Bhadravati news Basaveshwara Statue 25 ಭದ್ರಾವತಿಯಲ್ಲಿ ₹50 ಲಕ್ಷ ವೆಚ್ಚದಲ್ಲಿ ಬಸವೇಶ್ವರರ ಕಂಚಿನ ಪ್ರತಿಮೆ: ಪ್ರಮುಖ ರಸ್ತೆಗಳಿಗೆ ನೂತನ ಹೆಸರು
ಭದ್ರಾವತಿ: ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ₹50 ಲಕ್ಷ ವೆಚ್ಚದಲ್ಲಿ ಅಶ್ವಾರೂಢ ಬಸವೇಶ್ವರರ ಕಂಚಿನ ಪ್ರತಿಮೆ (Bronze statue of Basaveshwara) ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ.
ಹಳೆ ನಗರದ ಹೊಸ ಸೇತುವೆ ಪಕ್ಕದಲ್ಲಿ ಈ ಪ್ರತಿಮೆ ತಲೆ ಎತ್ತಲಿದೆ. ಈ ಸಂಬಂಧ ನಗರಸಭೆಯ ಸರ್ ಎಂ.ವಿ. ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಜೆ.ಸಿ. ಗೀತಾ ರಾಜ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ನಗರಸಭೆ ಸದಸ್ಯ ಬಿ.ಕೆ. ಮೋಹನ್ ನೇತೃತ್ವದಲ್ಲಿ ಭಾಗವಹಿಸಿದ್ದ ಸಮಾಜದ ಮುಖಂಡರು, ಪ್ರತಿಮೆಯನ್ನು ರಂಗಪ್ಪ ವೃತ್ತ ಅಥವಾ ಮಾಧವಾಚಾರ್ ವೃತ್ತದ ಸೇತುವೆ ಬಳಿ ಎಲ್ಲಿ ಸ್ಥಾಪಿಸಬೇಕು ಎಂದು ಚರ್ಚಿಸಿದರು. ಅಂತಿಮವಾಗಿ ಮಾಧವಾಚಾರ್ ವೃತ್ತದ ಬಳಿ ಸ್ಥಾಪಿಸಲು ಸಮ್ಮತಿ ದೊರೆಯಿತು.


ಹೊಸ ಸೇತುವೆ ಪಕ್ಕದಲ್ಲಿರುವ 30×50 ಅಡಿ ಖಾಲಿ ಜಾಗದಲ್ಲಿ ಪ್ರತಿಮೆ ನಿರ್ಮಿಸಲಾಗುವುದು. ಇದಕ್ಕಾಗಿ ನುರಿತ ಇಂಜಿನಿಯರ್‌ಗಳಿಂದ ನೀಲನಕ್ಷೆ ತಯಾರಿಸಿ, ಕೂಡಲೇ ಕಾಮಗಾರಿ ಪ್ರಾರಂಭಿಸುವಂತೆ ನಗರಸಭೆಗೆ ಸೂಚಿಸಲಾಗಿದೆ.

Bhadravati news , Basaveshwara Statue 25
ಭದ್ರಾವತಿ, ಬಸವೇಶ್ವರ ಪ್ರತಿಮೆ, ಕಂಚಿನ ಪ್ರತಿಮೆ, Bhadravathi, Basaveshwara statue, Bronze statue, #KarnatakaNews #LocalGovernance