MALENADUTODAY.COM |SHIVAMOGGA| #KANNADANEWSWEB
ವಿಜಯ ಸಂಕಲ್ಪ ಯಾತ್ರೆಯ ಯಶಸ್ಸು ಹಾಗೂ ಮುಖಂಡರ ಗೈರಿನ ಬಗ್ಗೆ ಶಿವಮೊಗ್ಗ ನಗರ ಬಿಜೆಪಿಯಲ್ಲಿಯೇ ಚರ್ಚೆ ನಡೆಯುತ್ತಿರುವಂತೆಯೇ ಇದೀಗ ಮತ್ತೆ ಸಿಟಿಯಲ್ಲಿ ಫ್ಲೆಕ್ಸ್ ರಾಜಕಾರಣ ಆರಂಭವಾಗಿದೆ.
ಯುಗಾದಿಯ ಶುಭಾಶಯಗಳನ್ನು ತಿಳಿಸುತ್ತಾ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮತ್ತೆ ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ ಎಂದಿದ್ದಾರೆ. ಮುರಿದ ಮನಸ್ಸುಗಳು ಬೆಸುಗೆಯಾಗಲಿ ಶಿವಮೊಗ್ಗ ನಗರದಲ್ಲಿ ಶಾಂತಿ -ಸೌಹಾರ್ಧತೆ ನೆಲಸಲಿ ಎಂದ ಸಂದೇಶ ರವಾನಿಸಿದ್ದಾರೆ. ಹಿಂದೂಗಳಿಗೆ ಯುಗಾದಿ, ಮುಸ್ಲೀಮರಿಗೆ ರಂಜಾನ್ ಹಬ್ಬದ ಶುಭಕೋರಿರುವ ಫ್ಲೆಕ್ಸ್ನಲ್ಲಿ ಈ ಭಾರಿ ಆಯನೂರು ಮಂಜುನಾಥ್ ಎಂದು ಸ್ಪಷ್ಟವಾಗಿ ಮತ್ತು ದೊಡ್ಡದಾಗಿ ಬರೆಯಲಾಗಿದೆ
ಮಣಿಪುರದಲ್ಲಿ ರಿಪ್ಪನ್ಪೇಟೆ ಯೋಧ ಗುಂಡಿಗೆ ಬಲಿ! ಸಾವಿನ ಬಗ್ಗೆ ಮೂಡಿತು ಅನುಮಾನ?
ಈ ಹಿಂದೆ ಮೊದಲ ಸಲ ಫ್ಲೆಕ್ಸ್ ಗಳು ಕಾಣಿಸಿಕೊಂಡಾಗ ರಾಜ್ಯ ಮಾಧ್ಯಮಗಳು ಜೋರು ಸುದ್ದಿ ಮಾಡಿದ್ದವು. ಆ ಬಳಿಕ ಫ್ಲೆಕ್ಸ್ ಹಾಗೂ ಸುದ್ದಿ ಮರೆಯಾಗಿತ್ತು. ಇದರ ಬೆನ್ನಲ್ಲೆ ಇದೀಗ ಯುಗಾದಿ ಶುಭಾಶಯಗಳೊಂದಿಗೆ ಬಿಜೆಪಿ ಬಂಡಾಯ ಸೂಚಿಸುವ ಫ್ಲೆಕ್ಸ್ ಕಾಣಿಸಿಕೊಂಢಿದೆ. ಉಷಾ ನರ್ಸಿಂಗ್ ಹೋಂನ ಬಳಿ ಈ ಫ್ಲೆಕ್ಸ್ ರಾರಾಜಿಸುತ್ತಿದ್ದು, ಆಯನೂರು ಮಂಜುನಾಥ್ರವರ ಅಭಿಮಾನಿಗಳು ಇದನ್ನ ನಿಲ್ಲಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿಯಿಂದ ಆಯನೂರು ಬಂಡಾಯ
ಫ್ಲೆಕ್ಸ್ನಲ್ಲಿ ಶಿವಮೊಗ್ಗ ನಗರ ರಾಜಕಾರಣದ ಬಗ್ಗೆ ಸಂದೇಶದಂತೆ ಮೂರು ಸಾಲುಗಳನ್ನ ಬರೆಯಲಾಗಿದ್ದು, ಅದನ್ನ ಯಾರ ವಿರುದ್ಧ ಬರೆಯಲಾಗಿದೆ ಎಂಬುದು ಜನಮಾನಸದಲ್ಲಿ ಚರ್ಚೆಯಾಗುತ್ತಿದೆ. ಇನ್ನೂ ಈ ಸಲ ತಮ್ಮ ಸ್ಪರ್ಧೆ ಖಚಿತ ಎಂದು ಆಯನೂರು ಮಂಜುನಾಥ್ರವರು ಈಗಾಗಲೇ ಹೇಳಿದ್ದು, ಈ ಬಗ್ಗೆ ಮಲೆನಾಡು ಟುಡೆ ಸುದ್ದಿ ಮಾಡಿತ್ತು.
ಇನ್ನೂ ಆಯನೂರು ಮಂಜುನಾಥ್ ಅಭಿಮಾನಿಗಳ ಈ ಫ್ಲೆಕ್ಸ್ ರಾಜಕಾರಣಕ್ಕೆ ಇಲ್ಲಿವರೆಗೂ ನಾಯಕರು ಮೌನವಹಿಸಿದ್ಧಾರೆ ಬಿಟ್ಟರೆ, ಪ್ರತಿಕ್ರಿಯಿಸುವ ಮನಸ್ಸು ಮಾಡಿಲ್ಲ. ಇದೀಗ ಹಾಲಿ ಶಾಸಕರ ಅಭಿಮಾನಿಗಳು ಪಕ್ಷಕ್ಕಾಗಿ ದುಡಿದವರ ವಿರುದ್ಧ ಅವಹೇಳನ ಸರಿಯಲ್ಲ, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsSoldierAyanur Manjunath, KS Eshwarappa, BJP Shivamogga, Shivamogga City Constituency, Shivamogga City Assembly Constituency, Flex Politics, Flex,ಆಯನೂರು ಮಂಜುನಾಥ್, ಕೆ.ಎಸ್.ಈಶ್ವರಪ್ಪ, ಬಿಜೆಪಿ ಶಿವಮೊಗ್ಗ , ಶಿವಮೊಗ್ಗ ನಗರ ಕ್ಷೇತ್ರ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ, ಫ್ಲೆಕ್ಸ್ ರಾಜಕಾರಣ, ಫ್ಲೆಕ್ಸ್, ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ