ಶಾಸಕಿ ಶಾರದಾ ಪೂರ್ಯ್​ ನಾಯ್ಕ್​ ಕಚೇರಿ ಉದ್ಘಾಟನೆ ವೇಳೆ ಸಿಟ್ಟಾದ ಆಯನೂರು ಮಂಜುನಾಥ್​ ! ಅವರ ಭಾಷಣಕ್ಕೆ ಅಡ್ಡಿ ಮಾಡಿದ್ಯಾರು? ನಡೆದಿದ್ದೇನು?

Ayanur Manjunath gets angry while inaugurating MLA Sharada Pury Naik's office Who obstructed his speech? What happened?

ಶಾಸಕಿ ಶಾರದಾ ಪೂರ್ಯ್​ ನಾಯ್ಕ್​ ಕಚೇರಿ ಉದ್ಘಾಟನೆ ವೇಳೆ ಸಿಟ್ಟಾದ ಆಯನೂರು ಮಂಜುನಾಥ್​ ! ಅವರ ಭಾಷಣಕ್ಕೆ ಅಡ್ಡಿ ಮಾಡಿದ್ಯಾರು? ನಡೆದಿದ್ದೇನು?

KARNATAKA NEWS/ ONLINE / Malenadu today/ Jun 7, 2023 SHIVAMOGGA NEWS

ಶಿವಮೊಗ್ಗ/  ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ  ಪೂರ್ಯ ನಾಯ್ಕರ್​ರವರ ಕಚೇರಿ ಉದ್ಘಾಟನೆ ವೇಳೆಯಲ್ಲಿ ಆಯನೂರು ಮಂಜುನಾಥ್​ರವರ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ. 

ಆಯನೂರು ಮಂಜುನಾಥ್​ರ ಮಾತಿಗೆ ಅಡ್ಡಿ

ಜೆಡಿಎಸ್​ನಿಂದ ಶಿವಮೊಗ್ಗ ನಗರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ್ದ ಆಯನೂರು ಮಂಜುನಾಥ್​ರವರು ಇವತ್ತು ಆಹ್ವಾನದ ಮೇರೆಗೆ ಶಾರದಾ ಪೂರ್ಯ ನಾಯ್ಕ್​ರವರ ಕಚೇರಿ ಉದ್ಘಾಟನೆಗೆ ತೆರಳಿದ್ದರು. ಈ ವೇಳೆಯಲ್ಲಿ ಅವರು ಮಾತನಾಡಲು ಆರಂಭಿಸಿದ ಕೆಲ ಕ್ಷಣದ ಬೆನ್ನಲ್ಲೆ ಕಾರ್ಯಕರ್ತನೊಬ್ಬ ಬಹಳಷ್ಟು ಜನರು ಕಾಯುತ್ತಿದ್ದಾರೆ ಎಂದಿದ್ದಾನೆ. ಇದಕ್ಕೆ ಸಿಡಿಮಿಡಿಗೊಂಡ ಆಯನೂರು ಮಂಜುನಾಥ್​   ಬೇರೆಯವರು ಕಾಯ್ತಾ ಇದಾರೆ ಎಂದರೆ ಏನು ಅರ್ಥ! ನಿಲ್ಲಿಸು ಎಂದು ಅರ್ಥ ಅಲ್ಲವಾ ! ನೀನೆ ಬಂದು ಭಾಷಣ ಮಾಡು ಎಂದರು. ಅಲ್ಲದೆ ಇಂತಹವರಿಂದ ಪಕ್ಷ ಹಾಳಾಗುವುದು ಎಂದ ಆಯನೂರು ಸಿಟ್ಟಾದರು. ಅಷ್ಟರಲ್ಲಿ ಉಳಿದ ಕಾರ್ಯಕರ್ತರು, ಅಲ್ಲಿ ಮಾತನಾಡಿದ್ದ ಕಾರ್ಯಕರ್ತನನ್ನ ಸಮಾರಂಭದಿಂದ ಆಚೆಗೆ ಕರೆದುಕೊಂಡು ಹೋದರು. ಇನ್ನೂ ಶಾಸಕಿ ಶಾರದಾ ಪೂರ್ಯ ನಾಯ್ಕ್​ರವರು, ಆಯನೂರು ಮಂಜುನಾಥ್​ರಿಗೆ ಎದುರಾದ ಸನ್ನಿವೇಶಕ್ಕೆ ಕ್ಷಮೆ ಕೋರಿದರು.  

17 ರ ಬಾಲಕಿಗೆ ಮೇಲೆ ಲೈಂಗಿಕ ದೌರ್ಜನ್ಯ! ಆರೋಪಿಗೆ ಕೋರ್ಟ್ ಕೊಟ್ಟ ಶಿಕ್ಷೆ ಎನು ಗೊತ್ತಾ?

ಶಿವಮೊಗ್ಗ / ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ಸಂಬಂಧ ಶಿವಮೊಗ್ಗ  The Addl District and Sessions Court, FTSC–II (POCSO) Shivamogga ನ್ಯಾಯಾಲಯ  ಆರೋಪಿಗಗೆ 20 ವರ್ಷ ಶಿಕ್ಷೆ ವಿಧಿಸಿದೆ. 

ಪ್ರಕರಣವೇನು?

2020 ನೇ ಸಾಲಿನಲ್ಲಿ ದಾಖಲಾದ ಕೇಸ್ ಇದಾಗಿದೆ.  ಭದ್ರಾವತಿ ತಾಲ್ಲೂಕಿನ 21 ವರ್ಷದ ವ್ಯ , 17 ವರ್ಷದ ಬಾಲಕಿ ಮೇಲೆ  ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಸಂಬಂಧ ಭದ್ರಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. 

ಚಾರ್ಜ್​ಶೀಟ್​ ಸಲ್ಲಿಸಿದ್ದ ಪೊಲೀಸರು!

ಈ ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಮಂಜುನಾಥ್  ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದರು. ಇನ್ನೂ ಕೇಸ್​ನ ಪರವಾಗಿ ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ವಾದ ಮಂಡಿಸಿದ್ದರು. 

20 ವರ್ಷ ಶಿಕ್ಷೆ

ಸದ್ಯ ಕೇಸ್​ನ ವಿಚಾರಣೆ ಮುಗಿದಿದ್ದು, The Addl District and Sessions Court, FTSC–II (POCSO) Shivamogga ನ್ಯಾಯಾಲಯ ದಿನಾಂಕ 06-06-2023 ರಂದು ಆರೋಪಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 1,10,000 /- ರೂ ದಂಡ, ದಂಡವನ್ನು ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 06 ತಿಂಗಳು ಸಾಧಾ ಕಾರಾವಾ ಶಿಕ್ಷೆ ವಿಧಿಸಿ  ಆದೇಶ ನೀಡಿದ್ಧಾರೆ. 

ಯಾರು ಸೂಡಾ ಅಧ್ಯಕ್ಷರು? ಯಾರು ಮುಂದಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷರು? ಶಿವಮೊಗ್ಗದ ಪ್ರಮುಖ ಹುದ್ದೆಗಾಗಿ ಬೆಂಗಳೂರಿನಲ್ಲಿಯೇ ಜೋರು ಪೈಪೋಟಿ! ಟಿಕೆಟ್ ತಂತ್ರಗಾರಿಕೆ ಮತ್ತೆ ಗೆಲ್ಲುತ್ತಾ?