ಮನೆ ಮನೆ ಸಮೀಕ್ಷೆಗೆ ಬರುವವರ ಬಗ್ಗೆ ಎಚ್ಚರ ವಹಿಸಿ/ ಮತದಾರರ ಗಮನಕ್ಕೆ ಜಿಲ್ಲಾಡಳಿತ ನೀಡಿದ ಸೂಚನೆ ಇಲ್ಲಿದೆ ಓದಿ

ಶಿವಮೊಗ್ಗ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮನೆ ಸಮೀಕ್ಷೆ ಕಾರ್ಯಕ್ರಮಗಳಲ್ಲಿ ಯಾವುದೇ ಖಾಸಗಿ ಸಂಸ್ಥೆ, ಎನ್‍ಜಿಓ ಅಥವಾ ಯಾವುದೇ ವ್ಯಕ್ತಿಯನ್ನು ನಿಯೋಜಿಸಲಾಗಿಲ್ಲ.

ಮನೆ ಮನೆ ಸಮೀಕ್ಷೆಗೆ ಬರುವವರ ಬಗ್ಗೆ ಎಚ್ಚರ ವಹಿಸಿ/  ಮತದಾರರ ಗಮನಕ್ಕೆ ಜಿಲ್ಲಾಡಳಿತ ನೀಡಿದ ಸೂಚನೆ ಇಲ್ಲಿದೆ ಓದಿ

ಶಿವಮೊಗ್ಗ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮನೆ ಸಮೀಕ್ಷೆ ಕಾರ್ಯಕ್ರಮಗಳಲ್ಲಿ ಯಾವುದೇ ಖಾಸಗಿ ಸಂಸ್ಥೆ, ಎನ್‍ಜಿಓ ಅಥವಾ ಯಾವುದೇ ವ್ಯಕ್ತಿಯನ್ನು ನಿಯೋಜಿಸಲಾಗಿಲ್ಲ.

ಇದನ್ನು ಸಹ ಓದಿ : ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್​ರವರಿಗೆ ಕಾಂಗ್ರೆಸ್​ ಟಿಕೆಟ್ ಖಚಿತ

ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಇದಕ್ಕೆಂದು ನಿಯೋಜಸಲಾದ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳಿಂದ ಮಾತ್ರ ಸಂಗ್ರಹಿಸಲಾಗುತ್ತಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿ ಮಹತ್ವದ ಸೂಚನೆಯನ್ನ ನೀಡಿದ್ದಾರೆ.

ಇದನ್ನು ಸಹ ಓದಿ : ಇನ್ಮುಂದೆ ಕೃಷಿ ಭೂಮಿ ಪರಿವರ್ತನೆ ತುಂಬಾನೇ ಸರಳ/ ಹೇಗೆ ಗೊತ್ತಾ

ಅಧಿಕೃತ ಸರ್ಕಾರಿ ನೌಕರರಿಗೆ ಮಾತ್ರ ಮಾಹಿತಿ ನೀಡಬೇಕು : ಡಿಸಿ

ಯಾವುದೇ ವ್ಯಕ್ತಿ/ಎನ್‍ಜಿಓ/ಖಾಸಗಿ ಸಂಸ್ಥೆ/ಕಂಪನಿ/ಟ್ರಸ್ಟ್​ ಗಳು ಸಾರ್ವಜನಿಕರಿಂದ ಅವರ ಖಾಸಗಿ ಅಥವಾ ಯಾವುದೇ ರೀತಿಯ ದತ್ತಾಂಶಗಳನ್ನು ಯಾವುದೇ ರೀತಿಯಲ್ಲಿ ಸಂಗ್ರಹಿಸುವುದರಲ್ಲಿ ತೊಡಗಿರುವುದು ಕಂಡು ಬಂದಲ್ಲಿ ಅವರ ವಿರುದ್ದ ಸಕ್ಷಮ ಶಾಸನದ ಪ್ರಕಾರ ಮತ್ತು ಅವಶ್ಯವಿದ್ದಲ್ಲಿ ಐಪಿಸಿ ಸೆಕ್ಷನ್ 188 ರಡಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು.

ಇದನ್ನು ಸಹ ಓದಿ : ಶರಾವತಿ ಸಂತ್ರಸ್ತರ ಪರ ಸಂಸತ್​ನಲ್ಲಿ, ಮೋದಿ ಸರ್ಕಾರಕ್ಕೆ ಸಂಸದ B.Y. ರಾಘವೇಂದ್ರರವರು ಸಲ್ಲಿಸದ ಮನವಿಯಲ್ಲಿ ಏನಿದೆ? ವಿವರ ಓದಿ

ಈ ರೀತಿಯ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಟೋಲ್‍ಫ್ರೀ ಸಂಖ್ಯೆ 1950 ಮೂಲಕ ಜಿಲ್ಲಾಡಳಿತಕ್ಕೆ ದೂರು ನೀಡಬಹುದು.

ಇದನ್ನು ಸಹ ಓದಿ : ಹೊಸನಗರ ರಸ್ತೆಯಲ್ಲಿ ಟ್ಯಾಂಕರ್​ ಲಾರಿ ಪಲ್ಟಿ/ ಆತಂಕ ಮೂಡಿಸಿದ ಹೊಗೆ/ ಅಗ್ನಿಶಾಮಕ ಸಿಬ್ಬಂದಿ ದೌಡು

ಸಾರ್ವಜನಿಕರು ಶಾಸನಬದ್ದ ನಮೂನೆಗಳು ಮತ್ತು ಭಾರತೀಯ ಚುನಾವಣಾ ಆಯೋಗದ ಅರ್ಜಿಗಳಲ್ಲಿ ಮಾತ್ರ ಜಿಲ್ಲಾಡಳಿತದಿಂದ ನಿಯೋಜಿತರಾದ ಅಧಿಕಾರಿಗಳಿಗೆ, ಅಧಿಕೃತ ಬೂತ್ ಮಟ್ಟದ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕೆಂದು (Deputy Commissioner, Dr R Selvamani) ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದ್ದಾರೆ.

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link