bus and car incident in shivamogga city ಶಿವಮೊಗ್ಗ ಸಿಟಿಯಲ್ಲಿಯೇ ಖಾಸಗಿ ಬಸ್-ಕಾರು ಅಪಘಾತ, ಓರ್ವ ಸಾವು, 8 ಮಂದಿಗೆ ಗಾಯ

Malenadu Today

bus and car incident in shivamogga city ಶಿವಮೊಗ್ಗ: ಖಾಸಗಿ ಬಸ್-ಕಾರು ಅಪಘಾತ, ಓರ್ವ ಸಾವು, 8 ಮಂದಿಗೆ ಗಾಯ

ಶಿವಮೊಗ್ಗದ ಎಲ್‌ಎಲ್‌ಆರ್ ರಸ್ತೆಯಲ್ಲಿ  ಇವತ್ತು ಅಂದರೆ  ಗುರುವಾರ (ಜೂನ್ 5, 2025) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದ್ದು,. ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ.ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ನಡೆದಿದ್ದೇನು?

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ  ವಿವೇಕ ಟ್ರಾವೆಲ್ಸ್‌ ಹೆಸರಿನ ಖಾಸಗಿ ಬಸ್​  ಹಾಗೂ  ಕಾರೊಂದರ ನಡುವೆ ಡಿಕ್ಕಿಯಾಗಿದೆ. ಕಾರಿಗೆ ಡಿಕ್ಕಿಯಾದ ಬೆನ್ನಲ್ಲೆ ಬಸ್​ ನೇರವಾಗಿ ಕಟ್ಟಡವೊಂದರ ಮುಂಬಾಗಕ್ಕೆ ಹೋಗಿ ಡಿಕ್ಕಿಯಾಗಿದೆ. ಪರಿಣಾಮ ಬಸ್​ನಲ್ಲಿದ್ದವರು ಗಾಯಗೊಂಡಿದ್ದಾರೆ. ಬಸ್​ನ್​ ಮುಂಭಾಗ ಪೂರ್ಣ ಜಖಂ ಆಗಿದ್ದು, ಕಾರು ಸಹ ನುಜ್ಜುಗುಜ್ಜಾಗಿದೆ. ಇದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ. 

 

Share This Article