ದೂರುಕೊಟ್ಟ ಪ್ರೇತಾತ್ಮಗಳು! ಶಾಮನೂರು ಒಳಹೊಡೆತ! ಆಯನೂರು ಮಂಜುನಾಥ್​ರವರ ಎರಡು ಮಾತು!

Shivamogga | Jan 31, 2024 | Ayanur Manjunath  ಕುವೆಂಪು ವಿವಿ ಅವ್ಯವಸ್ಥೆಯ ಬಗ್ಗೆ ಸುದ್ದಿಗೋಷ್ಟಿ ಕರೆದು ಮಾತನಾಡಿದ ಆಯನೂರು ಮಂಜುನಾಥ್​  ನನ್ನ ವಿರುದ್ಧ ದೂರು ಕೊಡುವ ಪ್ರೇತಾತ್ಮಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ. 

ಇತ್ತೀಚೆಗೆ ಆಯನೂರು ಮಂಜುನಾಥ್ ರವರ ವಿರುದ್ದ ಜಿಲ್ಲಾ ಕಾಂಗ್ರೆಸ್​ಗೆ ದೂರು ಸಲ್ಲಿಕೆಯಾಗಿತ್ತು. ಆ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿಜವಾಗಿಯೂ ದೂರು ಕೊಡಬೇಕಾದದ್ದು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಹೇಳಿದವರ ಬಗ್ಗೆ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಗೆ ದೂರು ಕೊಡಲು ಇವರಿಗೆ ತಾಕತ್ತಿಲ್ಲ. ನನ್ನ ಬಗ್ಗೆ ದೂರು ಕೊಡಲು ಹೋಗಿದ್ದಾರೆ. 

ಅವರಿಗೆ ಅವಮಾನ ಮಾಡುವಂತಹ ಮಾತನ್ನು ನಾನು ಆಡಿಲ್ಲ. ಹೈಕಮಾಂಡ್ ನನಗೆ ನೋಟೀಸ್ ಕೊಟ್ಟರೆ ಉತ್ತರ ನೀಡುತ್ತೇನೆ ಎಂದರು. ಶಾಮನೂರು ಹೇಳಿಕೆ ಕೊಟ್ಟ ವೇದಿಕೆ ಸಮಾರಂಭದ ಅಧ್ಯಕ್ಷತೆ ವಹಿಸಿದವರು, ಅಲ್ಲಿಯೇ ಉತ್ತರ ನೀಡಬಹುದಿತ್ತು. ನಂತರವಾದರೂ ಉತ್ತರ ನೀಡಬಹುದಿತ್ತು. ಅವರು ಬಾಯಿಯೇ ಬಿಡಲಿಲ್ಲ

ಹಿರಿಯ ಶಾಸಕ, ಕಾಂಗ್ರೆಸ್ ಮುಖಂಡರಾದ ಶಾಮನೂರು ಶಿವಶಂಕರಪನವರು ಬಿ.ವೈ.ರಾಘವೇಂದ್ರ ಅವರನ್ನು ದಾವಣಗೆರೆ ಲೋಕಸಭಾ ತಮ್ಮ ಕ್ಷೇತ್ರದಲ್ಲಿ ಹೆಚ್ಚು ಕೆಲಸವನ್ನು ಅಭಿವೃದ್ಧಿಯನ್ನು ಮಾಡಿಸಿಕೊಳ್ಳಲಿ ಎಂದು ಟೀಕಿಸಿದ ಆಯನೂರು ಮಂಜುನಾಥ್​  ಅವರು ತುಂಬ ಚಾಣಾಕ್ಷ ರಾಜಕಾರಣಿ, ಹಿರಿಯರು ಅವರ ಬಗ್ಗೆ ಅಪಾರ ಗೌರವವಿದೆ. ನಾವಿಬ್ಬರು ಒಟ್ಟಿಗೆ ಲೋಕಸಭೆಗೆ ಪ್ರವೇಶ ಪಡೆದಿದ್ದೆವು. ಸಂದರ್ಭವನ್ನು ನೋಡಿಕೊಂಡು ಮಾತನಾಡಿದ್ದಾರೆ ಎಂದಿದ್ದಾರೆ. 

ಅಲ್ಲದೆ ಅವರಿಂದ ತುರ್ಯವಾಗಿದೆ ನಿಜ. ಮತ್ತೊಂದು ರೀತಿಯಲ್ಲಿ ಕಾಂಗ್ರೆಸ್‌ಗೆ ಲಾಭವು ಆಗಿದೆ. ಶಾಮನೂರು ಅವರು ಬಿಜೆಪಿಗೆ ಒಳಹೊಡೆತ. ಹೊಡಿದ್ದಿದ್ದಾರೆ ಎಂದು ಒಗಟಾಗಿ ಮಾತನಾಡಿದ್ದಾರೆ. 


Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು