ಬೈಕ್​ನಲ್ಲಿ ಹೋಗುವಾಗ ಇರಲಿ ಎಚ್ಚರ! ಬದುಕೇ ಬಲಿಯಾಗಬಹುದು! ಹೊಸನಗರದಲ್ಲಿ ನಡೆದ ಘಟನೆ ಓದಿ

Malenadu Today

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಬೈಕ್​ ನಿಂದ ಬಿದ್ದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಳೆದ ಭಾನುವಾರ ನಡೆದ ಘಟನೆಯಲ್ಲಿ ಯುವಕ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾನೆ. 

ಕಾರ್ಕಳದಿಂದ ಸಾಗರಕ್ಕೆ ಹೋಗುತ್ತಿದ್ದಾಗ ತೀರ್ಥಹಳ್ಳಿಯಲ್ಲಿ ವಾಹನ ಡಿಕ್ಕಿ, ಚಿಕ್ಕಮಗಳೂರು ಡ್ಯೂಟಿಯಲ್ಲಿದ್ದ ಎಎನ್​ಎಫ್ ಸಿಬ್ಬಂದಿ, ಗಾಯ

ಹೊಸನಗರ ಪಟ್ಟಣದ ನಿವಾಸಿ ಆದರ್ಶ ಎಂಬಾತ, ಸೊನಲೆ ತೀರ್ಥಹಳ್ಳಿ ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕ್ ಬ್ಯಾಲೆನ್ಸ್ ತಪ್ಪಿದೆ. ಪರಿಣಾಮ ಕೆಳಕ್ಕೆ ಬಿದ್ದ ಆದರ್ಶನ ತಲೆಗೆ ಗಂಭೀರವಾದ ಪೆಟಟು ಬಿದ್ದಿದೆ. ತಕ್ಷಣ ಅವರನ್ನ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಆದರೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗುವ ಸಾಧ್ಯತೆ ಕಡಿಮೆ ಎಂದು ಅಲ್ಲಿಯ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಹೀಗಾಗಿ ಗಾಯಾಳುವನ್ನ ಸದ್ಯ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

READ | ಮಗಳು ಜೀವ ಉಳಿಸಿದ್ದಳು! ತಾಯಿ ಕೊಂದಿದ್ದಳು, ತಂಗಿ ಕೇಸ್​ ಪತ್ತೆ ಮಾಡಿದ್ದಳು! 2 ವರ್ಷ ಹೂತಿಟ್ಟ ಸತ್ಯ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು! ತೀರ್ಥಹಳ್ಳಿಯಲ್ಲಿ ಸಿಕ್ಕ ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP FLASHBACK ನಲ್ಲಿ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS  #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga  

 

Share This Article