SHIVAMOGGA| Dec 14, 2023 | ಶಿವಮೊಗ್ಗದ ಜಿಲ್ಲೆ ಭದ್ರಾವತಿ ತಾಲ್ಲೂಕು ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಕೇಸ್ ಬಗ್ಗೆ ಶಾಸಕ ಬಿ.ಕೆ.ಸಂಗಮೇಶ್ ಸಹೋದರ ಮಾಜಿ ನಗರಸಭೆ ಅಧ್ಯಕ್ಷ ಬಿ.ಕೆ. ಮೋಹನ್ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ಗೋಕುಲ್ ಕೃಷ್ಣನ್ ಮೇಲಿನ ಸಂಬಂಧಿಸಿದಂತೆ ಸುಳ್ಳು ಅಪಪ್ರಚಾರ ಮಾಡಲಾಗುತ್ತಿದೆ .ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸುಳ್ಳು ಪ್ರಚಾರ ನಡೆಸಿದ್ದಾರೆ ಎಂದಿದ್ದಾರೆ. ಅವರು ಕಾಂಗ್ರೆಸ್ ಮುಖಂಡ ಕೆಂಚೇನಹಳ್ಳಿ ಕುಮಾರ್ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆ .ಕ್ಷೇತ್ರದ ಅಭಿವೃದ್ಧಿ ಮಾಡಿದ ಹಿನ್ನೆಲೆ ಬಿ.ಕೆ. ಸಂಗಮೇಶ್ವರ ರನ್ನು ಶಾಸಕರನ್ನಾಗಿ ಕ್ಷೇತ್ರದ ಜನತೆ ಆರಿಸಿದ್ದಾರೆ. ಗೋಕುಲ್ ಕೃಷ್ಣರ ಮೇಲೆ ನಡೆದ ಹಲ್ಲೆಯನ್ನು ಕ್ಷೇತ್ರದ ಶಾಸಕರ ವಿರುದ್ಧ ಆರೋಪ ಹೊರಿಸಿದ್ದಾರೆ ಎಂದು ದೂರಿದ್ದಾರೆ.
READ : ಭದ್ರಾವತಿ ಬಡಿದಾಟ | ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ವಿಚಾರಕ್ಕೆ ಟ್ವಿಸ್ಟ್ ನೀಡಿದ ಆಯನೂರು ಮಂಜುನಾಥ್
ಗೋಕುಲ್ ಕೃಷ್ಣ ಭ್ರಷ್ಟಾಚಾರ ನಡೆಸಿ ಆಕ್ರಮ ಅಸ್ತಿ ಸಂಪಾದನೆ ಮಾಡಿದ್ದಾರೆ. ಹಲ್ಲೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೈವಾಡ ಇದ್ದರೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಹೇಳಿದ್ದೇವೆ. ಕಳೆದ ವಿಧಾನಸಭೆಯ ಬಿಜೆಪಿ ಪರಾಜಿತ ಅಭ್ಯರ್ಥಿ ಮಂಗೋಟ್ಟಿ ರುದ್ರೇಶ್ ಪ್ರಕರಣ ಒಂದನ್ನು ಕೋಮು ಗಲಭೆಗೆ ತಿರುಗಿಸಲು ಯತ್ನಿಸಿದರು. ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಈ ಪ್ರಕರಣದ ಹಿನ್ನೆಲೆ ಭದ್ರಾವತಿಯಲ್ಲಿ ಭಾಷಣ ಮಾಡಿದ್ದರು ಎಂದು ಆರೋಪಿಸಿದ್ದಾರೆ.
ಎಡಿಜಿಪಿ ಅಲೋಕ್ ಕುಮಾರ್ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ್ದರಿಂದ ಕೋಮುಗಲಭೆ ಆಗುವುದು ತಪ್ಪಿತ್ತುಭದ್ರಾವತಿಯಲ್ಲಿ ಬಿಜೆಪಿಯನ್ನು ಬೆಳೆಸುವುದಕ್ಕಾಗಿ ಆಗಾಗ್ಗೆ ಗಲಾಟೆ ಮಾಡುತ್ತಾರೆ. ಮಂಗೋಟೆ ರುದ್ರೇಶ್ ರೌಡಿ ಲಿಸ್ಟ್ ನಲ್ಲಿ ಇರುವವರು. ಭದ್ರಾವತಿಯಲ್ಲಿ ಓಸಿ ಬಿಡ್ಡರ್, ಇಸ್ಪೀಟ್ ದಂಧೆ ನಡೆಸುತ್ತಿದ್ದವರು. ಲಕ್ಷಾಂತರ ಮೌಲ್ಯದ ಮನೆ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಬಿ.ಕೆ ಮೋಹನ್ ನೇರವಾಗಿಯೇ ದೂರಿದ್ದಾರೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಿಎಂ ಖಾದರ್ ಕೂಡ ಮಾತನಾಡಿ ಜೆಡಿಎಸ್ ಮುಖಂಡರು ನಡೆಸುವ ಇಸ್ಪೀಟ್ ದಂದೆಗೆ ಕಡಿವಾಣ ಹಾಕಿ. ಗೋಕುಲ್ ಕೃಷ್ಣ ಅನಗತ್ಯವಾಗಿ ನಮ್ಮ ಕಾಂಗ್ರೆಸ್ ಮುಖಂಡ ಕೆಂಚೇನಹಳ್ಳಿ ಕುಮಾರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಕಳೆದ ಎರಡು ತಿಂಗಳಿಂದ ಪೊಲೀಸ್ ಇಲಾಖೆ ಇಸ್ಪೀಟ್ ದಂದೆಗೆ ಕಡಿವಾಣ ಹಾಕಲು ಬಿಗಿ ಕ್ರಮ ಕೈಗೊಂಡಿದೆ ಎಂದಿದ್ದಾರೆ
