ಶಿಕಾರಿಪುರ ಗೋಮಾಂಸ ಗಲಾಟೆ ಮೂರು ಕೇಸ್​ ದಾಖಲು, ಗೌಡ್ರಳ್ಳಿಯಲ್ಲಿ ಸ್ಕೂಲ್​ ವ್ಯಾನ್​ -ಕಾರು ಡಿಕ್ಕಿ! , ಕುಡಿದು ತಂದೆ, ಮಗನ ಕಾಟ, ಕಾಡಿನಿಂದ ಬಂದು ನಿತ್ರಾಣಗೊಂಡಿದ್ದ ಜಿಂಕೆಗೆ ಚಿಕಿತ್ಸೆ TODAY @NEWS

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jul 2, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವಿವರಗಳನ್ನು ನೋಡುವುದಾದರೆ, ಇವತ್ತಿನ ಪ್ರಮುಖ 5 ಸುದ್ದಿಗಳು ಹೀಗಿವೆ. 

ಗೌಡ್ರಹಳ್ಳಿಯಲ್ಲಿ ಸ್ಕೂಲ್ ವ್ಯಾನ್​ಗೆ ಕಾರು ಡಿಕ್ಕಿ

ಶಿವಮೊಗ್ಗ ಜಿಲ್ಲೆಯ  ಭದ್ರಾವತಿಯ ಗೌಡ್ರಹಳ್ಳಿ ಬಳಿ ಕಾರು ಹಾಗೂ ಶಾಲಾ ವಾಹನಕ್ಕೆ ಅಪಘಾತವಾಗಿದೆ.,. ಘಟನೆಯಲ್ಲಿ ಪರಸ್ಪರ ಮುಖಾಮುಖಿಯಾಗಿ ಎರಡು ವಾಹನಗಳು ಡಿಕ್ಕಿಯಾಗಿದೆ. ಪರಿಣಾಮ ಕಾರಿನ ಮುಂಬಾಗ ಜಖಂ ಆಗಿದೆ. ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನ  ತೆರುವುಗೊಳಿಸಿದರು. ಇನ್ನೂ ಘಟನೆ ಸಂಬಂಧ ವಾಹನ ಮಾಲೀಕರು ರಾಜಿಯಾಗಿದ್ದಾರೆ. 

ಶಿಕಾರಿಪುರ ಗೋಮಾಂಸ ಗಲಾಟೆ ಮೂರು ಕೇಸ್​ ದಾಖಲು, ಗೌಡ್ರಳ್ಳಿಯಲ್ಲಿ ಸ್ಕೂಲ್​ ವ್ಯಾನ್​ -ಕಾರು ಡಿಕ್ಕಿ! , ಕುಡಿದು ತಂದೆ, ಮಗನ ಕಾಟ, ಕಾಡಿನಿಂದ ಬಂದು ನಿತ್ರಾಣಗೊಂಡಿದ್ದ ಜಿಂಕೆಗೆ ಚಿಕಿತ್ಸೆ TODAY @NEWS

ಸೊರಬದಲ್ಲಿ ಜಿಂಕೆಯ ರಕ್ಷಣೆ

ಸೊರಬ ತಾಲ್ಲೂಕಿನ ನಿಸರಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾಸನೂರು ಅರಣ್ಯ ಪ್ರದೇಶದ ನಂದಿ ಗ್ರಾಮದ ಬಳಿ ಗಾಯಗೊಂಡು ನಿತ್ರಾಣಗೊಂಡಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡಿದರು. ಶನಿವಾರ ಬೆಳಿಗ್ಗೆ ಅರಣ್ಯ ಪ್ರದೇಶದಿಂದ ನಂದಿ ಗ್ರಾಮದ ಬಳಿ ಗಾಯಗೊಂಡು ಓಡಾಡುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ಗ್ರಾಮಸ್ಥರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು. ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡಿದರು. 

ಶಿಕಾರಿಪುರ ಗೋಮಾಂಸ ಗಲಾಟೆ ಮೂರು ಕೇಸ್​ ದಾಖಲು, ಗೌಡ್ರಳ್ಳಿಯಲ್ಲಿ ಸ್ಕೂಲ್​ ವ್ಯಾನ್​ -ಕಾರು ಡಿಕ್ಕಿ! , ಕುಡಿದು ತಂದೆ, ಮಗನ ಕಾಟ, ಕಾಡಿನಿಂದ ಬಂದು ನಿತ್ರಾಣಗೊಂಡಿದ್ದ ಜಿಂಕೆಗೆ ಚಿಕಿತ್ಸೆ TODAY @NEWS

ಶಿಕಾರಿಪುರದ ಆ ಘಟನೆ ಸಂಬಂಧ ಮೂರು ಎಫ್ಐಆರ್

ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಘರ್ಷಕ್ಕೆ ಕಾರಣವಾಗಿದ್ದ ಗೋಮಾಂಸ ಮತ್ತು ಚರ್ಮ ಸಾಗಾಣಿಕೆ ವಿಚಾರದಲ್ಲಿ ದಲ್ಲಿ ಮೂರು ಎಫ್ಐಆರ್ ದಾಖಲಾಗಿದೆ. ಎರಡು ಸುಮೋಟೋ ಪ್ರಕರಣ ದಾಖಲಾದರೆ ಮತ್ತೊಂದು ಹಲ್ಲೆ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ಗೋಮಾಂಸ ಹಾಗೂ ಚರ್ಮ ಮಾರಾಟ  ಪ್ರಕರಣದಲ್ಲಿ ಎರಡು ಸುಮೊಟೋ ಕೇಸ್ ದಾಖಲಾಗಿದ್ದರೇ, ಬೈಕ್​ ತಡೆದು ಹಲ್ಲೆ ಮಾಡಿದ ವಿಚಾರಕ್ಕೆ ಮತ್ತೊಂದು ಕೇಸ್ ದಾಖಲಾಗಿದೆ. 

ಶಿಕಾರಿಪುರ ಗೋಮಾಂಸ ಗಲಾಟೆ ಮೂರು ಕೇಸ್​ ದಾಖಲು, ಗೌಡ್ರಳ್ಳಿಯಲ್ಲಿ ಸ್ಕೂಲ್​ ವ್ಯಾನ್​ -ಕಾರು ಡಿಕ್ಕಿ! , ಕುಡಿದು ತಂದೆ, ಮಗನ ಕಾಟ, ಕಾಡಿನಿಂದ ಬಂದು ನಿತ್ರಾಣಗೊಂಡಿದ್ದ ಜಿಂಕೆಗೆ ಚಿಕಿತ್ಸೆ TODAY @NEWS

ಕುಡಿದು ತಂದೆ ಮಗನ ಕಾಟ 

ಮದ್ಯಪಾನದಿಂದಾಗಿ ಜಿಲ್ಲೆಯ ವಿವಿಧ ಮನೆಗಳಲ್ಲಿ ನೆಮ್ಮದಿಯಿಲ್ಲದಂತಾಗಿರುವುದು ಸತ್ಯ. ಅಲ್ಲದೆ ಪೊಲೀಸರಿಗೆ ಪ್ರತಿನಿತ್ಯ ಕರೆಗಳು ಬರುತ್ತಿದ್ದು, ಮನೆಮನೆ ಸಮಸ್ಯೆ ಬಗೆಹರಿಸುವುದೇ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭದ್ರಾವತಿ ಗ್ರಾಮಾಂತರ ಪೊಲೀಸರು ಹಾಗೂ ನ್ಯೂಟೌನ್​ ಪೊಲೀಸರು,  ಕುಡಿದು ಗಲಾಟೆ ಮಾಡುತ್ತಿದ್ದ ತಂದೆ ಹಾಗೂ ಮಗನಿಗೆ ಪ್ರತ್ಯೇಕ ಘಟನೆಗಳಲ್ಲಿ ಬುದ್ದಿವಾದ  ಹೇಳಿದ್ಧಾರೆ. ಮಹಿಳೆಯೊಬ್ಬರ ದೂರಿನ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು ಕುಡಿದು ಬಂದಿದ್ದ ತಂದೆಗೆ ತಿಳುವಳಿಕೆ ಮೂಡಿಸಿದ್ರು. ಇನ್ನೊಂದೆಡೆ ತಾಯಿಯೊಬ್ಬರ ಕರೆಗೆ ಸ್ಪಂದಿಸಿದ ಪೊಲೀಸರು ಅಲ್ಲಿಗೆ ತೆರಳಿ, ಟೈಟಾಗಿದ್ದ ಮಗನಿಗೆ ಬುದ್ದಿವಾದ ಹೇಳಿದ್ಧಾರೆ. 

ಹಿಂಬದಿಯಿದ್ದ ಗುದ್ದಿದ ಲಾರಿ

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಸವಳಂಗ ರಸ್ತೆಯಲ್ಲಿ ಲಾರಿಯೊಂದು ಅಪಘಾತವೆಸಗಿ ಸ್ಥಳದಿಂದ ಪರಾರಿಯಾಗಿದೆ. ಕಾರೊಂದಕ್ಕೆ ಹಿಂಬದಿಯಿಂದ ಲಾರಿಯನ್ನು ಡಿಕ್ಕಿ ಹೊಡೆಸಿದ ಲಾರಿ ಚಾಲಕ, ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ. ಇನ್ನೂ ಘಟನೆ ಸಂಬಂಧ ಕೇಸ್ ದಾಖಲಾಗಿದ್ದು, ಕಾರಿನ ಹಿಂಬದಿ ಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಗಾಯಗಳಾಗಿಲ್ಲ.  

 ಶಿಕಾರಿಪುರ ಗೋಮಾಂಸ ಗಲಾಟೆ ಮೂರು ಕೇಸ್​ ದಾಖಲು, ಗೌಡ್ರಳ್ಳಿಯಲ್ಲಿ ಸ್ಕೂಲ್​ ವ್ಯಾನ್​ -ಕಾರು ಡಿಕ್ಕಿ! , ಕುಡಿದು ತಂದೆ, ಮಗನ ಕಾಟ, ಕಾಡಿನಿಂದ ಬಂದು ನಿತ್ರಾಣಗೊಂಡಿದ್ದ ಜಿಂಕೆಗೆ ಚಿಕಿತ್ಸೆ TODAY @NEWS

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor