hrithik roshan : ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ತಮ್ಮ ಮುಂದಿನ ಪ್ಯಾನ್-ಇಂಡಿಯಾ ಚಿತ್ರಕ್ಕಾಗಿ ಕನ್ನಡದ ಪ್ರಸಿದ್ದ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಲಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಕನ್ನಡದ ಕೆಜಿಎಫ್, ಕಾಂತಾರ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬ್ಲಾಕ್ಬಸ್ಟ್ರ್ ಚಿತ್ರಗಳನ್ನು ನಿರ್ಮಿಸಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಇದೀಗ ಬಾಲಿವುಡ್ನ ಗ್ರೀಕ್ ಗಾಡ್ ಎಂದು ಕರೆಯುವ ಹೃತಿಕ್ ರೋಷನ್ರವರೊಡನೆ ಚಿತ್ರ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೊಷಿಸಿದೆ.
ಹೊಂಬಾಳೆ ಫಿಲ್ಮ್ಸ್ ಈ ಕುರಿತು ತನ್ನ x ಖಾತೆಯಲ್ಲಿ ಈ ಕುರಿತು ಬರೆದು ಕೊಂಡಿದ್ದು “ಅವರನ್ನು ಗ್ರೀಕ್ ಗಾಡ್ ಎಂದು ಕರೆಯುತ್ತಾರೆ. ಅವನು ಎಲ್ಲರ ಹೃದಯಗಳನ್ನು ಆಳುತ್ತಾನೆ, ಹಾಗೆಯೇ ಎಲ್ಲಾ ಎಲ್ಲೆಗಳನ್ನು ಮುರಿದಿದ್ದಾನೆ. ನಾವು ಅವನ ವಿದ್ಯಮಾನವನ್ನು ನೋಡಲಿದ್ದೇವೆ. ಅವರನ್ನು ನಮ್ಮ ಕುಟುಂಬಕ್ಕೆ ಸೇರಿಸಿಕೊಳ್ಳಲು ಹೆಮ್ಮೆಪಡುತ್ತೇವೆ. ಇದು ಧೈರ್ಯ, ಭವ್ಯತೆ ಮತ್ತು ವೈಭವದ ಕಥೆಯಾಗಲಿದೆ ಎಂದು ಪೋಸ್ಟ್ ಮಾಡಿದೆ.

They call him the Greek God. He’s ruled hearts, shattered limits and we see the phenomenon he truly is!
We are proud to welcome @iHrithik to the @hombalefilms family for a collaboration, years in the making. A tale of grit, grandeur and glory is set to unfold, where intensity… pic.twitter.com/ZU2FHKjKdm— Hombale Films (@hombalefilms) May 28, 2025
hrithik roshan : ಹೃತಿಕ್ ರೋಷನ್ ಹೇಳಿದ್ದೇನು
ಈ ಕುರಿತಾಗಿ ಪತಿಕ್ರಿಯಿಸಿರುವ ಹೃತಿಕ್ ರೋಷನ್ “ಹೊಂಬಾಳೆ ಫಿಲ್ಮ್ಸ್ ಅನನ್ಯ ಕಥೆಗಳನ್ನು ಹೇಳುವಲ್ಲಿ ಪ್ರಸಿದ್ಧವಾಗಿದೆ. ನಾನು ಅವರೊಂದಿಗೆ ಕೆಲಸ ಮಾಡಲು ಮತ್ತು ಪ್ರೇಕ್ಷಕರಿಗೆ ಅದ್ಭುತ ಸಿನಿಮಾದ ಅನುಭವ ನೀಡಲು ಉತ್ಸುಕನಾಗಿದ್ದೇನೆ. ನಾವು ದೊಡ್ಡದಾಗಿ ಕನಸು ಕಾಣುತ್ತಿದ್ದೇವೆ ಎಂದಿದ್ದಾರೆ.
hrithik roshan ಹೃತಿಕ್ ರೋಷನ್ ಅವರು ಪ್ರಸ್ತುತ ವಾರ್ 2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದು, 2019ರ ಹಿಟ್ ಚಿತ್ರ ವಾರ್ನ ಸೀಕ್ವೆಲ್ ಇದಾಗಿದೆ. ಈ ಚಿತ್ರ ಆಗಷ್ಟ್ 15, 2025 ರಂದು ಬಿಡುಗಡೆಯಾಗಲಿದೆ.