bjp protest against congress ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ 11 ಜನ ಸಾವನ್ನಪ್ಪಿರುವ ಪ್ರಕರಣದ ವಿಚಾರವಾಗಿ ಜೂನ್ 13 ರಂದು ಸಿಎಂ ಸಿದ್ದರಾಮಯ್ಯರವರ ಮನೆಯನ್ನು ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಇಂದು ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೂನ್ 4 ನ್ನು ರಾಜ್ಯದ ಇತಿಹಾಸದಲ್ಲಿ ಕರಾಳ ದಿನ ಎಂದು ಕರೆಯಲಾಗುತ್ತದೆ. ಆರ್ಸಿಬಿ ಗೆದ್ದ ಖುಷಿಯಲ್ಲಿ ದೇಶದಾದ್ಯಂತ ಸಂಭ್ರಮಾಚರಣೆ ನಡೆಯುತ್ತಿತ್ತು. ಆದರೆ ಇತ್ತ ಪ್ರಚಾರದ ಸಲುವಾಗಿ ಇಬ್ಬರು ದಿಗ್ಗಜರ ನಡುವೆ ಪೈಪೋಟಿ ಬಿದ್ದಿತ್ತು. ರಾಜ್ಯ ಸರ್ಕಾರ ಈಗಾಗಲೇ ಗ್ಯಾರಂಟಿ ಯೋಜನೆ ಹಾಗೂ ಜಾಹೀರಾತುಗಳಿಂದ ಜನಪ್ರಿಯತೆ ಗಳಿಸಿದ್ದು, ಇದರ ನಡುವೆ ಇನ್ನಷ್ಟು ಜನಪ್ರಿಯತೆ ಬೇಕೆಂದು ಆರ್ಸಿಬಿ ಹೆಸರಿನಲ್ಲಿ ಪುಕ್ಕಟೆ ಪ್ರಚಾರ ತೆಗೆದುಕೊಳ್ಳಲು ಮುಂದಾಗಿತ್ತು. ಹಾಗಾಗಿ ಸಿಎಂ ಸಿದ್ದರಾಮಯ್ಯ ಆರ್ಸಿಬಿ ಆಟಗಾರರಿಗೆ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಮಾಡಲು ಮುಂದಾದರು. ಇತ್ತ ಡಿಕೆ ಶಿವಕುಮಾರ್ ನಾನೇನು ಕಮ್ಮಿ ಇಲ್ಲ ಎಂದು ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ವಿಜಯೋತ್ಸವ ಆಚರಿಸಲು ಮುಂದಾದರು. ಆದರೆ ಪೊಲೀಸರು ಲಕ್ಷಾಂತರ ಜನ ಸೇರುತ್ತಾರೆ ನಮಗೆ ಭದ್ರತೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರೂ ಅವರ ಮಾತಿಗೆ ಕಿವಿ ಕೊಡದೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದರಿಂದಾಗಿ ಈ ಎಲ್ಲಾ ಘಟನೆಗಳು ನಡೆದಿದೆ.
ಆದ್ದರಿಂದ 11 ಜನ ಅಮಾಯಕರ ಸಾವಿಗೆ ನ್ಯಾಯ ಕೊಡಿಸುವ ದೃಷ್ಠಿಯಿಂದ ರಾಜ್ಯ ಬಿಜೆಪಿ ಜೂನ್ 13 ರಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಫ್ರೀಡಂ ಪಾರ್ಕ್ಗ್ನಲ್ಲಿ ಬೃಹತ್ ಹೋರಾಟವನ್ನು ಕೈಗೊಂಡಿದ್ದು, ನಂತರ ಸಿದ್ದರಾಮಯ್ಯರವರ ಮನೆಗೆ ಮುತ್ತಿಗೆ ಹಾಕುತ್ತೇವೆ. ಹಾಗೆಯೇ ಜೂನ್ 16 ರಂದು ಎಲ್ಲಾ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇವೆ. ಈ ಹೋರಾಟದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಆರ್ಸಿಬಿ ವಿಜಯೋತ್ಸವದಲ್ಲಿ ಮಕ್ಕಳನ್ನು ಕಳೆದುಕೊಂಡ ಕುಟುಂಸ್ಥರು ಭಾಗವಹಿಸಲಿದ್ದಾರೆ. ಸಿಎಂ ಡಿಸಿಎಂ ಇಬ್ಬರೂ ರಾಜಿನಾಮೆ ಕೊಡುವವರೆಗೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದರು.

bjp protest against congress ಕಾಲ್ತುಳಿತಕ್ಕೆ ಜನ ಬಲಿ ಕೈ ತುಳಿತಕ್ಕೆ ಪೊಲೀಸರು ಬಲಿ
bjp protest against congress ಕಾಲ್ತುಳಿತಕ್ಕೆ ಜನರು ಬಲಿಯಾದರೆ ಕೈ ತುಳಿತಕ್ಕೆ ಪೊಲೀಸರು ಬಲಿ ಎಂದು ಎಲ್ಲರು ಹೇಳುತ್ತಿದ್ದಾರೆ. ಅದು ಸತ್ಯ. ನಿಷ್ಠಾವಂತ ಪೊಲೀಸ್ ಆಫೀಸರ್ಗಳ ಮೇಲೆ ರಾಜ್ಯ ಸರ್ಕಾರ ಗಧಾಪ್ರಹಾರ ಮಾಡಿದೆ. ರಾಜಕಾರಣಿಗಳು ತಮ್ಮ ಹುಳುಕು ಮುಚ್ಚಿಕೊಳ್ಳಲು ಪೊಲೀಸರನ್ನ ಹರಕೆ ಕುರಿಯನ್ನಾಗಿ ಮಾಡಿದ್ದಾರೆ. ಕಾಲ್ತುಳಿತದ ವಿಚಾರವಾಗಿ ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದಾಗ ಬಿಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಅಮಾಯಕ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಪೊಲೀಸ್ ಇಲಾಖೆ ಅನುಮತಿ ಕೊಡದೇ ಹೋದರು ಸಹ ಕಾರ್ಯಕ್ರಮ ಯಾಕೆ ಮಾಡಿದ್ರೂ ಎಂದು ತಿಳಿದಿಲ್ಲ. ಪೊಲೀಸರು ಡಿಸಿಎಂ ಕೊಟ್ಟ ಭರವಸೆ ಮೇಲೆ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ. ಇದೀಗ ಅವರನ್ನೇ ಬಲಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು. ಈ ಪ್ರಕರಣದಲ್ಲಿ ಸಿ ಎಂ ಸಿದ್ದರಾಮಯ್ಯ ಎ1 ಡಿಕೆ ಶಿವಕುಮಾರ್ ಎ2 ಹಾಗೂ ಗೃಹಸಚಿವ ಜಿ ಪರವೇಶ್ವರ್ ಎ3 ಆರೋಪಿಗಳು ಎಂದರು.