BIG BREAKING NEWS / ಶಿವಮೊಗ್ಗದಲ್ಲಿ ಮೂರು ದಿನ ಅಸಾಧಾರಣ ಭಾರೀ ಮಳೆ ! ಯಲ್ಲೋ, ಆರೆಂಜ್, ರೆಡ್ ಅಲರ್ಟ್ ಘೋಷಣೆ! ಪೂರ್ತಿ ವಿವರ ಇಲ್ಲಿದೆ!

Malenadu Today

KARNATAKA NEWS/ ONLINE / Malenadu today/ Jul 2, 2023 SHIVAMOGGA NEWS

ಮಲ್ನಾಡ್​ನಲ್ಲಿ ಮಳೆಯಿಲ್ಲ ಎಂಬ ಕೊರಗಿನ ನಡುವೆ ಹವಾಮಾನ ಇಲಾಖೆ ಬಣ್ಣ ಬಣ್ಣದ ಎಚ್ಚರಿಕೆಯ ಮುನ್ಸೂಚನೆಯನ್ನು ನೀಡಿದೆ. ಜುಲೈ 3 ರಿಂದ 5 ನೇ ತಾರೀಖಿನವರೆಗೂ ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ ಐಎಂಡಿ ಬೆಂಗಳೂರು (IMd banglore) ವೆಬ್​ಸೈಟ್​ನಲ್ಲಿ ನೀಡಿರುವ ಪ್ರಕಟಣೆಯ ಪ್ರಕಾರ, 

4ನೇ ಜುಲೈ 2023 ರಂದು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ (shivamogga rain news today) ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜುಲೈ 5, 2023 ರಂದು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳ ನಿರ್ಧಿಷ್ಟ ಸ್ಥಳಗಳಲ್ಲಿ ಭಾರಿಯಿಂದ ಅತಿ ಭಾರೀ ಒಮ್ಮೊಮ್ಮೆ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಜುಲೈ ಮೂರರಂದು ಯಲ್ಲೋ ಅಲರ್ಟ್ ನೀಡಲಾಗಿದ್ದು, ಜುಲೈ ನಾಲ್ಕರಂದು ಆರೆಂಜ್ ಅಲರ್ಟ್ ನೀಡಲಾಗಿದ್ದು, ಜುಲೈ ಐದರಂದು ರೆಡ್​ ಅಲರ್ಟ್ ಘೋಷಿಸಲಾಗಿದೆ. ಐಸೋಲೇಟೆಡ್​ ಪ್ಲೇಸ್​ಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಮುಖ್ಯವಾಗಿ ಜಿಲ್ಲಾವಾರು ವಾರ್ನಿಂಗ್​ ಪ್ರಕಟಣೆಯಲ್ಲಿ ಜುಲೈ 3 ರಂದು ಶಿವಮೊಗ್ಗ ಜಿಲ್ಲೆಯ ಅನೇಕ ಕಡೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಜುಲೈ 4 ರಂದು ಜಿಲ್ಲೆ 75 ರಷ್ಟು ಕಡೆಗಳಲ್ಲಿ 115 ಮಿ.ಮೀ ನಿಂದ 204 ಮಿಲಿಮೀಟರ್​ನಷ್ಟು ಮಳೆಯಾಗುವ ಸಾಧ್ಯತೆಯನ್ನು ತಿಳಿಸಲಾಗಿದ್ದು ಆರೆಂಜ್ ಅಲರ್ಟ್ ತಿಳಿಸಲಾಗಿದೆ. ಇನ್ನೂ ಜುಲೈ 5 ಅಸಾಧಾರಣ ಭಾರೀ ಮಳೆ ಎಂದು ತಿಳಿಸಿರುವ ಹವಾಮಾನ ಇಲಾಖೆ 204 ಮಿಲೀಮೀಟರ್​ಗಳಿಗಿಂತಲೂ ಅಧಿಕ ಮಳೆಯಾಗಲಿದೆ ಎಂದು ತಿಳಿಸಿ ರೆಡ ಅಲರ್ಟ್ ಘೋಷಿಸಿದೆ. 

ನಿನ್ನೆ ಹೊರಡಿಸಿರುವ  ಪತ್ರಿಕಾ ಪ್ರಕಟಣೆಯಲ್ಲಿ ಚಿಕ್ಕಮಗಳೂರು ,ಚಾಮರಾಜನಗರ,ಹಾಸನ, ಮೈಸೂರು,ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. 

 

Share This Article