ಸಾಗರ-ತಾಳಗುಪ್ಪ ನಡುವೆ ಭೀಕರ ಬೈಕ್​ ಆಕ್ಸಿಡೆಂಟ್! ಶಿರಸಿ ಮೂಲದ ಓರ್ವನ ಸಾವು!

KARNATAKA NEWS/ ONLINE / Malenadu today/ Jun 8, 2023 SHIVAMOGGA NEWS

ಸಾಗರ/ ತಾಲ್ಲೂಕಿನ ಕಾನ್ಲೆ ಕ್ರಾಸ್ ಬಳಿಯಲ್ಲಿ ಎರಡು ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದಾರೆ. 

ಯಾರು ಸೂಡಾ ಅಧ್ಯಕ್ಷರು? ಯಾರು ಮುಂದಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷರು? ಶಿವಮೊಗ್ಗದ ಪ್ರಮುಖ ಹುದ್ದೆಗಾಗಿ ಬೆಂಗಳೂರಿನಲ್ಲಿಯೇ ಜೋರು ಪೈಪೋಟಿ! ಟಿಕೆಟ್ ತಂತ್ರಗಾರಿಕೆ ಮತ್ತೆ ಗೆಲ್ಲುತ್ತಾ?

 ಹೇಗಾಯ್ತು ಘಟನೆ

ತಾಳಗುಪ್ಪ-ಸಾಗರ ರಸ್ತೆ ನಡುವಲ್ಲಿ ನಿನ್ನೆ ಸಂಜೆ  06:50 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಎರಡು ಬೈಕ್​ಗಳು ಪರಸ್ಪರ ಡಿಕ್ಕಿಯಾಗಿದ್ದು, ಶಿರಸಿ ಮೂಲದ ಮಣಿ ಎಂಬ ಯುವಕ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ಧಾನೆ. ಆತನು ಸಹ ಶಿರಸಿ ಮೂಲದ ಮಂಜುನಾಥ್​ ಎನ್ನಲಾಗಿದ್ದು, ಆತನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಬೈಕ ಸವಾರನಿಗೂ ಗಾಯಗಳಾಗಿದ್ದು, ಆತನನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

Leave a Comment