BIG NEWS : ಟ್ರಾಫಿಕ್​ ಫೈನ್​ಗೆ ಮತ್ತೆ 15 ದಿನ 50 ಪರ್ಸೆಂಟ್ ಡಿಸ್ಕೌಂಟ್​! ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಮತ್ತೆ ಅವಕಾಶ

BIG NEWS: Another 15 days for traffic fine, 50 per cent discount! Another opportunity to pay the fine at a discounted rate. Karnataka Government Order

BIG NEWS  :  ಟ್ರಾಫಿಕ್​ ಫೈನ್​ಗೆ ಮತ್ತೆ 15 ದಿನ 50 ಪರ್ಸೆಂಟ್ ಡಿಸ್ಕೌಂಟ್​! ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಮತ್ತೆ ಅವಕಾಶ
BIG NEWS : ಟ್ರಾಫಿಕ್​ ಫೈನ್​ಗೆ ಮತ್ತೆ 15 ದಿನ 50 ಪರ್ಸೆಂಟ್ ಡಿಸ್ಕೌಂಟ್​! ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಮತ್ತೆ ಅವಕಾಶ

MALENADUTODAY.COM  |SHIVAMOGGA| #KANNADANEWSWEB

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ.50 ರಿಯಾಯಿತಿಯನ್ನು ನೀಡಿ ಸರ್ಕಾರ ಮತ್ತೆ ಆದೇಶ ಹೊರಡಿಸಿದೆ. ಕಳೆದ  ಫೆಬ್ರವರಿ ಹನ್ನೊಂದನೇ ತಾರೀಖಿನೊಳಗೆ ದಾಖಲಾಗಿರುವ ಪ್ರಕರಣಗಳಿಗೆ ಇದು ಅನ್ವಯವಾಗಲಿದ್ದು, ಇದೇ  ಮಾರ್ಚ್​​ 18ರವರೆಗೆ ಅರ್ಧ ದರ ಪಾವತಿಗೆ ಸರ್ಕಾರ ಆದೇಶಿಸಿದೆ. ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರು ಈ ನಿಗದಿತ ಅವಧಿಯಲ್ಲಿ ಶೇ.50ರಷ್ಟು ದಂಡ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. 

READ | ಫೋಟೋ ಕ್ಲಿಕ್ಕಿಸುವಾಗ ಇರಲಿ ಎಚ್ಚರ! ಬದುಕಿಗೆ ಕಂಟಕವಾಗಬಲ್ಲದು ಒಂದೇ ಒಂದು ಇಮೇಜ್​! ಸೈಬರ್​ ಕ್ರೈಂ ಅಲರ್ಟ್!

ಕಳೆದ ಜನವರಿಯಲ್ಲಿ ನಡೆದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಭೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ.50ರಷ್ಟು ವಿನಾಯಿತಿ ನೀಡುವ ಸಂಬಂಧ ನಿರ್ಣಯ ಕೈಗೊಳ್ಳಲಾಗಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಒಂದು ಬಾರಿಗೆ ಅನ್ವಯವಾಗುವಂತೆ ಬಾಕಿ ದಂಡ ಪಾವತಿಗೆ ಶೇ.50ರಷ್ಟು ವಿನಾಯಿತಿ ನೀಡಿ ಕಳೆದ ಫೆಬ್ರವರಿ 2ರಂದು ಆದೇಶಿಸಿತ್ತು. ಕೇವಲ 9 ದಿನಗಳಲ್ಲಿ 41.20 ಲಕ್ಷ ಪ್ರಕರಣಗಳಿಂದ   ದಾಖಲೆಯ 120.76 ಕೋಟಿ ರು. ಬಾಕಿ ದಂಡ ಸಂಗ್ರಹವಾಗಿತ್ತು. ಇದೀಗ ಮತ್ತೊಮ್ಮೆ ಈ ಅವಕಾಶ ನೀಡಲಾಗಿದೆ. 

READ |ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು!

ಇನ್ನೂ ವಾಹನ ಸವಾರರು,  ಆಯಾ ನಗರದ ಸಂಚಾರ ಪೊಲೀಸ್ ಠಾಣೆಗಳು, ಪೇಟಿಎಂ ಆ್ಯಪ್, ಕೆಎಸ್‌ ಪಿ ಆ್ಯಪ್,  ಒನ್ ಕೇಂದ್ರಗಳು, ಸಂಚಾರ ನಿರ್ವಹಣಾ ಕೇಂದ್ರದಲ್ಲಿ ದಂಡ ಪಾವತಿಸಬಹುದಾಗಿದೆ. 

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!