block coobra : ಕೊಟ್ಟಿಗೆಯಲ್ಲಿ ಅವಿತು ಕುಳಿತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
block coobra : ಹೊಸನಗರ : ರಾಮಚಂದ್ರಾಪುರ ಮತ್ತು ವಾರಂಬಳ್ಳಿ ಗ್ರಾಮದ ನಗರ ಅರಣ್ಯ ವ್ಯಾಪ್ತಿಯಲ್ಲಿ ಕೊಟ್ಟಿಗೆಯಲ್ಲಿ ಅಡಗಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯವರು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಕಳೆದ ಎರಡು ದಿನಗಳಿಂದ ವಾರಂಬಹಳ್ಳಿ ಗ್ರಾಮದ ಈಶ್ವರಪ್ಪ ಎಂಬುವವರ ಮನೆಯಲ್ಲಿ ಕಾಳಿಂಗ ಸರ್ಪ ಇತ್ತು. ಈ ಹಿನ್ನೆಲೆ ಈಶ್ವರಪ್ಪ ಕಾಳಿಂಗ ಸರ್ಪವನ್ನು ಹಿಡಿಯಲು ಉರಗ ತಜ್ಞ ಅಜಯ್ಗಿರಿಯವರಿಗೆ ಕರೆ ಮಾಡಿದ್ದಾರೆ. ನಂತರ ಅವರ ನೇತೃತ್ವದಲ್ಲಿ ಸರ್ಪವನ್ನು ಹುಡುಕಿ ಹಿಡಿದು ಅದರ ಸ್ವಾಭಾವಿಕ ವಾಸಸ್ಥಾನಕ್ಕೆ ಬಿಡಲಾಯಿತು.
ಈ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸಂತೋಷ್ ಜಿ. ಮಲ್ಲನಗೌಡ್ ಮತ್ತು ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು.

ಕಾಳಿಂಗ ಸರ್ಪ ವಿಷಪೂರಿತ ಹಾವುಗಳಲ್ಲಿ ಅತಿ ಉದ್ದವಾದ ಪ್ರಭೇದವಾಗಿದೆ. ಇದು 18 ಅಡಿ ವರೆಗೆ ಬೆಳೆಯುವ ಈ ಹಾವು ಇತರೆ ಹಾವುಗಳು, ಹಲ್ಲಿ ಮತ್ತು ಸಣ್ಣ ಕ್ರಿಮಿಕೀಟಗಳನ್ನು ತಿನ್ನುತ್ತದೆ. ಇದು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಕಾಡುಗಳಲ್ಲಿ ಕಂಡುಬರುತ್ತದೆ.