ಭದ್ರಾವತಿ ಬಡಿದಾಟ | ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ವಿಚಾರಕ್ಕೆ ಟ್ವಿಸ್ಟ್ ನೀಡಿದ ಆಯನೂರು ಮಂಜುನಾಥ್

Ayanur Manjunath reacts to the attack on a BJP worker in Bhadravathi

ಭದ್ರಾವತಿ ಬಡಿದಾಟ |  ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ವಿಚಾರಕ್ಕೆ ಟ್ವಿಸ್ಟ್ ನೀಡಿದ ಆಯನೂರು ಮಂಜುನಾಥ್

SHIVAMOGGA |  Dec 14, 2023  |  ಭದ್ರಾವತಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ  ಶಿವಮೊಗ್ಗದಲ್ಲಿ ಕೆಪಿಸಿಸಿ ವಕ್ತಾರ  ಆಯನೂರು ಮಂಜುನಾಥ್  ಪ್ರತಿಕ್ರಿಯಿಸಿದ್ದಾರೆ. 

ಭದ್ರಾವತಿ ಘಟನೆಯನ್ನು ಬಿಜೆಪಿಯ ನಾಯಕರು ಸದನದಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಭದ್ರಾವತಿಯಲ್ಲಿ ಗೂಂಡಾಗಿರಿ ನಡಿದಿದೆ ಎಂದು ಸದನದಲ್ಲಿ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್  (bk sangamesh)ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. 

ಗೋಕುಲ್ ಮೇಲೆ ಯಾರು ಹಲ್ಲೆ ಮಾಡಿದ್ದಾರೆ ಎನ್ನುವುದನ್ನು ಪೊಲೀಸರು ತನಿಖೆ ಮಾಡಿ ಹೇಳಬೇಕು. ಗೋಕುಲ್ ಕಾಂಗ್ರೆಸ್ ಮುಖಂಡರ ಮೇಲೆ ಗೂಂಡಾಗಿರಿ ಮಾಡುತ್ತಿದ್ದ. ಅವನಿಂದ ನಮ್ಮ ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆ ಮಾಡಬೇಕಿದೆ. 

ಅಂತಹ ಗೂಂಡಾನ ಪರವಾಗಿ ಸದನದಲ್ಲಿ ಬಿಜೆಪಿ ನಾಯಕರು ಚರ್ಚೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ಕುಮಾರ್ ಅವರಿಗೆ ಕಾಲ್ ಮಾಡಿ ಅಶ್ಲೀಲವಾಗಿ ಮಾತಾಡಿದ್ದಾನೆ. ಗೋಕುಲ್ ಮೇಲೆ ಪ್ರಕರಣ ದಾಖಲಿಸುವಂತೆ ಪೌರ ಕಾರ್ಮಿಕರು ಆಗ್ರಹ ಮಾಡಿದ್ದಾರೆ ಎಂದ ಆಯನೂರು ಮಂಜುನಾಥ್  ಗೋಕುಲ್ ನನ್ನ ನಿಯಂತ್ರಿಸುವ ಬದಲಿಗೆ ಬಿಜೆಪಿಯವರು ಅವನನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ರು.  

READ : ರಾಗಿಮುದ್ದೆಯಲ್ಲಿ ಸೈನೈಡ್ ಹಾಕಿ ಹೆಂಡ್ತಿಯನ್ನ ಕೊಂದ ಪತಿ! ಅಚ್ಚರಿ ಮೂಡಿಸಿದ್ದ ಕೇಸ್​ನಲ್ಲಿ ಬಯಲಾಯ್ತು ನಾಟಕ

ಪ್ರಚೋದಿಸುವ ಪೋಸ್ಟ್ ಗಳನ್ನು ಗೋಕುಲ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾನೆ. ಶಾಸಕ ಸಂಗಮೇಶ್ ಹಾಗೂ ಅವರ ಮಗನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಘಟನೆಗೂ ಸಂಗಮೇಶ್ವರಗು ಸಂಬಂಧ ಇಲ್ಲ. ಸಂಗಮೇಶ್ ಅವರನ್ನು ಟಾರ್ಗೆಟ್ ಮಾಡುವ ಪ್ರವೃತ್ತಿ ನಡೆಯುತ್ತಿದೆ‌. ಬಿಜೆಪಿ ಅಧಿಕಾರದಲ್ಲಿದ್ದಾಗ ಸಂಗಮೇಶ್ ಮೇಲೆ ಗೂಂಡಾಗಿರಿ ಮಾಡಿದ್ದರು.

ಶಿವಮೊಗ್ಗ ಜಿಲ್ಲೆಯಲ್ಲಿ ಗೊಂದಲಗಳು ಬೇಕು ಹಾಗಾಗಿ ಹೀಗೆ ಮಾಡುತ್ತಾರೆ. ಎಂಪಿಎಂ ಪ್ರಾರಂಭ ಮಾಡುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ. ವಿಐಎಸ್ಎಲ್ ಪ್ರಾರಂಭಿಸುವ ಕೆಲಸವನ್ನು ಸಂಸದರು ಮಾಡಿಲ್ಲ.ಚುನಾವಣೆ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದಿದ್ದಾರೆ. 

ಗೋಕುಲ್ ಮಾತಾಡಿರೋ ಆಡಿಯೋ ಪ್ರಸ್ತಾವನೆ ಮಾಡಿ ಬಿಜೆಪಿಯವರು ಮಾತಾಡಲಿ.ಪುಂಡ ಪೋಕರಿಗಳನ್ನು ಪೋಷಿಸಬಾರದು.ಶಿವಮೊಗ್ಗದಲ್ಲಿ ಗಲಾಟೆ ಮಾಡುವ ಪ್ರಯತ್ನಗಳು ವಿಫಲವಾದವು.ರಾಗಿಗುಡ್ಡದ ಪ್ರಕರಣ ಇಟ್ಟುಕೊಂಡು ಏನೇನೋ ಮಾಡಿದರು.ಬಿಜೆಪಿಯವರ ನಡೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಶಾಸಕ ಸಂಗಮೇಶ್ ಮೇಲೆ ಮಾಡುವ ತೇಜೋವಧೆಯನ್ನು ನಿಲ್ಲಿಸಬೇಕು.ಸಂಗಮೇಶ್ ಅವರನ್ನು ಸೋಲಿಸಲು ಆಗದೆ ಹೀಗೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತ ಗೋಕುಲ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ರು.