bike accident in sagara : ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ,ಸವಾರ ಸ್ಥಳದಲ್ಲೇ ಸಾವು | ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

prathapa thirthahalli
Prathapa thirthahalli - content producer

bike accident in sagara : ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ | ಸವಾರ ಸ್ಥಳದಲ್ಲೇ ಸಾವು

ಸಾಗರ : ಎರಡು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ  ಸಂಭವಿಸಿದ್ದು, ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ರಾಷ್ಟ್ರೀಯ ಹೆದ್ದಾರಿ ಬಿಹೆಚ್​ ರಸ್ತೆಯಲ್ಲಿ ಸೋಮವಾರ ನಡೆದಿದೆ. ಶಿವಪ್ಪ ನಾಯಕ ನಗರದ ನಿವಾಸಿ ಅಬ್ದುಲ್ ಖಯೂಮ್ ( 76) ಮೃತಪಟ್ಟ ದುರ್ದೈವಿ.

bike accident in sagara ಅಬ್ದುಲ್ ಖಯೂಮ್ ತಮ್ಮ ನಿವಾಸದಿಂದ ದ್ವಿಚಕ್ರ ವಾಹನದಲ್ಲಿ ಸಾಗರ ಪೇಟೆ ಕಡೆಗೆ ಬರುವ ಸಂದರ್ಭದಲ್ಲಿ  ಸಾಗರ ಪೇಟೆಯಿಂದ ಶಿವಮೊಗ್ಗ ರಸ್ತೆಗೆ ಬರುತ್ತಿದ್ದ ಮಾತ್ತೊಂದು ದ್ವಿಚಕ್ರ ವಾಹನ ಅಬ್ದುಲ್ ಖಯೂಮ್ ರವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಅಬ್ದುಲ್ ಖಯೂಮ್​ರವರ ತಲೆ ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತದೇಹ ಸಾಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

View this post on Instagram

 

A post shared by KA on line (@kaonlinekannada)

Share This Article