ಸಿಗರೇಟಿನ ದುಡ್ಡು ಕೇಳಿದ್ದಕ್ಕೆ ಬೇಕರಿ ಹುಡುಗರಿಗೆ ಹಲ್ಲೆ/ ಭುಗಿಲೆದ್ದ ಆಕ್ರೋಶ/ ವೈರಲ್​ ಆದ ವಿಡಿಯೋ

ಸಿಗರೇಟಿನ ದುಡ್ಡು ಕೇಳಿದ್ದಕ್ಕೆ ಊರು ಬಿಟ್ಟು ಬಂದು ಬೇಕರಿ ನಡೆಸ್ತಿರೋರು ನಮಗೆ ಸಿಗರೇಟ್ ಕೊಡಲ್ವಾ ಎಂದು ಹಲ್ಲೆ ಮಾಡಿದ ಘಟನೆಯ ದೃಶ್ಯ ವೈರಲ್​ ಆಗಿದೆ. ಈ ದೃಶ್ಯ ಇದೀಗ ರಾಜ್ಯದಲ್ಲಿ ಆಕ್ರೋಶ ಹುಟ್ಟುಹಾಕಿದೆ.

ಸಿಗರೇಟಿನ ದುಡ್ಡು ಕೇಳಿದ್ದಕ್ಕೆ ಬೇಕರಿ ಹುಡುಗರಿಗೆ ಹಲ್ಲೆ/ ಭುಗಿಲೆದ್ದ ಆಕ್ರೋಶ/ ವೈರಲ್​ ಆದ ವಿಡಿಯೋ

ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಸಿಸಿ ಟಿವಿ ಪೂಟೇಜ್​ವೊಂದು ಸಾಕಷ್ಟು ವೈರಲ್ ಆಗಿದೆ. ಅಲ್ಲದೆ ವಿಡಿಯೋ ನೋಡಿದವರು ಸಹ ನಾನಾ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಕಾರಣವಿಲ್ಲದೆ, ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಹುಡುಗರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆಯ ದೃಶ್ಯವದು. 

ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ

ಎಲ್ಲಿ ನಡೆದಿದ್ದು? ಏನ್​ ಕಥೆ

ಅಂದಹಾಗೆ ಸದ್ಯ ಆಕ್ರೋಶಕ್ಕೆ ಗುರಿಯಾಗಿರುವ ವೈರಲ್​ ವಿಡಿಯೋ ಬೆಂಗಳೂರಿನ ಕುಂದೇನಹಳ್ಳಿಯಲ್ಲಿ ನಡೆದಿದ್ದು ಎನ್ನಲಾಗಿದೆ. ಈ ಸಂಬಂಧ ಹೆಚ್​ಎಎಲ್​ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ಅಲ್ಲದೆ ಬೇಕರಿ ಮಾಲೀಕರು ಸಹ ಸ್ಟೇಷನ್​ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಇದನ್ನ ಸಹ ಓದಿ : ನಿಮಗಿದು ಗೊತ್ತಾ | ಜಸ್ಟ್ ಎರಡುವರೆ ತಿಂಗಳಿನಲ್ಲಿ ₹18 ಸಾವಿರ ಕುಸಿತ ಕಂಡಿದೆ ಅಡಿಕೆ ಧಾರಣೆ 

ಕಳೆದ ಡಿಸೆಂಬರ್​ 8 ರಂದು ನಡೆದ ಘಟನೆ ಇದಾಗಿದೆ. ಇಲ್ಲಿನ ಬೇಕರಿಯೊಂದರಲ್ಲಿ ಕೆಲಸ ಮಾಡ್ತಿದ್ದ ಹುಡುಗರಿಗೆ , ಅಲ್ಲಿಗೆ ಬಂದಿದ್ದ ದುಷ್ಕರ್ಮಿಗಳು ಸಿಗರೇಟು ಕೇಳಿದ್ದಾರೆ. ಸಿಗರೇಟು ಪಡೆದುಕೊಂಡು ಹಾಗೆ ಹೊರಟಿದ್ದಾರೆ. ಈ ವೇಳೆ ದುಡ್ಡು ಕೇಳಿದ್ದಕ್ಕೆ ಊರು ಬಿಟ್ಟು ಊರಿಗೆ ಬಂದು ಬೇಕರಿ ನಡೆಸ್ತಿದ್ದೀರೀ, ನಮಗೆ ಸಿಗರೇಟ್ ಕೊಡಲ್ವಾ ಎಂದು ಗುಂಪು ಗೂಡಿ, ಕೆಲಸಗಾರರಿಗೆ ಹೊಡೆದಿದ್ಧಾರೆ. 

ಇದನ್ನು ಸಹ ಓದಿ : ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇನ್ನೊಂದು ದೊಡ್ಡ ಅವಕಾಶ

ಮನಸ್ಸೋ ಇಚ್ಚೆ ಥಳಿಸಿದ್ದರಿಂದ ಬಡಪಾಯಿ ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕರಾವಳಿಯ ಹುಡುಗರ ಮೇಲಿನ ಈ ಹಲ್ಲೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಈ ಸಂಬಂಧ ಪ್ರತಿಭಟನೆಗಳು ಸಹ ನಡೆಯುತ್ತಿದೆ.  ಪೊಲೀಸ್ ಇಲಾಖೆ ಆರೋಪಿಗಳನ್ನು ವಶಕ್ಕೆ ಪಡೆದಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ವಿರುದ್ಧ ಆಕ್ರೋಶ ಹೊರಬೀಳ್ತಿದೆ. 

ಈ ಮಧ್ಯೆ ಪೊಲೀಸರು ಹಲ್ಲೆ ಮಾಡಿದ ಪುಡಿರೌಡಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಆರೋಪಿಗಳು ದೋಚಿದ್ದ ಚಿನ್ನ ಹಾಗೂ ಹಣವನ್ನು ಸಹ ವಶಕ್ಕೆ ಪಡೆದಿದ್ಧಾರೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link