bus and car incident in shivamogga city ಶಿವಮೊಗ್ಗ: ಖಾಸಗಿ ಬಸ್-ಕಾರು ಅಪಘಾತ, ಓರ್ವ ಸಾವು, 8 ಮಂದಿಗೆ ಗಾಯ
ಶಿವಮೊಗ್ಗದ ಎಲ್‌ಎಲ್‌ಆರ್ ರಸ್ತೆಯಲ್ಲಿ ಇವತ್ತು ಅಂದರೆ ಗುರುವಾರ (ಜೂನ್ 5, 2025) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದ್ದು,. ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ.ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಡೆದಿದ್ದೇನು?
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವಿವೇಕ ಟ್ರಾವೆಲ್ಸ್ ಹೆಸರಿನ ಖಾಸಗಿ ಬಸ್ ಹಾಗೂ ಕಾರೊಂದರ ನಡುವೆ ಡಿಕ್ಕಿಯಾಗಿದೆ. ಕಾರಿಗೆ ಡಿಕ್ಕಿಯಾದ ಬೆನ್ನಲ್ಲೆ ಬಸ್ ನೇರವಾಗಿ ಕಟ್ಟಡವೊಂದರ ಮುಂಬಾಗಕ್ಕೆ ಹೋಗಿ ಡಿಕ್ಕಿಯಾಗಿದೆ. ಪರಿಣಾಮ ಬಸ್ನಲ್ಲಿದ್ದವರು ಗಾಯಗೊಂಡಿದ್ದಾರೆ. ಬಸ್ನ್ ಮುಂಭಾಗ ಪೂರ್ಣ ಜಖಂ ಆಗಿದ್ದು, ಕಾರು ಸಹ ನುಜ್ಜುಗುಜ್ಜಾಗಿದೆ. ಇದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.