MALENADUTODAY.COM |SHIVAMOGGA| #KANNADANEWSWEB
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ.50 ರಿಯಾಯಿತಿಯನ್ನು ನೀಡಿ ಸರ್ಕಾರ ಮತ್ತೆ ಆದೇಶ ಹೊರಡಿಸಿದೆ. ಕಳೆದ ಫೆಬ್ರವರಿ ಹನ್ನೊಂದನೇ ತಾರೀಖಿನೊಳಗೆ ದಾಖಲಾಗಿರುವ ಪ್ರಕರಣಗಳಿಗೆ ಇದು ಅನ್ವಯವಾಗಲಿದ್ದು, ಇದೇ ಮಾರ್ಚ್ 18ರವರೆಗೆ ಅರ್ಧ ದರ ಪಾವತಿಗೆ ಸರ್ಕಾರ ಆದೇಶಿಸಿದೆ. ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರು ಈ ನಿಗದಿತ ಅವಧಿಯಲ್ಲಿ ಶೇ.50ರಷ್ಟು ದಂಡ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.
READ | ಫೋಟೋ ಕ್ಲಿಕ್ಕಿಸುವಾಗ ಇರಲಿ ಎಚ್ಚರ! ಬದುಕಿಗೆ ಕಂಟಕವಾಗಬಲ್ಲದು ಒಂದೇ ಒಂದು ಇಮೇಜ್! ಸೈಬರ್ ಕ್ರೈಂ ಅಲರ್ಟ್!
ಕಳೆದ ಜನವರಿಯಲ್ಲಿ ನಡೆದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಭೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ.50ರಷ್ಟು ವಿನಾಯಿತಿ ನೀಡುವ ಸಂಬಂಧ ನಿರ್ಣಯ ಕೈಗೊಳ್ಳಲಾಗಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಒಂದು ಬಾರಿಗೆ ಅನ್ವಯವಾಗುವಂತೆ ಬಾಕಿ ದಂಡ ಪಾವತಿಗೆ ಶೇ.50ರಷ್ಟು ವಿನಾಯಿತಿ ನೀಡಿ ಕಳೆದ ಫೆಬ್ರವರಿ 2ರಂದು ಆದೇಶಿಸಿತ್ತು. ಕೇವಲ 9 ದಿನಗಳಲ್ಲಿ 41.20 ಲಕ್ಷ ಪ್ರಕರಣಗಳಿಂದ ದಾಖಲೆಯ 120.76 ಕೋಟಿ ರು. ಬಾಕಿ ದಂಡ ಸಂಗ್ರಹವಾಗಿತ್ತು. ಇದೀಗ ಮತ್ತೊಮ್ಮೆ ಈ ಅವಕಾಶ ನೀಡಲಾಗಿದೆ.
READ |ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು!
ಇನ್ನೂ ವಾಹನ ಸವಾರರು, ಆಯಾ ನಗರದ ಸಂಚಾರ ಪೊಲೀಸ್ ಠಾಣೆಗಳು, ಪೇಟಿಎಂ ಆ್ಯಪ್, ಕೆಎಸ್ ಪಿ ಆ್ಯಪ್, ಒನ್ ಕೇಂದ್ರಗಳು, ಸಂಚಾರ ನಿರ್ವಹಣಾ ಕೇಂದ್ರದಲ್ಲಿ ದಂಡ ಪಾವತಿಸಬಹುದಾಗಿದೆ.
READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #
