ATM ನಲ್ಲಿ ಜನರನ್ನ ಯಾಮಾರಿಸಿ ದುಡ್ಡು ಹೇಗೆ ಎಗರಿಸ್ತಾರೆ ಗೊತ್ತಾ! ಇಲ್ಲಿದೆ ನೋಡಿ ಸಾಗರ ಕೇಸ್‌!

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 12, 2025 ‌‌ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಪೊಲೀಸರು ಉತ್ತರ ಪ್ರದೇಶ ಹಾಗೂ ಹರಿಯಾಣದ ಕ್ರೈಂಕೋರರನ್ನು ಅರೆಸ್ಟ್‌ ಮಾಡಿದ್ದಾರೆ. ಈ ಮೂಲಕ ಎಟಿಎಂ ಫ್ರಾಡ್‌ ಕೇಸ್‌ ಹಾಗೂ ಕಳ್ಳತನದ ಪ್ರಕರಣಗಳನ್ನು ಭೇದಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿವೈಎಸ್‌ಪಿ ಜಿಟಿ ನಾಯ್ಕ್‌, ಜನರು ಜಾಗ್ರತೆ ವಹಿಸುವ ಕುರಿತಾಗಿ ಕೆಲವೊಂದು ಸಲಹೆಗಳನ್ನು ಸಹ ನೀಡಿದ್ದಾರೆ. 

- Advertisement -

ಸಾಗರ ತಾಲ್ಲೂಕು ಪೊಲೀಸ್‌ 

ಸಾಗರ ಪೊಲೀಸರು ಕಾರ್ಗಲ್‌ ಪೊಲೀಸ್‌ ಠಾಣೆಗೆ ಸಂಬಂಧಿಸಿದ ATM FRAUD ಪ್ರಕರಣವೊಂದರಲ್ಲಿ ಉತ್ತರಪ್ರದೇಶ ಹಾಗೂ ಹರಿಯಾಣದ ಇಬ್ಬರು ಕುಖ್ಯಾತ ಆರೋಪಿಗಳನ್ನ ಬಂಧಿಸಿ ಕರೆತಂದಿದ್ದಾರೆ. ಇವರಿಬ್ಬರು ಶಿರಾಳಕೊಪ್ಪ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿಯು ATM FRAUD ಕೇಸ್‌ ಮಾಡಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

ಎಟಿಎಂಗಳಲ್ಲಿ ಹಣ ಬಿಡಿಸಿಕೊಂಡು ಬರುವ ಜನರು ಹಣ ಬಿಡಿಸುವಾಗ ಜಾಗ್ರತೆ ವಹಿಸಬೇಕು. ಮೂರನೇ ವ್ಯಕ್ತಿ ಮಧ್ಯಪ್ರವೇಶ ಮಾಡಲು ಅವಕಾಶ ನೀಡಬಾರದು. ನೀವು ಹಣ ಬಿಡಿಸಿಕೊಳ್ಳುವಾಗ ಅದನ್ನು ಇನ್ನೊಬ್ಬರು ಗಮನಿಸುವುದನ್ನು ಅವೈಡ್‌ ಮಾಡಬೇಕು ಎಂದು ತಿಳಿಸಿದರು.

ಜಿಟಿ ನಾಯ್ಕ್‌, ಸಾಗರ ಡಿವೈಎಸ್‌ಪಿ,

ಎಟಿಎಂನಲ್ಲಿ ಹಣ ಹೇಗೆ ಎಗರಿಸುತ್ತಾರೆ ಗೊತ್ತಾ

ಎಟಿಎಂ ‍ಫ್ರಾಡ್‌ ಕೇಸ್‌ ಹೇಗೆ ನಡೆಯುತ್ತದೆ ಎನ್ನುವುದನ್ನು ವಿವರಿಸಿದ ಸಾಗರ ಡಿವೈಎಸ್‌ಪಿಯವರು, ಎಟಿಎಂ ನಲ್ಲಿ ಹಣ ಬಿಡಿಸುವ ವ್ಯಕ್ತಿಗಳನ್ನ ಗಮನಿಸಿ ಇಂತಹ ಕೃತ್ಯವನ್ನು ಎಸೆಗುತ್ತಾರೆ. ಗ್ರಾಹಕರೊಬ್ಬರು ಎಟಿಎಂನಲ್ಲಿ ಹಣ ಬಿಡಿಸುವುದನ್ನ ಗಮನಿಸುವ ಕಳ್ಳರು, ಅವರು ದಾಖಲಿಸುವ ಪಿನ್‌ ನಂಬರ್‌ನ್ನು ಗೊತ್ತು ಮಾಡಿಕೊಳ್ಳುತ್ತಾರೆ. ಆನಂತರ ಹಣ ಬಿಡಿಸಿದ ವ್ಯಕ್ತಿ ಹೊರಕ್ಕೆ ಬರುತ್ತಲೇ ಅವರಿಗೆ, ನೀವು ಹಣ ಬಿಡಿಸಿದ ಬಳಿಕವೂ ಎಟಿಎಂನ ಸ್ಕೀನ್‌ ಇನ್ನೂ ಆಫ್‌ ಆಗಿಲ್ಲ ನೋಡಿ, ಹಾಗೆ ಬಿಟ್ಟರೇ ಬೇರೆ ಯಾರಾದರೂ ದುಡ್ಡು ತೆಗೆದುಕೊಂಡು ಹೋಗುತ್ತಾರೆ ಎಂದು ಹೆದರಿಸುತ್ತಾರೆ. ಅದನ್ನು ತಾವೇ ಸರಿಮಾಡಿಕೊಡುವ ನೆಪದಲ್ಲಿ ಗ್ರಾಹಕರ ಕಾರ್ಡ್‌ ಪಡೆಯುತ್ತಾರೆ. ಕೆಲವೇ ಕ್ಷಣಗಳಲ್ಲಿ ಆ ಮೊದಲೇ ತಮ್ಮ ಬಳಿ ಇಟ್ಟುಕೊಂಡಿದ್ದ ಕಾರ್ಡ್‌ನ್ನು ಗ್ರಾಹಕರಿಗೆ ಕೊಟ್ಟು, ಗ್ರಾಹಕನ ಕಾರ್ಡ್‌ನ್ನ ತಾವು ಇಟ್ಟುಕೊಳ್ಳುತ್ತಾರೆ. ಬಳಿಕ ಕೆಲವೇ ಹೊತ್ತಿನಲ್ಲಿ ಗ್ರಾಹಕರ ಅಕೌಂಟ್‌ನಿಂದ ಹಣ ಬಿಡಿಸಿಕೊಂಡು ಎಸ್ಕೇಪ್‌ ಆಗುತ್ತಾರೆ. 

ಮನೆ ಭೀಗ ಮತ್ತು ಕಳ್ಳನ ಕಥೆ 

ಹೀಗೆ ನಡೆದಿದ್ದ ಪ್ರಕರಣದಲ್ಲಿ ತಮ್ಮ ಪೊಲೀಸ್‌ ತಂಡ ದೂರದ ಹರಿಯಾಣ, ಉತ್ತರಪ್ರದೇಶಕ್ಕೆ ಹೋಗಿ ಆರೋಪಿಯಗಳನ್ನು ಅರೆಸ್ಟ್‌ ಮಾಡಿಕೊಂಡು ಬಂದಿದೆ ಎಂದು ತಿಳಿಸಿದ ಜಿಟಿ ನಾಯ್ಕ್‌ರವರು ಇದು ಸಣ್ಣ ಸಾಧನೆಯಲ್ಲ ಎಂದಿದ್ದಾರೆ. ಇದೇ ವೇಳೆ ಸಾಗರ ಟೌನ್‌ ಠಾಣೆಗೆ ಸಂಬಂಧಿಸಿದ ತಾಳಿ ಕಳ್ಳತನದ ಪ್ರಕರಣದ ಮಾಹಿತಿ ನೀಡಿದ ಅವರು, ಮನೆ ಹಾಗೂ ದೇಗುಲ ಹಾಗೂ ಇತರೇ ಸ್ಥಳಗಳಲ್ಲಿ ಕಳ್ಳತನವಾಗಲು ಕೆಲವೊಮ್ಮೆ ಅಳವಡಿಸುವ ದೊಡ್ಡ ದೊಡ್ಡ ಭೀಗವೂ ಕಾರಣವಾಗಬಹುದು, ಮನೆಯೊಂದರ ಬಾಗಿಲಿಗೆ ದೊಡ್ಡ ಭೀಗವನ್ನು ಅಳವಡಿಸಿದಾಗ ಅದು ಕಳ್ಳರನ್ನು ಅಟ್ರಾಕ್ಟ್‌ ಮಾಡುವ ಸಾಧ್ಯತೆಗಳಿರುತ್ತದೆ ಎಂದರು.

SUMMARY  | sagara town police shivamogga 

KEY WORDS | sagara town police shivamogga 

Share This Article
Leave a Comment

Leave a Reply

Your email address will not be published. Required fields are marked *