವಾಗಿ ನಟ ಕಿಚ್ಚ ಸುದೀಪ್ ಕ್ಯಾಂಪೇನ್​ ನಡೆಸಿದರು. ನೆಚ್ಚಿನ ನಟನನ್ನ ಕಣ್ತುಂಬಿಕೊಂಡ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿಯೇ ಜಮಾಯಿಸಿದ್ದರು, ಪಟ್ಟಣದ ಐಬಿ ಸರ್ಕಲ್ ನಿಂದ ಆರಂಭವಾಗಿದ ಬೃಹತ್ ರ್ಯಾಲಿಯಲ್ಲಿ ಸುದೀಪ್​  ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮತಪ್ರಚಾರ ನಡೆಸಿದರು.  

Narendra modi/  ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್

Malenadu Today

ಇನ್ನೂ ಇತ್ತ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪರವರ ಪರವಾಗಿ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರು ರೋಡ್ ಶೋ ನಡೆಸಿದ್ರು. ಶಿವಮೊಗ್ಗದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.‘

Malenadu Today

ಇನ್ನೊಂದೆಡೆ ಶಿವಮೊಗ್ಗ ನಗರ ಕಾಂಗ್ರೆಸ್ ಅಭ್ಯರ್ಥಿ ಹೆಚ್​ಸಿ ಯೋಗೇಶ್ ಸಹ ರೋಡ್ ಶೋಗೆ ಮೊರೆಹೋಗಿದ್ದರು. ಕಡೆದಿನ ಶಿವಮೊಗ್ಗದಲ್ಲಿ ಮತದಾರರನ್ನು ತಲುಪಲು ಪಾದಯಾತ್ರೆ ಹಾಗೂ ರೋಡ್ ಶೋ ಕೈಗೊಂಡಿದ್ದರು. ಈ ವೇಳೆ ತರಹೇವಾರಿ ಹಾರಗಳು ಪ್ರದರ್ಶನಗೊಂಡವು. 

Malenadu Today

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ರವರು ಸಹ ಆಟೋ ಚಾಲಕರು, ಕಾರ್ಮಿಕರು ಸೇರಿದಂತೆ ಜೆಡಿಎಸ್ ಪಕ್ಷದ ವತಿಯಿಂದ ಮತದಾರರನ್ನ ಸೆಳೆಯಲು ರೋಡ್ ಶೋ ನಡೆಸಿದ್ರು. 

Malenadu Today

ಅತ್ತ ಸಾಗರದಲ್ಲಿ ಬಿಜೆಪಿ ಅರ್ಭರ್ಥಿ ಹರತಾಳು  ಹಾಲಪ್ಪನವರು ರವರು ಸಹ ಅಬ್ಬರದ ರೋಡ್ ಶೋ ನಡೆಸಿದರು. ನಿನ್ನೆವರೆಗೂ ಮುಖಂಡರ ಪರಸ್ಪರ ಮಾತಿನ ವಾಗ್ದಾಳಿ ನಡೆಯುತ್ತಿದ್ದ ಕ್ಷೇತ್ರದಲ್ಲಿ ಇವತ್ತು ಬಿಜೆಪಿಯವರು ಪಕ್ಷದ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು. 

Narendra modi/  ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್

ಇದಷ್ಟೆ ಅಲ್ಲದೆ ಶಿವಮೊಗ್ಗದ ಏಳು ಕ್ಷೇತ್ರಗಳಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಮತದಾರರನ್ನು ಸೆಳೆಯುಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಶಕ್ತಿಪ್ರದರ್ಶನದ ಜೊತೆ ಕ್ಷೇತ್ರದಲ್ಲಿನ ಎಲ್ಲರನ್ನು ತಲುಪಲು ಮುಖಂಡರ ಪ್ರಯತ್ನ ಎಷ್ಟರಮಟ್ಟಿಗೆ ಫಲಕೊಡುತ್ತೆ ಎಂಬುದನ್ನ ಮತದಾರನೇ ನಿರ್ಧರಿಸಲಿದ್ಧಾನೆ. 

Narendra modi/  ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್

ಆಯನೂರು ಮಂಜುನಾಥ್ ಬಗ್ಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಂವಾದ ! ತಲೆ ತಗ್ಗಿಸಬೇಕು ಎಂದಿದ್ದೇಕೆ ಕೆಪಿಸಿಸಿ ಅಧ್ಯಕ್ಷ ! 

ಶಿವಮೊಗ್ಗ/ ಶಿವಮೊಗ್ಗ ಜೆಡಿಎಸ್​ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡಿರುವ ವಿಡಿಯೋ ಇದೀಗ ಸದ್ದು ಮಾಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮತದಾರರ ಗಮನ ಸೆಳೆಯಲು ಪರಸ್ಪರ ಸಂವಾದ ನಡೆಸಿದ್ದರು. ಈ ಸಂವಾದ ಸಾಕಷ್ಟು ವಿಷಯಗಳನ್ನು ಹೊರಹಾಕಿತ್ತು. ಸಿಎಂ ನಾನು ಎನ್ನುವ ಪೈಪೋಟಿಯನ್ನು ಬದಿಗೊತ್ತಿದ ಈ ಸಂವಾದದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ರವರು ಸಿದ್ದರಾಮಯ್ಯರನ್ನ ಲೋಕಾರೂಡಿಯಾಗಿ ಮಾತನಾಡಿಸುತ್ತಾ ಟಿಕೆಟ್ ಹಂಚಿಕೆಯಿಂದ ಹಿಡಿದು ಯಾರು ಗೆಲ್ಲುತ್ತಾರೆ ಎಂಬುದರ ವರೆಗೂ ಚರ್ಚೆ ನಡೆಸಿದ್ದಾರೆ. 

narendramodi/  ನರೇಂದ್ರ ಮೋದಿ ನಮಸ್ಕಾರವನ್ನು ಮನೆಮನೆಗೂ ತಲುಪಿಸಿ ಎಂದು ಟಾಸ್ಕ್​ ಕೊಟ್ಟ ಪ್ರಧಾನಿ!  ಮೋದಿ ಮಾತಿನ ಪೂರ್ತಿ ವಿವರ ಇಲ್ಲಿದೆ

ವಿಶೇಷ ಅಂದರೆ, ಈ ಚರ್ಚೆಯಲ್ಲಿ ಶಿವಮೊಗ್ಗದ ಜೆಡಿಎಸ್​ ಅಭ್ಯರ್ಥಿ ಆಯನೂರು ಮಂಜುನಾಥ್​ರವರ ಹೆಸರು ಸಹ ಪ್ರಸ್ತಾಪವಾಗಿದೆ. ಇಬ್ಬರ ನಡುವಿನ ಮಾತುಕತೆಯ ನಡುವೆ,  ಪಾಪ ಅವರು ದಳಕ್ಕೆ ಹೋಗಿ ನಿಂತಿದ್ಧಾರೆ ಎಂದು ಡಿಕೆ ಶಿವಕುಮಾರ್​ರವರು ಮಾತು ಆರಂಭಿಸುತ್ತಾರೆ. ಆಯನೂರು ಮಂಜುನಾಥ್​ ಟಿಕೆಟ್ ಕೇಳಿದ್ರು ನಾವು ಕೊಡಲಿಲ್ಲ. ಆದರೆ ಅವರ ಜಾಹಿರಾತು ಇದ್ಯಲ್ಲ ಸರ್ ಶಿವಮೊಗ್ಗದ ಬಗ್ಗೆ,  ನಿಜವಾಗಲು ನಾವು ತಲೆ ತಗ್ಗಿಸಬೇಕು ಎಂದಿದ್ಧಾರೆ. ಅವರು ಟಿಕೆಟ್ ಕೇಳ್ತಿದ್ರು ನಾವು ಕೊಡ್ಲಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದಾಗ, ಸಿದ್ದರಾಮಯ್ಯರವರು ನಿಜವಾಗಲು ನನಗೂ ಅರ್ಪೋಚ್ ಮಾಡಿದ್ದ ಎಂದಿದ್ಧಾರೆ. 

ಕಾಂಗ್ರೆಸ್ ಬಿಡುಗಡೆ ಮಾಡಿರುವ ಸಂದರ್ಶನದ ಎರಡನೇ ಪಾರ್ಟ್​ನಲ್ಲಿ ಈ ಸಂಭಾಷಣೆಯಿದ್ದು ಆಯನೂರು ಮಂಜುನಾಥ್​ರವರ ಫೇಸ್​​ಬುಕ್​ ಪೇಜ್​ನಲ್ಲಿ ವಿಡಿಯೋವನ್ನು ಸಹ ಫೋಸ್ಟ್​ ಮಾಡಲಾಗಿದೆ.


ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ/ ಇಬ್ಬರ ದುರ್ಮರಣ

ತೀರ್ಥಹಳ್ಳಿ/ ಶಿವಮೊಗ್ಗ:  ಇಲ್ಲಿನ ದೇವಂಗಿ ಬಳಿ ಭೀಕರ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

Narendra modi/  ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್

ಘಟನೆಯಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತೀರ್ಥಹಳ್ಳಿಯ ವಾಟಗಾರು ಸಮೀಪ ಘಟನೆ ಸಂಭವಿಸಿದೆ. 

ಕೊಪ್ಪದಿಂದ ತೀರ್ಥಹಳ್ಳಿಗೆ ಬರುವ ಮಾರ್ಗ ಇದಾಗಿದ್ದು, ಮಾರುತಿ ಸ್ವಿಫ್ಟ್ ಹಾಗೂ ಫಿಗೋ ಕಾರಿನ ನಡುವೆ ಡಿಕ್ಕಿಯಾಗಿದೆ. 

ಹೈವೆಯಲ್ಲಿ ನಿಯಂತ್ರಣ ತಪ್ಪಿದ ಕಾರು/ ಧರೆಗೆ ಗುದ್ದಿ ನುಜ್ಜುಗುಜ್ಜು! 

ಘಟನೆಯಲ್ಲಿ  ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಡಾಕಪ್ಪ ಗೌಡ(70), ಶ್ರೀನಿವಾಸ್ ಗೌಡ ಶಿರೂರು (72) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶ್ರೇಯಸ್ ಸೊಪ್ಪುಗುಡ್ಡೆ ಅವರಿಗೆ ಗಂಭೀರ ಗಾಯವಾಗಿದೆ. ಇನ್ನೊಂದು ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡವರು ವೆನ್ಲಾಕ್ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು  ಚಿಕಿತ್ಸೆ ಪಡೆಯುತ್ತಿದ್ದಾರೆ. 


Narendra modi/  ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್

ಶಿವಮೊಗ್ಗ/ ಪ್ರಧಾನಿ ನರೇಂದ್ರ ಮೋದಿ ಯವರು ಪಾಲ್ಗೊಂಡಿದ್ದ ಆಯನೂರು ಸಮಾವೇಶದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವೊಂದು ದಾಖಲಾಗಿದೆ. 

bhadravati /  ಭದ್ರಾವತಿ ವಿಧಾನಸಭಾ ಕ್ಷೇತ್ರ ! ಯಾರು ನಿರ್ಣಾಯಕ? ಕ್ಷೇತ್ರದಲ್ಲಿ ಹೇಗಿದೆ ಪೈಪೋಟಿ 

ಶಿವಮೊಗ್ಗದ ಕುಂಸಿ ಪೊಲೀಸ್ ಸ್ಟೇಷನ್  ನಲ್ಲಿ ಈ ಸಂಬಂಧ ಕೇಸ್ ಆಗಿದ್ದು, ಚುನಾವಣಾ ಫ್ಲೈಯಿಂಗ್ ಸ್ಕ್ವ್ಯಾಡ್​ ಅಧಿಕಾರಿ ನೀಡಿದ ದೂರಿನನ್ವಯ ಚುನಾವಣಾ ಏಜೆಂಟ್ ವಿರುದ್ಧ  ಎಫ್​ಐಆರ್ ಆಗಿದೆ. 

ನಡೆದಿದ್ದೇನು?

ದಿನಾಂಕ:-06-05-2023 ರಂದು  ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ -111 ವ್ಯಾಪ್ತಿಯಲ್ಲಿ ಬರುವ ಆಯನೂರು ವ್ಯಾಪ್ತಿಯಲ್ಲಿ,    ಬಿಜೆಪಿ ಪಕ್ಷದವರು ಪ್ರಧಾನ ಮಂತ್ರಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟಂತೆ ಕಟೌಟ್‌ ಹಾಗೂ ಪ್ಲಾಗ್ ಗಳನ್ನು ಕಟ್ಟುತ್ತಿದ್ದರು.

narendramodi/  ನರೇಂದ್ರ ಮೋದಿ ನಮಸ್ಕಾರವನ್ನು ಮನೆಮನೆಗೂ ತಲುಪಿಸಿ ಎಂದು ಟಾಸ್ಕ್​ ಕೊಟ್ಟ ಪ್ರಧಾನಿ!  ಮೋದಿ ಮಾತಿನ ಪೂರ್ತಿ ವಿವರ ಇಲ್ಲಿದೆ

 ಆಯನೂರು ಕೋಹಳ್ಳಿ, ಬಸ್‌ ನಿಲ್ದಾಣ, ವಿದ್ಯುತ್ ಕಂಬಗಳು ಅರಣ್ಯ ಇಲಾಖೆ ಸಂಬಂಧಿಸಿದ ಬೋರ್ಡಗಳಿಗೆ ಪಕ್ಷದ ಬಾವುಟಗಳನ್ನು ಕಟ್ಟಿದ್ದಾರೆ. ಅನುಮತಿ ಪಡೆಯದೇ  ಚುನಾವಣಾ ನೀತಿ ಸಂಹಿತೆ ಉಲಂಘಿಸಿಲಾಗಿದೆ ಎಂದು ಈ ಸಂಬಂಧ ದೂರು ನೀಡಲಾಗಿದೆ. 

  KARNATAKA OPEN PLACE DISFIGUREMENT ACT 1951 & 1981 (U/s-3); IPC 1860 (U/s-188)  ಅಡಿಯಲ್ಲಿ ಪ್ರಕರಣ ಸಂಬಂಧ ಕೇಸ್ ದಾಖಲಾಗಿದೆ.  


Bhadravati/ ಕ್ರಿಕೆಟ್ ಬೆಟ್ಟಿಂಗ್/ ನಾಲ್ವರ ವಿರುದ್ಧ ದಾಖಲಾಯ್ತು ಕೇಸ್​ !

ಭದ್ರಾವತಿ/ ಶಿವಮೊಗ್ಗ ಭದ್ರಾವತಿ ಓಲ್ಡ್​ ಟೌನ್​ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ ನಡೆಸ್ತಿದ್ದ ನಾಲ್ವರನ್ನ ಬಂಧಿಸಿದ್ದಾರೆ.

ಮಾಜಿ ಶಾಸಕರ ತೋಟದ ಮನೆಗೆ ನುಗ್ಗಿ ಒಂದು ಕೆಜಿ ಚಿನ್ನ ದರೋಡೆ! ಬಂದೂಕು ತೋರಿಸಿ 15 ಜನರ ತಂಡದ ಕೃತ್ಯ!

ಕಳೆದ ಆರನೇ ತಾರೀಖು, ಓಲ್ಡ್​ ಟೌನ್​ ಪಿಎಸ್​ಐಗೆ  ಬೆಟ್ಟಿಂಗ್ ನಡೆಯುತ್ತಿರುವುದರ ಬಗ್ಗೆ ಮಾಹಿತಿ ಬಂದಿದೆ.

ನಗರದ ಮಾಧವಾಚಾ‌ರ್​ ಸರ್ಕಲ್‌ ಭೂತನಗುಡಿ, ಟಿಕೆ ರಸ್ತೆ, ಗಾಂಧಿ ಸರ್ಕಲ್‌ ,ಗುಂಡುರಾವ್‌ ಶೆಡ್‌ ಮುಂತಾದ ಏರಿಯಾಗಳಲ್ಲಿ ಗಸ್ತು ಹೊರಟಿದ್ದಾರೆ. ಈ ವೇಳೇ  ಟಿಕೆ ರಸ್ತೆ ಫೈ ಓವರ್ ಕೆಳಗೆ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವುದು ಕಂಡು ಬಂದಿದೆ. ಸದ್ಯ ಪ್ರಕರಣ ಸಂಬಂಧ ಪೊಲೀಸರೇ ಕೋರ್ಟ್ ಪರ್ಮಿಶನ್​ ಪಡೆದು ಸಮುಟೋ ಕೇಸ್ ದಾಖಲಿಸಿದ್ದು, ಮಂಜುನಾಥ್​ ಸೇರಿದಂತೆ ನಾಲ್ವರ ವಿರುದ್ಧ  ಕಲಂ 78(1)(A) (VI) ಕೆ.ಪಿ,ಆಕ್ಟ್ ನಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ.  


 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media

Share This Article